
ನವದೆಹಲಿ, ಆಗಸ್ಟ್ 10: ತಮ್ಮ ಮಗಳ ಹೆಸರಲ್ಲಿದ್ದ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು ಖಾತೆ ಮುಚ್ಚಿದ್ದ ತಂದೆಗೆ ದೆಹಲಿ ಹೈಕೋರ್ಟ್ ಆಘಾತ ನೀಡಿದೆ. ಹಿಂಪಡೆದ ಸಂಪೂರ್ಣ ಮೊತ್ತವನ್ನು ಮಗಳಿಗೆ ವಾಪಸ್ ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ಮೊದಲು ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವನ್ನು ದೆಹಲಿ ಉಚ್ಚನ್ಯಾಯಾಲಯ ಎತ್ತಿಹಿಡಿದಿದೆ. ಮಗಳಿಗಾಗಿ ಮಾಡಿದ ಹೂಡಿಕೆಯನ್ನು ಅಪ್ಪನಾದನವನು ತಾನು ವಿತ್ಡ್ರಾ ಮಾಡಿ ತನಗಾಗಿ ಬಳಕೆ ಮಾಡುವಂತಿಲ್ಲ ಎಂಬುವಂತಹ ತೀರ್ಪನ್ನು ಕೋರ್ಟ್ ನೀಡಿದೆ.
1999 ರಲ್ಲಿ ಸುಧೀರ್ ಕವಾತ್ರ ಎಂಬುವವರು ತಮ್ಮ ಅಪ್ರಾಪ್ತ ಮಗಳು ಶ್ಯಾಮ್ಲಿ ಕವಾತ್ರ ಹೆಸರಿನಲ್ಲಿ PPF ಖಾತೆಯನ್ನು ತೆರೆದಿದ್ದರು. ಅದಾದ ಬಳಿಕ ಗಂಡ ಮತ್ತು ಹೆಂಡತಿ ಬೇರೆಯಾಗಿದ್ದಾರೆ. ಶ್ಯಾಮ್ಲಿ ಅವರು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಸುಧೀರ್ ಅವರು ಪತ್ನಿ ಮತ್ತು ಮಗಳಿಗೆ ನಿಯಮಿತವಾಗಿ ಜೀವನಾಂಶ ನೀಡುತ್ತಿದ್ದಾರೆ.
ಇದೇ ವೇಳೆ, 2016 ರಲ್ಲಿ, ಮಗಳ ಶಿಕ್ಷಣ ಮತ್ತು ಯೋಗಕ್ಷೇಮಕ್ಕಾಗಿ ಹಣ ಬಳಸುವುದಾಗಿ ಬ್ಯಾಂಕ್‌ಗೆ ಬರೆದುಕೊಟ್ಟು, ಖಾತೆಯಲ್ಲಿದ್ದ ₹8 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ತಂದೆ ಹಿಂಪಡೆದು ಖಾತೆಯನ್ನು ಕ್ಲೋಸ್ ಮಾಡಿದ್ದರು. 2017ರಲ್ಲಿ ಖಾತೆ ಮೆಚ್ಯೂರ್ ಆಗುವುದಕ್ಕೆ ಮುನ್ನವೇ ಮುಚ್ಚಲಾಗಿತ್ತು.
2017 ರಲ್ಲಿ PPF ಮೆಚ್ಯೂರಿಟಿ ಅವಧಿ ಮುಗಿದಾಗ ಶ್ಯಾಮ್ಲಿ ಬ್ಯಾಂಕ್‌ಗೆ ತೆರಳಿದಾಗ, ಖಾತೆಯಲ್ಲಿದ್ದ ಹಣವನ್ನು ತಂದೆ ಮುಂಚಿತವಾಗಿಯೇ ಹಿಂಪಡೆದಿರುವುದು ಬೆಳಕಿಗೆ ಬಂದಿದೆ. ಪೋಷಕರ ನಡುವಿನ ಕೌಟುಂಬಿಕ ಕಲಹದಿಂದಾಗಿ ತಾಯಿಯೊಂದಿಗೆ ವಾಸಿಸುತ್ತಿದ್ದ ಶ್ಯಾಮ್ಲಿ, ಉನ್ನತ ಶಿಕ್ಷಣದ ವೆಚ್ಚಕ್ಕಾಗಿ ಹಣವಿಲ್ಲದೆ ತೊಂದರೆಗೊಳಗಾಗಿ ತಂದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು.
ಇದನ್ನೂ ಓದಿ: UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ
ಶ್ಯಾಮ್ಲಿ ಅವರು ಮೊದಲು ಹೋಗಿದ್ದ ಜಿಲ್ಲಾ ನ್ಯಾಯಾಲಯದ ಬಳಿ. ಅಲ್ಲಿ ಆಕೆಯ ಪರವಾಗಿ ತೀರ್ಪು ಬಂದಿತು. ವಿತ್ಡ್ರಾ ಮಾಡಲಾದ ಪಿಪಿಎಫ್ ಹಣವೆಲ್ಲವನ್ನೂ ಬಡ್ಡಿಸಮೇತವಾಗಿ (ಶೇ. 8ರ ದರ) ನೀಡುವಂತೆ ಆದೇಶಿಸಿತು. ಇದನ್ನು ಪ್ರಶ್ನಿಸಿ ಸುಧೀರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ಉಚ್ಚ ನ್ಯಾಯಾಲಯ ಕೂಡ ಜಿಲ್ಲಾ ಕೋರ್ಟ್ ಆದೇಶವನ್ನೇ ಎತ್ತಿ ಹಿಡಿದು ತೀರ್ಪು ಕೊಟ್ಟಿತು.
ತಂದೆ ಸುಧೀರ್ ಕವಾತ್ರ ಅವರು, “ನಾನು ಮಗಳು ಮತ್ತು ಆಕೆಯ ತಾಯಿಗೆ ಜೀವನಾಂಶವಾಗಿ (Maintenance) ನೀಡಿದ ಹಣದಲ್ಲಿ ಇದನ್ನು ಸರಿದೂಗಿಸಲಾಗಿದೆ” ಎಂದು ವಾದಿಸಿದ್ದರು. ಆದರೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು ಈ ವಾದವನ್ನು ವಜಾಗೊಳಿಸಿ ಕೆಳಗಿನ ಮುಖ್ಯ ಅಂಶಗಳನ್ನು ಉಲ್ಲೇಖಿಸಿದೆ:
ರಕ್ಷಕನಾಗಿ ಮಾತ್ರ: ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣವು ಆಕೆಗೆ ಮಾತ್ರ ಸೇರಿದ್ದು. ತಂದೆ ಕೇವಲ ಒಬ್ಬ ರಕ್ಷಕನಾಗಿ (Guardian) ಖಾತೆಯನ್ನು ನಿರ್ವಹಿಸಬಹುದೇ ಹೊರತು ಆ ಹಣದ ಮೇಲೆ ಸ್ವಂತ ಹಕ್ಕು ಹೊಂದಲು ಸಾಧ್ಯವಿಲ್ಲ.
ಜೀವನಾಂಶ ಬೇರೆ, ಹೂಡಿಕೆ ಬೇರೆ: ಮಗಳು ಮತ್ತು ಬೇರ್ಪಟ್ಟ ಹೆಂಡತಿಗೆ ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಮಗಳ ಹೆಸರಿನಲ್ಲಿರುವ ಹೂಡಿಕೆಯ ಹಣದೊಂದಿಗೆ ಸರಿದೂಗಿಸಲು (Offset) ಸಾಧ್ಯವಿಲ್ಲ.
ಇದನ್ನೂ ಓದಿ: ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ
ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ನಿಯಮಾವಳಿಗಳ ಪ್ರಕಾರ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ