Reliance FMCG Independence: ಗುಜರಾತ್ನಲ್ಲಿ ‘ಇಂಡಿಪೆಂಡೆನ್ಸ್’ ಬ್ರ್ಯಾಂಡ್ ಬಿಡುಗಡೆ ಮಾಡಿದ ರಿಲಯನ್ಸ್
ರಿಲಯನ್ಸ್ ಗ್ರೂಪ್ ಗುಜರಾತ್ನಲ್ಲಿ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ‘ಇಂಡಿಪೆಂಡೆನ್ಸ್’ ಅನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಬ್ರ್ಯಾಂಡ್ ಅಡಿಯಲ್ಲಿ ಕಂಪನಿಯು ಆಹಾರ ವಸ್ತುಗಳು ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಪೂರೈಸಲಿದೆ.
ಅಹಮದಾಬಾದ್: ರಿಲಯನ್ಸ್ ಗ್ರೂಪ್ (Reliance Group) ಗುಜರಾತ್ನಲ್ಲಿ (Gujarat) ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (FMCG) ಬ್ರ್ಯಾಂಡ್ ‘ಇಂಡಿಪೆಂಡೆನ್ಸ್’ ಅನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಬ್ರ್ಯಾಂಡ್ ಅಡಿಯಲ್ಲಿ ಕಂಪನಿಯು ಆಹಾರ ವಸ್ತುಗಳು ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಪೂರೈಸಲಿದೆ. ರಿಲಯನ್ಸ್ ವೆಂಚರ್ಸ್ ಲಿಮಿಟೆಡ್ನ ಅಂಗಸಂಸ್ಥೆ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಬ್ರ್ಯಾಂಡ್ ಬಿಡುಗಡೆ ಮಾಡಿದೆ. ‘ನಮ್ಮದೇ ಆದ ಎಂಎಂಸಿಜಿ ಬ್ರ್ಯಾಂಡ್ ಬಿಡುಗಡೆ ಮಾಡಲು ಸಂತಸವಾಗುತ್ತಿದೆ. ಉನ್ನತ ಗುಣಮಟ್ಟ ಮತ್ತು ಕೈಗೆಟಕುವ ಬೆಲೆಯಲ್ಲಿ ಖಾದ್ಯ ತೈಲ, ಕಾಳುಗಳು, ಧಾನ್ಯಗಳು, ಪ್ಯಾಕೇಜ್ಡ್ ಆಹಾರ ವಸ್ತುಗಳು ಹಾಗೂ ಇತರ ದಿನಬಳಕೆಯ ವಸ್ತುಗಳನ್ನು ಪೂರೈಸಲಾಗುವುದು’ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್ನ ನಿರ್ದೇಶಕಿ ಇಶಾ ಅಂಬಾನಿ ಹೇಳಿದರು. ಗುಜರಾತ್ನ ಅಹಮದಾಬಾದ್ನಲ್ಲಿ ಬ್ರ್ಯಾಂಡ್ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.
ಗುಜರಾತ್ ಅನ್ನು ‘ಗೋ ಟು ಮಾರ್ಕೆಟ್’ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವುದು ಕಂಪನಿಯ ಗುರಿಯಾಗಿದೆ. ಶ್ರೇಷ್ಠ ಎಫ್ಎಂಸಿಜಿ ಉದ್ಯಮವನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲಿದ್ದೇವೆ. ಕ್ರಮೇಣ ಬ್ರ್ಯಾಂಡ್ ಅನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ರಿಲಯನ್ಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Reliance Jio 5G: 5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆ ಆರಂಭಿಸಿದ ರಿಲಯನ್ಸ್ ಜಿಯೋ
ಭಾರತೀಯ ಗ್ರಾಹಕರ ಅಗತ್ಯತೆಗಳ ತಿಳುವಳಿಕೆಯೊಂದಿಗೆ ಇಂಡಿಪೆಂಡೆನ್ಸ್ ಬ್ರ್ಯಾಂಡ್ ಬಿಡುಗಡೆ ಮಾಡಲಾಗಿದೆ. ಇದು ದೇಶದ ಮನೆಗಳಲ್ಲಿ ಒಂದು ಸ್ಥಾನವನ್ನು ಕಂಡುಕೊಳ್ಳುವುದು ಖಚಿತ. ಇದು ಕೇವಲ ಮೇಡ್ ಇನ್ ಇಂಡಿಯಾ ಅಷ್ಟೇ ಅಲ್ಲ, ಮೇಡ್ ಫಾರ್ ಇಂಡಿಯಾ ಎಂದು ಕಂಪನಿಯ ಪ್ರಕಟಣೆ ಉಲ್ಲೇಖಿಸಿದೆ.
ಮುಂಬರುವ ತಿಂಗಳುಗಳಲ್ಲಿ ಬ್ರ್ಯಾಂಡ್ ಅನ್ನು ಗುಜರಾತ್ನ ಹೊರವಲಯದ ಚಿಲ್ಲರೆ ಮಾರಾಟಗಾರರವರೆಗೆ ವಿಸ್ತರಿಸುವ ಉದ್ದೇಶವನ್ನೂ ಕಂಪನಿ ಹೊಂದಿದೆ. ಶೀಘ್ರದಲ್ಲೇ ಎಎಫ್ಎಂಸಿಜಿ ಬ್ರ್ಯಾಂಡ್ ಬಿಡುಗಡೆ ಮಾಡುವುದಾಗಿ ಆಗಸ್ಟ್ನಲ್ಲಿ ರಿಲಯನ್ಸ್ ತಿಳಿಸಿತ್ತು.
ಸದ್ಯ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ 2 ಟ್ರಿಲಿಯನ್ ರೂ. ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದೆ. 22ನೇ ಹಣಕಾಸು ವರ್ಷದಲ್ಲಿ ಕಂಪನಿಯ ಮಾರಾಟ ಮತ್ತು ಸೇವೆಗಳ ಮೌಲ್ಯ 1,99,749 ಕೋಟಿ ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Thu, 15 December 22