ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಎಫ್ ಎಂಸಿಜಿ, ಹೊಸಬರಿಗೂ ಸಿಗಲಿದೆ ಉದ್ಯೋಗ

ಎಫ್ ಎಂಸಿಜಿ ವಲಯವು ನಿರಂತರವಾಗಿ ಬೆಳವಣಿಗೆಯಾಗುತ್ತಿದ್ದು, ಒಂದೆರಡು ವರ್ಷಗಳಲ್ಲಿ ನೂರಾರು ಜನರಿಗೆ ಉದ್ಯೋಗವು ಸಿಗಲಿದೆ. ಹೌದು, ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ, ಈ ವಲಯದ ವ್ಯವಹಾರವು 2025-26 ರ ವೇಳೆಗೆ ದ್ವಿಗುಣಗೊಳ್ಳಲಿದೆ, ಇದರಿಂದಾಗಿ ಈ ವಲಯದಲ್ಲಿ ಹೊಸಬರಿಗೆ ಉದ್ಯೋಗವಕಾಶ ಸಿಗಲಿದೆ ಎನ್ನಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷವೂ ಎಫ್‌ಎಂಸಿಜಿ ವಲಯದಲ್ಲಿ ಶೇ.5ರಷ್ಟು ಉದ್ಯೋಗವಕಾಶಗಳು ಹೆಚ್ಚಿವೆ.

ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಎಫ್ ಎಂಸಿಜಿ, ಹೊಸಬರಿಗೂ ಸಿಗಲಿದೆ ಉದ್ಯೋಗ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 30, 2024 | 6:23 PM

ಆಹಾರ ಸಂಸ್ಕರಣಾ ಕ್ಷೇತ್ರವು ನಿರಂತರವಾಗಿ ಬೆಳವಣಿಗೆಯನ್ನು ಹೊಂದುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಈ ವಲಯದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಇನ್ನೂ ಹೆಚ್ಚಿನ ಯುವಕರಿಗೆ ಉದ್ಯೋಗವನ್ನು ನೀಡುವಲ್ಲಿ ಯಶಸ್ವಿಯಾಗಿದೆ. 2024 ರಲ್ಲಿ ಶೇಕಡಾ 27 ರಷ್ಟಿದ್ದ ಅಂಕಿ ಅಂಶವು ಈ ವರ್ಷದ ಮೊದಲಾರ್ಧದಲ್ಲಿ ಶೇಕಡಾ 32 ಕ್ಕೆ ಏರಿಕೆಯಾಗಿದೆ ಎನ್ನುವುದು ವರದಿಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ, 2019 ರಲ್ಲಿ, ಈ ಉದ್ಯಮದ ವ್ಯವಹಾರವು 263 ಶತಕೋಟಿ ಡಾಲರ್ ತಲುಪಿತ್ತು, ಇದು 2025-26 ರ ವೇಳೆಗೆ 535 ಶತಕೋಟಿ ಡಾಲರ್‌ಗಳನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ವಾರ್ಷಿಕವಾಗಿ ಶೇಕಡಾ 12.6 ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಈ ಬೆಳವಣಿಗೆಯು ಹಳ್ಳಿಗಳು ಮತ್ತು ಅರೆ-ನಗರ ಮಾರುಕಟ್ಟೆಗಳಲ್ಲಿ ಹೆಚ್ಚು ವೇಗವಾಗಿ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಹೊಸಬರುಗಳಿಗೂ ಈ ವಲಯದಲ್ಲಿ ಉದ್ಯೋಗ ಸಿಗಲಿದೆ ಎನ್ನುವ ಭರವಸೆಯೊಂದು ಮೂಡಿದೆ.

ವರದಿಯ ಪ್ರಕಾರ, ಎಫ್‌ಎಂಸಿಜಿ ವಲಯದ ಬೆಳವಣಿಗೆಯನ್ನು ಹೊಂದುತ್ತಿರುವ ಪರಿಣಾಮವಾಗಿ ಡೈರಿ, ಆರ್‌ಟಿಇ ಆಹಾರಗಳು, ಹೆಪ್ಪುಗಟ್ಟಿದ ಮಾಂಸ ಮತ್ತು ತಿಂಡಿಗಳನ್ನು ತಯಾರಿಸುವ ಕಂಪನಿಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ವಿಶೇಷವಾಗಿ ಪೂರೈಕೆ ಸರಪಳಿ ಮತ್ತು ಮಾರುಕಟ್ಟೆ ಸಂಶೋಧನೆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಅದಲ್ಲದೇ, ಎಫ್‌ಎಂಸಿಜಿ ಕಂಪನಿಗಳು ಈಗ ಮಾರುಕಟ್ಟೆಯಲ್ಲಿ ಬುದ್ಧಿವಂತಿಕೆ, ಚಿಲ್ಲರೆ ವಿತರಣೆಯಲ್ಲಿ ಪರಿಣತಿ ಮತ್ತು ಪ್ರಾದೇಶಿಕ ಗ್ರಾಹಕರ ನಡವಳಿಕೆಯನ್ನು ಹೊಂದಿರುವ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದರತ್ತ ಗಮನಹರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟೀಮ್‌ಲೀಸ್ ಎಡ್‌ಟೆಕ್‌ನ ಸಂಸ್ಥಾಪಕ ಮತ್ತು ಸಿಇಒ ಶಾಂತನು ರೂಜ್ ಮಾತನಾಡಿದ್ದು, ಎಫ್‌ಎಂಸಿಜಿ ಕ್ಷೇತ್ರವು ಹಳ್ಳಿಗಳು ಮತ್ತು ಅರೆ ನಗರ ಪ್ರದೇಶಗಳಲ್ಲಿಯೂ ವಿಸ್ತರಿಸಿದೆ, ಇದರಿಂದಾಗಿ ಈ ವಲಯದಲ್ಲಿ ಉದ್ಯೋಗವಕಾಶಗಳು ಹೆಚ್ಚುತ್ತಿವೆ. ಅದಲ್ಲದೇ, ಮಾರುಕಟ್ಟೆ ಮತ್ತು ಗ್ರಾಹಕರ ನಡವಳಿಕೆಯ ಬಗ್ಗೆ ಜ್ಞಾನವನ್ನು ಹೊಂದಿರುವ ಯುವಕರಿಗೆ ಕಂಪನಿಗಳು ಹೆಚ್ಚು ಆದ್ಯತೆ ನೀಡುತ್ತಿವೆ. ಹೀಗಾಗಿ ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್‌ನಂತಹ ದೇಶದ ದೊಡ್ಡ ನಗರಗಳಲ್ಲಿ ಉದ್ಯೋಗವಕಾಶಗಳಿವೆ ಎಂದಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ ಭಾರಿ ಏರಿಕೆ : ಸೆಪ್ಟೆಂಬರ್’ನಲ್ಲಿ 1.88 ಮಿಲಿಯನ್ ನಷ್ಟು ಉದ್ಯೋಗ ಸೃಷ್ಟಿ

ಹೀಗಾಗಿ ಕಂಪನಿಗಳು ಯುವಕರನ್ನು ವಿವಿಧ ಉದ್ಯೋಗಗಳಿಗೆ ನೇಮಿಸಿಕೊಳ್ಳುವತ್ತ ಗಮನಹರಿಸುತ್ತಿವೆ. ಈಗಾಗಲೇ ಉದ್ಯೋಗವನ್ನು ಸೃಷ್ಟಿಸುವಲ್ಲಿ ಭಾರತದಾದ್ಯಂತ 18 ಕೈಗಾರಿಕೆಗಳಲ್ಲಿ 526 ಸಣ್ಣ, ಮಧ್ಯಮ ಮತ್ತು ದೊಡ್ಡ ಕಂಪನಿಗಳನ್ನು ಒಳಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ