AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನ ಬೆಲೆ ಹೆಚ್ಚಿಲ್ಲ, ಆದರೂ ದುಬಾರಿಯಾಗುತ್ತಿದೆ ವಿಮಾನ ಪ್ರಯಾಣ; ಕಾರಣ ಇದು

Domestic flight ticket prices: ಭಾರತದ ವೈಮಾನಿಕ ಕ್ಷೇತ್ರದ ಸಂಕಷ್ಟದ ಸರಮಾಲೆ ಮುಂದುವರಿಯುತ್ತಿದೆ. ವಿಮಾನ ಟಿಕೆಟ್ ಬೆಲೆ ದುಬಾರಿ ಆಗುತ್ತಿದೆ. ವರದಿಗಳ ಪ್ರಕಾರ ಪ್ರಮುಖ ಮಾರ್ಗಗಳಲ್ಲಿ ಟಿಕೆಟ್ ಬೆಲೆ ಶೇ. 8ರಿಂದ 40ರಷ್ಟು ಹೆಚ್ಚಿರಬಹುದು. ಬೆಂಗಳೂರು ದೆಹಲಿ ಮಾರ್ಗದ ವಿಮಾನ ಟಿಕೆಟ್ ಬೆಲೆ ಗರಿಷ್ಠ ಶೇ. 39ರಷ್ಟು ಹೆಚ್ಚಾಗಿದೆ ಎಂದು ಇಕ್ಸಿಗೋ ಸಂಸ್ಥೆ ಹೇಳಿದೆ. ವಿಸ್ತಾರ ಏರ್ಲೈನ್ಸ್​ನ ಪೈಲಟ್​ಗಳು ಮುಷ್ಕರ ನಡೆಸಿದ್ದರಿಂದ ಸಾಕಷ್ಟು ವಿಮಾನಗಳು ಹಾರಾಟ ನಿಲ್ಲಿಸಿವೆ. ಇನ್ನೆರಡು ವಾರದಲ್ಲಿ ಏರ್ ಇಂಡಿಯಾದ ಟೆಕ್ನೀಶಿಯನ್​ಗಳು ಮುಷ್ಕರ ನಡೆಸಲಿದ್ದಾರೆ. ಇದರ ಪರಿಣಾಮವು ಫ್ಲೈಟ್ ಟಿಕೆಟ್ ಮೇಲೆ ಆಗುತ್ತಿದೆ.

ಇಂಧನ ಬೆಲೆ ಹೆಚ್ಚಿಲ್ಲ, ಆದರೂ ದುಬಾರಿಯಾಗುತ್ತಿದೆ ವಿಮಾನ ಪ್ರಯಾಣ; ಕಾರಣ ಇದು
ಏರ್ ಇಂಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2024 | 11:51 AM

Share

ನವದೆಹಲಿ, ಏಪ್ರಿಲ್ 10: ವಿಮಾನ ಪ್ರಯಾಣ ಇನ್ಮುಂದೆ ದುಬಾರಿಯಾಗಲಿದೆ. ದೇಶಾದ್ಯಂತ ವಿಮಾನ ಟಿಕೆಟ್ ದರ (flight ticket rate) ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ದೇಶದ ಪ್ರಮುಖ ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರಗಳು (airfare) ಗಣನೀಯವಾಗಿ ಹೆಚ್ಚಾಗಿವೆ. ಭಾರತದ ವೈಮಾನಿಕ ಕ್ಷೇತ್ರದಲ್ಲಿ (aviation sector) ನಿರಂತರವಾಗಿ ಒಂದಿಲ್ಲೊಂದು ಸಮಸ್ಯೆಗಳು ವಕ್ಕರಿಸುತ್ತಲೇ ಇವೆ. ಒಂದರ ಹಿಂದೊಂದು ಕಂಪನಿಗಳು ದಿವಾಳಿಯಾಗುವ ಅಂಚಿಗೆ ಹೋಗುತ್ತಿವೆ. 200 ವಿಮಾನಗಳು ಸ್ಥಗಿತಗೊಂಡು ಟಿಕೆಟ್ ಏರಿಕೆಗೆ ಕಾರಣವಾಗಿದೆ. ವಿಸ್ತಾರ ಏರ್ಲೈನ್ಸ್​ನ ಪೈಲಟ್​ಗಳು ಸಾಮೂಹಿಕವಾಗಿ ಡ್ಯೂಟಿ ಬಹಿಷ್ಕರಿಸಿದ್ದಾರೆ. ಇದರಿಂದ ಹಲವು ವಿಮಾನಗಳು ಹಾರಾಟ ನಿಲ್ಲಿಸಿವೆ. ಗಾಯಕ್ಕೆ ತುಪ್ಪ ಸುರಿಯುವಂತೆ ಏರ್ ಇಂಡಿಯಾ ಕಂಪನಿಯ ಟೆಕ್ನೀಶಿಯನ್​ಗಳೂ ಕೂಡ ಮುಷ್ಕರಕ್ಕೆ ಅಣಿಯಾಗಿದ್ದಾರೆ. ಏಪ್ರಿಲ್ 23ರಂದು ಸ್ಟ್ರೈಕ್ ನಡೆಯಲಿದೆ. ಇನ್ನಷ್ಟು ವಿಮಾನಗಳು ಸ್ಥಗಿತಗೊಳ್ಳಬಹುದು. ವರದಿ ಪ್ರಕಾರ ಈಗಾಗಲೇ ವಿಮಾನ ಟೆಕೆಟ್ ಬೆಲೆ ಶೇ. 30ರವರೆಗೂ ಹೆಚ್ಚಿದೆ.

ಯಾತ್ರಾ ಆನ್​ಲೈನ್ ಮತ್ತು ಇಕ್ಸಿಗೋ (ixigo) ಎಂಬ ಎರಡು ಟ್ರಾವಲ್ ಪೋರ್ಟಲ್ ಪ್ರಕಾರ ಕೆಲ ಮುಖ್ಯ ಮಾರ್ಗಗಳಲ್ಲಿ ವಿಮಾನ ಟಿಕೆಟ್ ಬೆಲೆ ಶೇ. 8ರಿಂದ 30ರಷ್ಟು ಹೆಚ್ಚಾಗಿದೆ. ವಿಸ್ತಾರ ಏರ್ಲೈನ್ ಸಂಸ್ಥೆಯ ಶೇ. 10ರಷ್ಟು ವಿಮಾನಗಳು ಕಾರ್ಯಸ್ಥಗಿತಗೊಂಡಿರುವುದು ಎಲ್ಲೆಡೆ ಟಿಕೆಟ್ ಬೆಲೆ ಏರಿಕೆಗೆ ಕಾರಣವಾಗಿದೆ. ಆದರೆ, ವಿಮಾನ ಸಂಸ್ಥೆಗಳು ಈ ಬೆಲೆ ಏರಿಕೆ ಬಗ್ಗೆ ಯಾವ ಅಧಿಕೃತ ಹೇಳಿಕೆ ನೀಡಿರುವುದು ವರದಿಯಾಗಿಲ್ಲ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಎಂಡಿ, ಸಿಇಒ ಸುರೀಂದರ್ ಚಾವ್ಲಾ ರಾಜೀನಾಮೆ

ಬಹಳ ಬೇಡಿಕೆ ಇರುವ ದೆಹಲಿ ಗೋವಾ, ದೆಹಲಿ ಕೊಚ್ಚಿ, ದೆಹಲಿ ಜಮ್ಮು, ದೆಹಲಿ ಶ್ರೀನಗರ್ ಇತ್ಯಾದಿ ಮಾರ್ಗಗಳಲ್ಲಿ ಟಿಕೆಟ್ ಬೆಲೆ ಶೇ. 20ರಿಂದ 25ರಷ್ಟು ಹೆಚ್ಚಾಗಿದೆ ಎಂದು ಯಾತ್ರಾ ಆನ್​ಲೈನ್ ಸಂಸ್ಥೆಯ ಹಿರಿಯ ಅಧಿಕಾರಿ ಭರತ್ ಮಲಿಕ್ ಹೇಳುತ್ತಾರೆ.

ಇಕ್ಸಿಗೋ ಪ್ರಕಾರ ದೆಹಲಿ ಮತ್ತು ಬೆಂಗಳೂರು ನಡುವಿನ ಫ್ಲೈಟ್ ಟಿಕೆಟ್ ಬೆಲೆಯಲ್ಲಿ ಸೇ. 39ರಷ್ಟು ಹೆಚ್ಚಾಗಿದೆ. ಮುಂಬೈ ಮತ್ತು ದೆಹಲಿ ನಡುವಿನ ಮಾರ್ಗದ ಟಿಕೆಟ್ ಬೆಲೆಯಲ್ಲಿ ಶೇ. 8ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಕೋಲಾರದಲ್ಲಿ ಟಾಟಾ ನಿರ್ಮಿತ ಮಿಲಿಟರಿ ಸೆಟಿಲೈಟ್ ಅಮೆರಿಕದ ಸ್ಪೇಸ್​ಎಕ್ಸ್ ರಾಕೆಟ್ ಮುಖಾಂತರ ಭೂಕಕ್ಷೆಗೆ

ಈ ಬೆಲೆ ಏರಿಕೆ ತಾತ್ಕಾಲಿಕ ಅವಧಿಯದ್ದಾಗಿರುವುದು ಅನುಮಾನ. ಜುಲೈ ತಿಂಗಳವರೆಗೂ ಟಿಕೆಟ್ ಬೆಲೆ ಹೆಚ್ಚಿನ ಮಟ್ಟದಲ್ಲೇ ಇರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸುತ್ತಾರೆ. ಈ ಟಿಕೆಟ್ ಬೆಲೆ ಏರಿಕೆ ಅಸಹಜವಾಗೇನೂ ಆಗುತ್ತಿಲ್ಲ. ಬೇಡಿಕೆ ಮತ್ತು ಸರಬರಾಜು ನಿಯಮದಂತೆ ಬೆಲೆ ಏರುತ್ತಿದೆ. ಬಹಳಷ್ಟು ವಿಮಾನಗಳು ಹಾರಾಟ ಸ್ಥಗಿತಗೊಳಿಸಿರುವುದರಿಂದ ಫ್ಲೈಟ್ ಕೊರತೆ ಇದೆ. ಹೀಗಾಗಿ, ಟಿಕೆಟ್ ಬೆಲೆ ಸಹಜವಾಗಿ ಹೆಚ್ಚುತ್ತಿದೆ ಎಂದು ಉದ್ಯಮ ವಲಯದವರು ಹೇಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?