Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?

| Updated By: Srinivas Mata

Updated on: Oct 07, 2021 | 3:02 PM

Forbes India Rich List 2021 ಫೋರ್ಬ್ಸ್ ಇಂಡಿಯಾದಿಂದ ಭಾರತದ ಅಗ್ರ 100 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಟಾಪ್ 10 ಮಂದಿಯ ಹೆಸರನ್ನು ಇಲ್ಲಿ ನೀಡಲಾಗಿದೆ. ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.

Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?
ಮುಖೇಶ್ ಅಂಬಾನಿ
Follow us on

ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಕೊವಿಡ್-19 ಎರಡನೇ ಅಲೆಯಿಂದ ಭಾರತ ಚೇತರಿಸಿಕೊಂಡಿದ್ದು, ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಮರುಸ್ಥಾಪಿಸಿದೆ. ಷೇರು ಮಾರುಕಟ್ಟೆಯಲ್ಲಿನ ಭಾರೀ ಏರಿಕೆಯಾಗಿದೆ. ಕಳೆದ 12 ತಿಂಗಳಲ್ಲಿ 25,700 ಕೋಟಿ ಅಮೆರಿಕನ್ ಡಾಲರ್ – ಶೇ 50ರಷ್ಟು ಹೆಚ್ಚಳವಾಗಿ- 2021ರ ಫೋರ್ಬ್ಸ್ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿನ ಸದಸ್ಯರ ಒಟ್ಟು ಸಂಪತ್ತನ್ನು ದಾಖಲೆಯ 775 ಶತಕೋಟಿ USDಗೆ ಏರಿಸಿದೆ. ಸಂಪೂರ್ಣ ಪಟ್ಟಿಯು www.forbes.com/india ಮತ್ತು www.forbesindia.comನಲ್ಲಿ ಲಭ್ಯವಿದೆ. ಫೋರ್ಬ್ಸ್ ಏಷ್ಯಾದ ಅಕ್ಟೋಬರ್ ಸಂಚಿಕೆ ಮತ್ತು ಫೋರ್ಬ್ಸ್ ಇಂಡಿಯಾ ನವೆಂಬರ್ ಸಂಚಿಕೆಯಲ್ಲಿ ಕೂಡ ಈ ಪಟ್ಟಿಯನ್ನು ಕಾಣಬಹುದು.

ಈ ಬಂಪರ್ ವರ್ಷದಲ್ಲಿ, ಪಟ್ಟಿಯಲ್ಲಿ ಇರುವ ಶೇ 80ಕ್ಕಿಂತ ಹೆಚ್ಚು ಮಂದಿ ತಮ್ಮ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. 61 ಮಂದಿ 1 ಬಿಲಿಯನ್ ಯುಎಸ್​ಡಿ ಅಥವಾ ಹೆಚ್ಚಿನ ಮೊತ್ತವನ್ನು ಸೇರಿಸಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಕೇಶ್ ಅಂಬಾನಿ, 2008ರಿಂದ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಉಳಿದಿದ್ದು, ಅವರ ನಿವ್ವಳ ಮೌಲ್ಯ 92.7 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಂಬಾನಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್​ನಿಂದ 10 ಬಿಲಿಯನ್ ಹೂಡಿಕೆಯನ್ನು ನವೀಕರಿಸಬಹುದಾದ ಇಂಧನಕ್ಕೆ ಹಾಕುವ ಬಗ್ಗೆ ವಿವರಿಸಿದ್ದರು.

ಗೌತಮ್ ಅದಾನಿಯ ಕೊಡುಗೆ ಹೆಚ್ಚಿದೆ
ಭಾರತದ 100 ಶ್ರೀಮಂತರಲ್ಲಿ ಸಾಮೂಹಿಕವಾಗಿ ಸಂಪತ್ತಿನ ಹೆಚ್ಚಳದಲ್ಲಿ ಐದನೇ ಒಂದು ಭಾಗವು ಮೂಲಸೌಕರ್ಯ ಉದ್ಯಮಿ ಗೌತಮ್ ಅದಾನಿಯಿಂದ ಬಂದಿದ್ದು, ಅವರು ಸತತ ಮೂರನೇ ವರ್ಷ ನಂ. 2ನೇ ಸ್ಥಾನದಲ್ಲಿದ್ದಾರೆ. ಅದಾನಿ ಅವರು ಶೇಕಡಾವಾರು ಮತ್ತು ಡಾಲರ್ ಪರಿಭಾಷೆಯಲ್ಲಿ ಅತಿದೊಡ್ಡ ಲಾಭ ಗಳಿಸುವವರಾಗಿದ್ದು, ಅವರ ಎಲ್ಲ ಲಿಸ್ಟಿಂಗ್ ಕಂಪೆನಿಗಳ ಷೇರುಗಳ ಬೆಲೆ ಗಗನಕ್ಕೇರಿದ್ದರಿಂದ ಸಂಪತ್ತು ಸುಮಾರು 25.2 ಶತಕೋಟಿ ಅಮೆರಿಕನ್ ಡಾಲರ್‌ನಿಂದ ಸುಮಾರು 74.8 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮೂರು ಪಟ್ಟು ಹೆಚ್ಚಿಸಿದೆ.

31 ಬಿಲಿಯನ್ ಯುಎಸ್​ಡಿಯೊಂದಿಗೆ 3ನೇ ಸ್ಥಾನದಲ್ಲಿರುವ ಎಚ್​ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್, ತಮ್ಮ ನಿವ್ವಳ ಮೌಲ್ಯದಲ್ಲಿ 10.6 ಬಿಲಿಯನ್ ಡಾಲರ್ ಹೆಚ್ಚಳವನ್ನು ಕಂಡಿದ್ದಾರೆ. ರೀಟೇಲ್ ವ್ಯವಹಾರದಲ್ಲಿ ದೊಡ್ಡ ಹೆಸರು ಮಾಡಿರುವ ರಾಧಾಕಿಶನ್ ದಮಾನಿ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದು, ಅವರ ನಿವ್ವಳ ಮೌಲ್ಯವು ಸುಮಾರು 15.4 ಬಿಲಿಯನ್ ಡಾಲರ್‌ಗಳಿಂದ 29.4 ಬಿಲಿಯನ್‌ ಡಾಲರ್​ಗೆ ದ್ವಿಗುಣಗೊಂಡಿದೆ. ಏಕೆಂದರೆ ಅವರ ಸೂಪರ್‌ಮಾರ್ಕೆಟ್ ಚೈನ್ ಅವೆನ್ಯೂ ಸೂಪರ್‌ಮಾರ್ಟ್‌ಗಳು ಮಾರ್ಚ್ ಅಂತ್ಯದ ಹಣಕಾಸು ವರ್ಷದಲ್ಲಿ 22 ಹೊಸ ಮಳಿಗೆಗಳನ್ನು ತೆರೆದವು.

ಭಾರತವು ಇಲ್ಲಿಯವರೆಗೆ 870 ದಶಲಕ್ಷಕ್ಕೂ ಹೆಚ್ಚು ಕೊವಿಡ್ -19 ಲಸಿಕೆಗಳನ್ನು ನೀಡಿದೆ. ಇದಕ್ಕಾಗಿ ಭಾಗಶಃ ಲಸಿಕೆಯನ್ನು ತಯಾರಿಸಿದ ಶತಕೋಟ್ಯಧಿಪತಿ ಸೈರಸ್ ಪೂನಾವಾಲಾ ಸ್ಥಾಪನೆಯ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಧನ್ಯವಾದ ಹೇಳಬೇಕು. ಅವರು 19 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಗ್ರ ಐದನೇ ಸ್ಥಾನದಲ್ಲಿದ್ದಾರೆ. ಅವರ ಖಾಸಗಿ ಕಂಪನಿಯು ಅಸ್ಟ್ರಾಜೆನೆಕಾದ ಪರವಾನಗಿ ಅಡಿಯಲ್ಲಿ ಕೋವಿಶೀಲ್ಡ್ ಅನ್ನು ತಯಾರಿಸುತ್ತದೆ ಮತ್ತು ಇತರ ಕೊವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಕನಿಷ್ಠ 2 ಬಿಲಿಯನ್ ಯುಎಸ್​ಡಿ ಆಸ್ತಿ
ಏಷ್ಯಾ ವೆಲ್ತ್ ಸಂಪಾದಕ ಮತ್ತು ಫೋರ್ಬ್ಸ್ ಏಷ್ಯಾದ ಭಾರತ ಸಂಪಾದಕ ನಾಜ್ನೀನ್ ಕರ್ಮಾಲಿ ಹೇಳುವಂತೆ, ಈ ವರ್ಷ ಭಾರತದಲ್ಲಿ ವಿ-ಆಕಾರದ ಚೇತರಿಕೆಯ ಭರವಸೆಗಳು ಷೇರು ಮಾರುಕಟ್ಟೆಯ ಏರಿಕೆಗೆ ಉತ್ತೇಜನ ನೀಡಿತು. ಇದು ಭಾರತದ ಶ್ರೀಮಂತರ ಅದೃಷ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿತು. ಅಗ್ರ 100ರ ಶ್ರೇಯಾಂಕದ ಪಟ್ಟಿಯೊಳಗೆ ಸ್ಥಾನ ಪಡೆಯುವುದಕ್ಕೆ ಕನಿಷ್ಠ 2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರಬೇಕು.

ಈ ವರ್ಷದ ಪಟ್ಟಿಯಲ್ಲಿ ಆರು ಮಂದಿ ಹೊಸಬರು ಇದ್ದು, ಅವರಲ್ಲಿ ಅರ್ಧದಷ್ಟು ಮಂದಿ ರಾಸಾಯನಿಕ ಕ್ಷೇತ್ರದಿಂದ ಬಂದಿದ್ದಾರೆ. ಅವರಲ್ಲಿ ಅಶೋಕ್ ಬೂಬ್ (ಸಂಖ್ಯೆ 93, 2.3 ಬಿಲಿಯನ್ ಯುಎಸ್​ಡಿ) ಅವರ ಕ್ಲೀನ್ ಸೈನ್ಸ್ ಮತ್ತು ಟೆಕ್ನಾಲಜಿಯನ್ನು ಜುಲೈನಲ್ಲಿ ಲಿಸ್ಟ್ ಮಾಡಲಾಗಿದೆ. ದೀಪಕ್ ಮೆಹ್ತಾ (ನಂ. 97, 2.05 ಬಿಲಿಯನ್ ಯುಎಸ್​ಡಿ) ದೀಪಕ್ ನೈಟ್ರೈಟ್ ಮತ್ತು ಯೋಗೀಶ್ ಕೊಠಾರಿ (ನಂ. 100, 1.94 ಬಿಲಿಯನ್ ಯುಎಸ್​ಡಿ) ಅಲ್ಕಿಲ್ ಅಮೀನ್ಸ್ ಕೆಮಿಕಲ್ಸ್. ಅರವಿಂದ ಲಾಲ್ (ನಂ. 87, 2.55 ಬಿಲಿಯನ್ ಯುಎಸ್​ಡಿ), ಡಯಾಗ್ನೋಸ್ಟಿಕ್ಸ್ ಚೈನ್ ಡಾಲಾಲ್ ಪಥ್ ಲ್ಯಾಬ್ಸ್ ಕಾರ್ಯನಿರ್ವಾಹಕ ಅಧ್ಯಕ್ಷರು ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಕಂಡ ಏರಿಕೆಯಿಂದಾಗಿ ಕಳೆದ ವರ್ಷದಲ್ಲಿ ಕಂಪೆನಿಯ ಷೇರುಗಳು ದ್ವಿಗುಣಗೊಂಡವು.

ಹನ್ನೊಂದು ಮಂದಿ ಹೆಸರು ಕೈ ಬಿಡಲಾಗಿದೆ
ದೇಶದಲ್ಲಿ ಬಂದ ದೊಡ್ಡ ಪ್ರಮಾಣದ ಐಪಿಒ ರಿಯಲ್​ ಎಸ್ಟೇಟ್​ ಆಸ್ತಿ ಉದ್ಯಮಿ ಮತ್ತು ರಾಜಕಾರಣಿ ಮಂಗಲ್ ಪ್ರಭಾತ್ ಲೋಧಾ (ನಂ. 42, 4.5 ಬಿಲಿಯನ್ ಯುಎಸ್​ಡಿ)ಗೆ ನೆರವು ನೀಡಿತು. ಅವರ ಮ್ಯಾಕ್ರೊಟೆಕ್ ಡೆವಲಪರ್‌ಗಳ ಏಪ್ರಿಲ್​ನಲ್ಲಿ ಲಿಸ್ಟಿಂಗ್ ನಂತರ ಶ್ರೇಣಿಗೆ ಮರಳಿತು. ಹೀಗೆ ಹಿಂತಿರುಗಿದ ಇತರ ನಾಲ್ಕು ಜನರಲ್ಲಿ ಪ್ರತಾಪ ರೆಡ್ಡಿ (ಸಂಖ್ಯೆ 88, 2.53 ಬಿಲಿಯನ್ ಯುಎಸ್​ಡಿ) ಕೂಡ ಸ್ಥಾನ ಪಡೆದಿದ್ದಾರೆ. ಅವರ ಲಿಸ್ಟೆಡ್ ಆಸ್ಪತ್ರೆ ಚೈನ್ ಅಪೊಲೊ ಆಸ್ಪತ್ರೆಗಳ ಉದ್ಯಮವು ಕೊವಿಡ್-19 ರೋಗಿಗಳನ್ನು ಪರೀಕ್ಷಿಸುತ್ತಿದೆ ಮತ್ತು ಚಿಕಿತ್ಸೆ ನೀಡುತ್ತಿದೆ.

ಕಳೆದ ವರ್ಷ ಪಟ್ಟಿಯಲ್ಲಿ ಇದ್ದ ಹನ್ನೊಂದು ಮಂದಿಯನ್ನು ಕೈಬಿಡಲಾಯಿತು. ಈ ವರ್ಷದ ಪಟ್ಟಿಗೆ ಪ್ರವೇಶ ಪಡೆಯಲು ಹೆಚ್ಚಿದ ಕಡಿತವನ್ನು ಮಾಡಲಾಗಿದೆ. ಈ ವರ್ಷದ ಪಟ್ಟಿಯನ್ನು ತಯಾರಿಸಲು ಅಗತ್ಯವಿರುವ ಕನಿಷ್ಠ ಮೊತ್ತವು 1.94 ಬಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷ 1.33 ಶತಕೋಟಿ ಡಾಲರ್ ಇತ್ತು.

ಭಾರತದ ಅಗ್ರ 10 ಶ್ರೀಮಂತರು:
ಮುಕೇಶ್ ಅಂಬಾನಿ- USD 92.7 ಬಿಲಿಯನ್
ಗೌತಮ್ ಅದಾನಿ- USD 74.8 ಬಿಲಿಯನ್
ಶಿವ್ ನಾಡಾರ್- USD 31 ಬಿಲಿಯನ್
ರಾಧಕಿಶನ್ ದಮಾನಿ- USD 29.4 ಬಿಲಿಯನ್
ಸೈರಸ್ ಪೂನವಲ್ಲ- USD 19 ಬಿಲಿಯನ್
ಲಕ್ಷ್ಮಿ ಮಿತ್ತಲ್- USD 18.8 ಬಿಲಿಯನ್
ಸಾವಿತ್ರಿ ಜಿಂದಾಲ್- USD 18 ಬಿಲಿಯನ್
ಉದಯ್ ಕೋಟಕ್- USD 16.5 ಬಿಲಿಯನ್
ಪಲ್ಲೊಂಜಿ ಮಿಸ್ತ್ರಿ- USD 16.4 ಬಿಲಿಯನ್
ಕುಮಾರ್ ಬಿರ್ಲಾ- USD 15.8 ಬಿಲಿಯನ್

ಈ ಪಟ್ಟಿಯನ್ನು ಕುಟುಂಬಗಳು ಮತ್ತು ವ್ಯಕ್ತಿಗಳು, ಷೇರು ವಿನಿಮಯ ಕೇಂದ್ರಗಳು, ವಿಶ್ಲೇಷಕರು ಮತ್ತು ಭಾರತದ ನಿಯಂತ್ರಕ ಏಜೆನ್ಸಿಗಳಿಂದ ಪಡೆದ ಷೇರುದಾರರ ಮತ್ತು ಹಣಕಾಸಿನ ಮಾಹಿತಿಯನ್ನು ಬಳಸಿ ಸಂಗ್ರಹಿಸಲಾಗಿದೆ. ಈ ಶ್ರೇಯಾಂಕವು ಬಜಾಜ್ ಮತ್ತು ಗೋದ್ರೆಜ್​ದಂಥ ವಿಸ್ತೃತ ಕುಟುಂಬಗಳಲ್ಲಿ ಹಂಚಿಕೊಂಡ ಕುಟುಂಬಗಳು ಸೇರಿದಂತೆ ಕುಟುಂಬ ಸದಸ್ಯರ ಸಂಪತ್ತನ್ನು ಲಿಸ್ಟ್ ಮಾಡುತ್ತದೆ. ಸಾರ್ವಜನಿಕ ಆಸ್ತಿಯನ್ನು ಸ್ಟಾಕ್ ಬೆಲೆಗಳು ಮತ್ತು ವಿನಿಮಯ ದರಗಳನ್ನು ಆಧರಿಸಿ ಸೆಪ್ಟೆಂಬರ್ 17ರಂತೆ ಲೆಕ್ಕ ಹಾಕಲಾಗಿದೆ. ಈ ಪಟ್ಟಿಯು ವ್ಯಾಪಾರ, ವಸತಿ ಅಥವಾ ದೇಶದ ಇತರ ಸಂಬಂಧಗಳನ್ನು ಹೊಂದಿರುವ ವಿದೇಶಿ ನಾಗರಿಕರನ್ನು ಅಥವಾ ದೇಶದಲ್ಲಿ ವಾಸಿಸದ, ಆದರೆ ಗಮನಾರ್ಹ ವ್ಯಾಪಾರ ಅಥವಾ ದೇಶದ ಇತರ ಸಂಬಂಧಗಳನ್ನು ಹೊಂದಿರುವ ನಾಗರಿಕರನ್ನು ಕೂಡ ಒಳಗೊಂಡಿರಬಹುದು.

ಇದನ್ನೂ ಓದಿ: Rich: ಭಾರತದ ಟಾಪ್ ಶೇ 10ರಷ್ಟು ಶ್ರೀಮಂತರ ಬಳಿ ಶೇ 50ಕ್ಕೂ ಹೆಚ್ಚು ಸಂಪತ್ತು ಸಂಗ್ರಹ ಎಂದಿದೆ ಈ ಸಮೀಕ್ಷೆ

Published On - 2:58 pm, Thu, 7 October 21