ಅಕ್ರಮ ತ್ವರಿತ ಸ್ಮಾರ್ಟ್‌ಫೋನ್ ಆಧಾರಿತ ಸಾಲಗಳ ವಿರುದ್ಧ ಅಖಾಡಕ್ಕೆ ಇಳಿದಿದ್ದ ಜಾರಿ ನಿರ್ದೇಶನಾಲಯವು ಇದೀಗ ತನಿಖೆಯ ಮುಂದುವರಿದ One 97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ Paytm ಮತ್ತು ಪಾವತಿ ಪರಿಹಾರಗಳನ್ನು ಒದಗಿಸುವ PayUಗೆ ಸಂಬಂಧಿಸಿದ ಕೆಲವು ಆವರಣಗಳಲ್ಲಿ ಪರಿಶೀಲನೆ ನಡೆಸಿದೆ ಎಂದು ವರದಿಯಾಗಿದೆ. ಇತ್ತೀಚಗೆ ಆನ್‌ಲೈನ್ ಪಾವತಿ ಗೇಟ್‌ವೇಗಳಾದ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀ ಪಾವತಿಗಳ ಬೆಂಗಳೂರಿನ ಆವರಣದಲ್ಲಿ ಇಡಿ ದಾಳಿ ನಡೆಸಿತ್ತು. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ 6 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ. ಚೀನಿ ಪ್ರಜೆಗಳ ಮಾಲೀಕತ್ವದಲ್ಲಿರುವ ಕಂಪನಿಗಳು ನಡೆಸುತ್ತಿರುವ ಮೋಸಜಾಲಕ್ಕೆ ಸಂಬಂಧಿಸಿದಂತೆ ಇಡಿ ನಡೆಸುತ್ತಿರುವ ತನಿಖೆಯ ಭಾಗವಾಗಿ ಅಧಿಕಾರಿಗಳು ಈ ಕಂಪನಿಗಳ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ ಎಂದು ವರಿದಿಯಾಗಿತ್ತು.