AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

32 ಸಾವಿರ ಮಂದಿ ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ ಪ್ರತಿಷ್ಠಿತ Walt Disney ಕಂಪನಿ

ಈ ಹಿಂದೆ 28 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಹೇಳಿದ್ದ ವಾಲ್ಟ್ ಡಿಸ್ನಿ ಕಂಪೆನಿಯು ಇದೀಗ ಸಂಖ್ಯೆಯನ್ನು 32 ಸಾವಿರಕ್ಕೆ ಏರಿಸಿಕೊಂಡಿದೆ. ಈ ಹಿಂದೆ 28 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಹೇಳಿದ್ದ ವಾಲ್ಟ್ ಡಿಸ್ನಿ ಕಂಪೆನಿಯು ಇದೀಗ ಸಂಖ್ಯೆಯನ್ನು 32 ಸಾವಿರಕ್ಕೆ ಏರಿಸಿಕೊಂಡಿದೆ. ಸಂಸ್ಥೆಯಲ್ಲಿ ಒಟ್ಟು 2 ಲಕ್ಷದ 23 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಸ್ನಿಯ ಇತ್ತೀಚೆಗಿನ ವಾರ್ಷಿಕ ವರದಿಯಲ್ಲಿ ಹೇಳಲಾಗಿತ್ತು.

32 ಸಾವಿರ ಮಂದಿ ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ ಪ್ರತಿಷ್ಠಿತ Walt Disney ಕಂಪನಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 16, 2026 | 6:39 PM

Share

ಕೊರೊನಾ ಸಾಂಕ್ರಾಮಿಕ ರೋಗವು ವಿಶ್ವದೆಲ್ಲೆಡೆ ವ್ಯಾಪಿಸಿದ್ದು, ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ. ಕೊವಿಡ್​ನಿಂದ ಉಂಟಾದ ತೊಂದರೆಗಳಿಗೆ, ಅಮೆರಿಕಾ ಮೂಲದ ಸಮೂಹ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶ್ರೀಮಂತ ಸಂಸ್ಥೆಯೂ ಹೊರತಾಗಿಲ್ಲ. ಅಲ್ಲಿನ 32 ಸಾವಿರ ಮಂದಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಹಿಂದೆ 28 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಹೇಳಿದ್ದ ವಾಲ್ಟ್ ಡಿಸ್ನಿ ಕಂಪೆನಿಯು ಇದೀಗ ಸಂಖ್ಯೆಯನ್ನು 32 ಸಾವಿರಕ್ಕೆ ಏರಿಸಿಕೊಂಡಿದೆ. ಸಂಸ್ಥೆಯಲ್ಲಿ ಒಟ್ಟು 2 ಲಕ್ಷದ 23 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಸ್ನಿಯ ಇತ್ತೀಚೆಗಿನ ವಾರ್ಷಿಕ ವರದಿಯಲ್ಲಿ ಹೇಳಲಾಗಿತ್ತು.

ದೂರದರ್ಶನ ಮತ್ತು ಸಿನಿಮಾ ನಿರ್ಮಾಣದ ವೆಚ್ಚದಲ್ಲಿ ಕಡಿತ? ಮುಂದಿನ ದಿನಗಳಲ್ಲಿ ಡಿವಿಡೆಂಡ್, ನಿವೃತ್ತಿ ವೇತನ ಮತ್ತು ನಿವೃತ್ತಿ ಬಳಿಕದ ವೈದ್ಯಕೀಯ ಭತ್ಯೆಗಳನ್ನು ಕಡಿತಗೊಳಿಸುವ ಬಗ್ಗೆಯೂ ಸುಳಿವು ನೀಡಿರುವ ವಾಲ್ಟ್ ಡಿಸ್ನಿ, ದೂರದರ್ಶನ ಮತ್ತು ಸಿನಿಮಾ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದೂ ಹೇಳಲಾಗಿದೆ. ಒಂದಷ್ಟು ನಿರ್ಧಾರಗಳು ತಮ್ಮ ವಹಿವಾಟಿನ ಮೇಲೆ ಋಣಾತ್ಮಕ ಬೀರುವ ಸಾಧ್ಯತೆಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಪಾರ್ಕ್ ವ್ಯವಹಾರದಲ್ಲಿ ಹಿನ್ನಡೆ ವಾಲ್ಟ್ ಡಿಸ್ನಿಯು ಪಾರ್ಕ್​ ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಿದ್ದು, ಅಮೆರಿಕಾದ ಸುಮಾರು 1 ಲಕ್ಷ ನೌಕರರು ಸಂಕಷ್ಟದಲ್ಲಿದ್ದಾರೆ. ‘ಬ್ಲಾಕ್ ವಿಡೊ’ದಂಥ ಪ್ರಮುಖ ಸಿನಿಮಾಗಳು ಕೂಡ ತೆರೆಕಾಣುವ ಸೂಚನೆಗಳು ಇಲ್ಲದಿರುವುದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ಅಬಿಗೈಲ್ ಡಿಸ್ನಿ ವಿರೋಧ ಡಿಸ್ನಿ ಕಂಪೆನಿ ಸಂಸ್ಥಾಪಕ ರಾಯ್ ಒ. ಡಿಸ್ನಿ ಮೊಮ್ಮಗಳು, ಅಬಿಗೈಲ್ ಡಿಸ್ನಿ ಮತ್ತು US ಸೆನೇಟರ್ ಎಲಿಜಬೆತ್ ವಾರೆನ್ ಈ ಕೃತ್ಯವನ್ನು ಖಂಡಿಸಿದ್ದು, ದೂರದೃಷ್ಟಿ ಇಲ್ಲದ ನಿರ್ಧಾರವಿದು ಎಂದು ಹೇಳಿದ್ದಾರೆ.

OTT ವೇದಿಕೆಯತ್ತ ಹೆಚ್ಚು ಗಮನ? ಸದ್ಯ, ಡಿಸ್ನಿ ಸಂಸ್ಥೆಯ ಪಾರ್ಕ್​ಗಳು ನಷ್ಟ ಅನುಭವಿಸುತ್ತಿದ್ದು, ಡಿಸ್ನಿ ಪ್ಲಸ್ OTT ವೇದಿಕೆಯು ಲಾಭದ ಭಾಗವಾಗಿ ಗೋಚರಿಸಿದೆ.

ಈ ವರ್ಷದ ಆರಂಭದಿಂದ ಸಪ್ಟೆಂಬರ್ 30ರ ವರೆಗೆ 2.8 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವ ಸಂಸ್ಥೆಯು, ಕಳೆದ ವರ್ಷ ಇದೇ ಸಮಯದಲ್ಲಿ 10.4 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು.

Published On - 5:56 pm, Wed, 2 December 20

Follow Us
TV9 Web
TV9 Web

TV9 Kannada

Read More
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ