ಉಮಂಗ್ ಆಪ್
Image Credit source: Getty Images
ಮುಖ್ಯಾಂಶಗಳು
- ಇಪಿಎಫ್‌ಒ ಪೋರ್ಟಲ್ ಅನ್ನು ಅಪ್‌ಗ್ರೇಡ್ ಮಾಡಿ ಮರುಬಿಡುಗಡೆ ಮಾಡಲಾಗಿದೆ.
- ಈ ವೇಳೆ, ಕೆಲ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.
- ಪೋರ್ಟಲ್‌ನಲ್ಲಿ ಯುಎಎನ್ ಆ್ಯಕ್ಟಿವೇಶನ್ ಸಾಧ್ಯವಾಗುವುದಿಲ್ಲ.
ನವದೆಹಲಿ, ಜುಲೈ 5: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಯುನಿಫೈಡ್ ಮೆಂಬರ್ ಪೋರ್ಟಲ್ ಅನ್ನು (Unified Member Portal) ಅಪ್‌ಗ್ರೇಡ್ ಮಾಡಿದೆ. ಇದರ ಬೆನ್ನಲ್ಲೇ ಪಿಎಫ್ (PF) ಸಬ್ಸ್ಕ್ರೈಬರ್ಸ್ಗೆ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ಮುಂದೆ ಇಪಿಎಫ್‌ಒ ವೆಬ್‌ಸೈಟ್ ಪೋರ್ಟಲ್ ಮೂಲಕ ನೇರವಾಗಿ UAN ಆಕ್ಟಿವೇಶನ್ (UAN Activation) ಮಾಡಲು ಅಥವಾ ಹೊಸ UAN ಜನರೇಟ್ (New UAN Generation) ಮಾಡಲು ಸಾಧ್ಯವಿಲ್ಲ. ಈ ಸೇವೆಗಳನ್ನು ವೆಬ್‌ಸೈಟ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅವನ್ನು UMANG ಮೊಬೈಲ್ ಆಪ್‌ಗೆ ವರ್ಗಾಯಿಸಲಾಗಿದೆ. ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವಂಚನೆಗಳನ್ನು ತಡೆಯಲು ಇಪಿಎಫ್‌ಒ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಪ್ರಮುಖ ಬದಲಾವಣೆಗಳು ಮತ್ತು ಹೊಸ ನಿಯಮಗಳು
- ಯುಎಎನ್ ಆ್ಯಕ್ಟಿವೇಶನ್: ಹೊಸ ಉದ್ಯೋಗಿಗಳು ತಮಗೆ ಸಿಕ್ಕ ಯುಎಎನ್ ನಂಬರ್ ಅನ್ನು ಆಕ್ಟಿವೇಟ್ ಮಾಡಲು ಅಥವಾ ಮೊದಲ ಬಾರಿಗೆ ಹೊಸ ಯುಎನ್ ಪಡೆದುಕೊಳ್ಳಲು ಇಪಿಎಫ್‌ಒ ವೆಬ್‌ಸೈಟ್‌ಗೆ ಹೋಗುವಂತಿಲ್ಲ.
- ಮುಖದ ಗುರುತು ಕಡ್ಡಾಯ: ಇನ್ಮುಂದೆ ನೀವು UMANG ಆಪ್ ಮೂಲಕ UAN ಆಕ್ಟಿವೇಟ್ ಅಥವಾ ಜನರೇಟ್ ಮಾಡಬೇಕಾದರೆ ಆಧಾರ್ ಆಧಾರಿತ ‘ಫೇಸ್ ಅಥೆಂಟಿಕೇಶನ್’ (Face Authentication- ಮುಖದ ಸ್ಕ್ಯಾನ್) ಮಾಡುವುದು ಕಡ್ಡಾಯವಾಗಿದೆ. ಕೇವಲ ಆಧಾರ್ ಒಟಿಪಿ (OTP) ಮೂಲಕ ಮಾತ್ರವೇ ಈ ಪ್ರಕ್ರಿಯೆ ಮುಗಿಸಲು ಇನ್ಮುಂದೆ ಸಾಧ್ಯವಾಗುವುದಿಲ್ಲ.
- ಮರೆತುಹೋದ UAN ಪಡೆಯುವುದು ಸುಲಭ: ನಿಮ್ಮ UAN ನಂಬರ್ ಅನ್ನು ನೀವು ಮರೆತಿದ್ದರೆ, ಅದನ್ನು ಇಪಿಎಫ್‌ಒ ಪೋರ್ಟಲ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್/ವಿಳಾಸದ ಪುರಾವೆ ಅಪ್‌ಲೋಡ್ ಮಾಡಿ ಮತ್ತು ಒಟಿಪಿ ಪರಿಶೀಲಿಸುವ ಮೂಲಕ ಸುಲಭವಾಗಿ ಮರಳಿ ಪಡೆಯಬಹುದು (UAN Retrieval).
- ಡೆತ್ ಕ್ಲೈಮ್ ಸೌಲಭ್ಯ: ದುರದೃಷ್ಟವಶಾತ್ ಪಿಎಫ್ ಸದಸ್ಯರು ಮರಣ ಹೊಂದಿದಾಗ ಅವರ ಕುಟುಂಬದವರು ಹಣ ಪಡೆಯಲು ಸಲ್ಲಿಸುವ ಡೆತ್ ಕ್ಲೈಮ್ (Death Claims) ಮತ್ತು ಪೆನ್ಷನ್ ಅರ್ಜಿಗಳನ್ನು ಎಂದಿನಂತೆ ಯುನಿಫೈಡ್ ಪೋರ್ಟಲ್ ವೆಬ್‌ಸೈಟ್ ಮೂಲಕವೇ ಸಲ್ಲಿಸಬೇಕಾಗುತ್ತದೆ. (ಗರಿಷ್ಠ 2MB ಗಾತ್ರದ PDF ದಾಖಲೆಗಳನ್ನು ಮಾತ್ರ ಅಪ್‌ಲೋಡ್ ಮಾಡಬೇಕು).
ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ
UMANG ಆಪ್ ಮೂಲಕ UAN ಆಕ್ಟಿವೇಟ್ ಮಾಡುವುದು ಹೇಗೆ?
- ಹಂತ 1: ನಿಮ್ಮ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ UMANG App ಮತ್ತು ಭಾರತ ಸರ್ಕಾರದ ಅಧಿಕೃತ Aadhaar Face RD App (ಮುಖದ ಸ್ಕ್ಯಾನ್ ಮಾಡಲು ಇದು ಅಗತ್ಯ) ಎರಡನ್ನೂ ಡೌನ್‌ಲೋಡ್ ಮಾಡಿಕೊಳ್ಳಿ.
- ಹಂತ 2: UMANG ಆಪ್ ಓಪನ್ ಮಾಡಿ, ಅದರಲ್ಲಿ ಇಪಿಎಫ್‌ಒ (EPFO) ಸರ್ವಿಸಸ್ ವಿಭಾಗಕ್ಕೆ ಹೋಗಿ.
- ಹಂತ 3: ಅಲ್ಲಿ ಕಾಣಿಸುವ “UAN Services Through Face Auth” ಆಯ್ಕೆಯ ಅಡಿಯಲ್ಲಿ “UAN Activation” (ಹೊಸದಾಗಿ ಕ್ರಿಯೇಟ್ ಮಾಡುವುದಾದರೆ ‘UAN Allotment and Activation’) ಎಂಬುದನ್ನು ಕ್ಲಿಕ್ ಮಾಡಿ.
- ಹಂತ 4: ನಿಮ್ಮ UAN ನಂಬರ್, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಆಗುತ್ತದೆ, ಅದರ ಮೂಲಕ ನಿಮ್ಮ ಮುಖವನ್ನು ಸ್ಕ್ಯಾನ್ (Face Auth) ಮಾಡಿ. ಆಧಾರ್ ಲಿಂಕ್ಡ್ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ ನಿಮ್ಮ UAN ತಕ್ಷಣವೇ ಆಕ್ಟಿವೇಟ್ ಆಗುತ್ತದೆ.
ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ
ಪಿಎಫ್ ಚಂದಾದಾರರಿಗೆ ಕಿವಿಮಾತು: ತಂತ್ರಜ್ಞಾನ ಅಪ್‌ಗ್ರೇಡ್ ಆಗಿರುವುದರಿಂದ ಮೊದಲ ಎರಡು ವಾರಗಳ ಕಾಲ ಆನ್‌ಲೈನ್‌ನಲ್ಲಿ ಕ್ಲೈಮ್ ಸೆಟಲ್‌ಮೆಂಟ್ ಮತ್ತು ಪರಿಶೀಲನೆಗೆ ಎಂದಿಗಿಂತ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಸರ್ವರ್ ದಟ್ಟಣೆ ತಪ್ಪಿಸಲು ಉದ್ಯೋಗದ ಬಿಡುವಿನ ಅವಧಿಯಲ್ಲಿ (Peak Hours ಹೊರತುಪಡಿಸಿ) ಲಾಗಿನ್ ಮಾಡಲು ಪ್ರಯತ್ನಿಸಿ ಮತ್ತು ಒಂದೇ ಅರ್ಜಿಯನ್ನು ಪದೇ ಪದೇ ಸಬ್ಮಿಟ್ ಮಾಡಬೇಡಿ ಎಂದು ಇಪಿಎಫ್‌ಒ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ