ಅಕ್ಟೋಬರ್‌ನಲ್ಲಿ ಎಂಜಿನಿಯರಿಂಗ್ ರಫ್ತು ಶೇ.36 ಏರಿಕೆ: 12.74 ಶತಕೋಟಿ ಡಾಲರ್ ತಲುಪಿದ ರಫ್ತು ಮೌಲ್ಯ

ಅಕ್ಟೋಬರ್ ತಿಂಗಳಲ್ಲಿ ಭಾರತದ ಎಂಜಿನಿಯರಿಂಗ್ ಸರಕುಗಳ ರಫ್ತು ಪ್ರಮಾಣದಲ್ಲಿ ಭಾರಿ ಏರಿಕೆ ಆಗಿದೆ ಎಂದು ಇಇಪಿಸಿ ಇಂಡಿಯಾದ ವರದಿಯಲ್ಲಿ ತಿಳಿಸಲಾಗಿದೆ. ಲೋಹ, ಎಲೆಕ್ಟ್ರಿಕಲ್ ಯಂತ್ರೋಪಕರಣ ಮತ್ತು ವಾಹನಗಳ ರಫ್ತು ವೃದ್ಧಿಯಿಂದ ಅಕ್ಟೋಬರ್ 2026ರಲ್ಲಿ ಭಾರತದ ಎಂಜಿನಿಯರಿಂಗ್ ಸರಕುಗಳ ರಫ್ತು ವಾರ್ಷಿಕವಾಗಿ ಶೇ. 36ರಷ್ಟು ಹೆಚ್ಚಾಗಿ 12.74 ಶತಕೋಟಿ ಡಾಲರ್‌ಗೆ ತಲುಪಿದೆ.

ಅಕ್ಟೋಬರ್‌ನಲ್ಲಿ ಎಂಜಿನಿಯರಿಂಗ್ ರಫ್ತು ಶೇ.36 ಏರಿಕೆ: 12.74 ಶತಕೋಟಿ ಡಾಲರ್ ತಲುಪಿದ ರಫ್ತು ಮೌಲ್ಯ
ಎಂಜಿನಿಯರಿಂಗ್ ಸರಕು
Image Credit source: Getty Images

Updated on: Nov 24, 2026 | 3:16 PM

ನವದೆಹಲಿ, ನವೆಂಬರ್ 24: ಅಕ್ಟೋಬರ್ ತಿಂಗಳನಲ್ಲಿ ಭಾರತದ ಎಂಜಿನಿಯರಿಂಗ್ ಸರಕುಗಳ ರಫ್ತು 12.74 ಶತಕೋಟಿ ಡಾಲರ್ ಆಗಿದೆ. ಹಿಂದಿನ ವರ್ಷದ ಇದೇ ಅವಧಿಗೆ (9.37 ಶತಕೋಟಿ ಡಾಲರ್) ಹೋಲಿಸಿದರೆ ಈ ಯಂತ್ರೋಪಕರಣಗಳ ಸರಕು ಶೇ. 36ರಷ್ಟು ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ದೇಶದ ಒಟ್ಟು ಸರಕು ರಫ್ತಿನಲ್ಲಿ ಎಂಜಿನಿಯರಿಂಗ್ ವಲಯದ ಪಾಲು ಶೇ. 25.8ರಷ್ಟಿತ್ತು.

2026-27ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಒಟ್ಟು ಅವಧಿಯಲ್ಲಿ ಎಂಜಿನಿಯರಿಂಗ್ ರಫ್ತು ಶೇ. 22ರಷ್ಟು ಬೆಳೆದು 83.62 ಶತಕೋಟಿ ಡಾಲರ್‌ಗೆ ಏರಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 68.54 ಶತಕೋಟಿ ಡಾಲರ್ ಇತ್ತು. ಈ ಏಳು ತಿಂಗಳಲ್ಲಿ ಒಟ್ಟು ಸರಕು ರಫ್ತಿನಲ್ಲಿ ಈ ವಲಯದ ಪಾಲು ಶೇ. 27.1ರಷ್ಟಿದೆ.

Loading...

ಪ್ರಮುಖ ಮಾರುಕಟ್ಟೆಗಳು ಮತ್ತು ವಲಯಗಳ ಕೊಡುಗೆ

ಅಕ್ಟೋಬರ್‌ನಲ್ಲಿ ಭಾರತಕ್ಕೆ ಅಮೆರಿಕ ಅತಿದೊಡ್ಡ ರಫ್ತು ತಾಣವಾಗಿ ಮುಂದುವರಿದಿದೆ. ಅಲ್ಲಿಗೆ ರಫ್ತು ಶೇ. 62ರಷ್ಟು ಹೆಚ್ಚಾಗಿ 2.26 ಶತಕೋಟಿ ಡಾಲರ್ ತಲುಪಿದೆ. ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಅಮೆರಿಕಕ್ಕೆ ರಫ್ತು ಶೇ. 26.1ರಷ್ಟು ಏರಿಕೆಯಾಗಿ 14.4 ಶತಕೋಟಿ ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ: ಎಂಬತ್ತು, ತೊಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಗೋಲ್ಡ್ ಸ್ಪಾಟ್ ಡ್ರಿಂಕ್ ಮರಳಿ ಬರುತ್ತಿದೆ ಮಾರುಕಟ್ಟೆಗೆ

ಅಕ್ಟೋಬರ್‌ನಲ್ಲಿ ಬ್ರಿಟನ್‌ಗೆ ರಫ್ತು ಶೇ. 46.3 (499 ದಶಲಕ್ಷ ಡಾಲರ್), ಚೀನಾಕ್ಕೆ ಶೇ. 88.9 (479 ದಶಲಕ್ಷ ಡಾಲರ್) ಮತ್ತು ಜರ್ಮನಿಗೆ ಶೇ. 33.5ರಷ್ಟು (452.3 ದಶಲಕ್ಷ ಡಾಲರ್) ಏರಿಕೆಯಾಗಿದೆ. ಜೊತೆಗೆ ಸಿಂಗಾಪುರ, ದಕ್ಷಿಣ ಕೊರಿಯಾ, ಮೆಕ್ಸಿಕೋ ಮತ್ತು ಮಲೇಷಿಯಾಗಳಿಗೂ ರಫ್ತು ಗಣನೀಯವಾಗಿ ಹೆಚ್ಚಿದೆ.

ಲೋಹಗಳು, ಎಲೆಕ್ಟ್ರಿಕಲ್ ಯಂತ್ರೋಪಕರಣಗಳು, ವಾಹನಗಳು ಮತ್ತು ಹಡಗುಗಳ ರಫ್ತು ಈ ಬೆಳವಣಿಗೆಗೆ ಪ್ರಮುಖ ಬಲ ನೀಡಿವೆ. ವಿಯೆಟ್ನಾಂ, ಥೈಲ್ಯಾಂಡ್, ಸೌದಿ ಅರೇಬಿಯಾ ಮತ್ತು ಸ್ಪೇನ್‌ಗೆ ರಫ್ತು ಇಳಿಕೆಯಾಗಿದೆ.

ಮುಂದಿನ ಸವಾಲುಗಳು ಮತ್ತು ಕಾರ್ಯತಂತ್ರ

ಹೆಚ್ಚಿನ ಸಂಖ್ಯೆಯ ಪ್ರದೇಶಗಳಲ್ಲಿ ರಫ್ತು ಹೆಚ್ಚಾಗಿದೆ. ಹೆಚ್ಚೆಚ್ಚು ಉತ್ಪನ್ನ ವಿಭಾಗಗಳೂ ಹೆಚ್ಚು ರಫ್ತು ಕಂಡಿವೆ. ಇದರಿಂದ ಈ ಎಂಜಿನಿಯರಿಂಗ್ ಸರಕುಗಳ ರಫ್ತು ಹೆಚ್ಚಳಗೊಳ್ಳಲು ಸಾಧ್ಯವಾಗಿದೆ. ಈಶಾನ್ಯ ಏಷ್ಯಾ, ಆಸಿಯಾನ್ (ASEAN) ಮತ್ತು ಆಫ್ರಿಕಾ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಾಗಿ ಹೊರಹೊಮ್ಮುತ್ತಿವೆ ಎಂದು ಇಇಪಿಸಿ ಇಂಡಿಯಾ ಅಧ್ಯಕ್ಷ ಪಂಕಜ್ ಚಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ? ಸರ್ಕಾರದ ಈ ಅಡ್ವೈಸರಿ ತಪ್ಪದೇ ನೋಡಿ; ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳದಿರಿ

ಮುಂದಿನ ದಿನಗಳಲ್ಲಿ ಆಮದು ಅವಲಂಬನೆಯನ್ನು ತಗ್ಗಿಸುವುದು, ಪೂರೈಕೆದಾರರ ವೈವಿಧ್ಯೀಕರಣ ಹಾಗೂ ಯುರೋಪಿಯನ್ ಯೂನಿಯನ್‌ನ ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಂ (CBAM), ರಕ್ಷಣಾತ್ಮಕ ನೀತಿಗಳು ಮತ್ತು ಲಾಜಿಸ್ಟಿಕ್ಸ್ ಅಡೆತಡೆಗಳನ್ನು ಎದುರಿಸುವ ಮೂಲಕ ಹೆಚ್ಚಿನ ಮೌಲ್ಯದ ರಫ್ತು ಆಧಾರಿತ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us