ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..!
Story of Shankh Air founder Shravan Kumar Vishwakarma: ಉತ್ತರಪ್ರದೇಶದ ಶ್ರವಣಕುಮಾರ್ ವಿಶ್ವಕರ್ಮ ಎಂಬುವವರು ಶಂಖ್ ಏರ್ನ ಛೇರ್ಮನ್ ಆಗಿದ್ದಾರೆ. ವಿಮಾನ ಹಾರಾಟ ನಡೆಸಲು ಅನುಮತಿ ಪಡೆದ ಮೂರು ಹೊಸ ವಿಮಾನ ಸಂಸ್ಥೆಗಳಲ್ಲಿ ಶಂಖ್ ಏರ್ ಒಂದು. ವಿಶ್ವಕರ್ಮ ಅವರು ಆಟೊ, ಟೆಂಪೋ ಡ್ರೈವರ್ ಆಗಿದ್ದವರು, ಈಗ ವಿಮಾನ ಕಂಪನಿಯನ್ನು ನಡೆಸುತ್ತಿರುವುದು ಒಂದು ರೋಚಕ ಕಥೆ.

ಕೇಂದ್ರ ಸರ್ಕಾರದಿಂದ ಲೈಸೆನ್ಸ್ ಪಡೆದ ಮೂರು ಹೊಸ ಏರ್ಲೈನ್ ಕಂಪನಿಗಳಲ್ಲಿ ಶಂಖ್ ಏರ್ (Shankh Air) ಒಂದು. ಇದರ ಸ್ಥಾಪನೆ ಹಾಗೂ ಸ್ಥಾಪಕನ ಹಿಂದಿನ ಕಥೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಮಾದರಿ ಶ್ರವಣ್ ಕುಮಾರ್ ವಿಶ್ವಕರ್ಮ (Shravan Kumar Vishwakarma). ಉತ್ತರಪ್ರದೇಶದ ಈ ವ್ಯಕ್ತಿ ಒಂದು ಕಾಲದಲ್ಲಿ ಕಾನಪುರ್ನ ಬೀದಿಗಳಲ್ಲಿ ಟೆಂಪೋ ಡ್ರೈವರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದವ. ಇವತ್ತು ವಿಮಾನ ಕಂಪನಿಯ ಮಾಲೀಕನಾಗಿ ಬೆಳೆದಿದ್ದಾರೆ. ಶಂಖ್ ಏರ್ ಶೀಘ್ರದಲ್ಲೇ ವಿಮಾನಗಳ ಹಾರಾಟ ನಡೆಸಲಿದೆ.
ಶ್ರವಣ್ ಕುಮಾರ್ ವಿಶ್ವಕರ್ಮ ಹೆಚ್ಚು ಓದಲಿಲ್ಲ. ಆಟೊರಿಕ್ಷಾ ಓಡಿಸುತ್ತಿದ್ದರು. ಟೆಂಪೋ ಇಟ್ಟುಕೊಂಡು ಕೆಲ ಬ್ಯುಸಿನೆಸ್ಗಳಿಗೆ ವಿಫಲ ಯತ್ನ ಮಾಡಿದರು. ಆದರೆ, ಹತಾಶರಾಗಲಿಲ್ಲ. 2014ರಲ್ಲಿ ಸಿಮೆಂಟ್ ಬ್ಯುಸಿನೆಸ್ಗೆ ಇಳಿದಾಗ ವಿಶ್ವಾಸ ಸಿಕ್ಕಿತು. ಟಿಎಂಟಿ ರೀಬಾರ್ ಉದ್ಯಮ ಕೈಹಿಡಿಯಿತು. ಸಿಮೆಂಟ್, ಮೈನಿಂಗ್ ಮತ್ತು ಟ್ರಾನ್ಸ್ಪೋರ್ಟ್ ಸೆಕ್ಟರ್ನಲ್ಲಿ ಬ್ಯುಸಿನೆಸ್ ಬೆಳೆಸಿದರು. ಹಲವು ಟ್ರಕ್ಗಳನ್ನು ಖರೀದಿಸಿದರು. ಈ ಹಂತದಲ್ಲೇ ಅವರಿಗೆ ಭವಿಷ್ಯದ ಯೋಜನೆಗಳು ಮನಸ್ಸಿಗೆ ಬಂದವು. ಅಂಥ ಒಂದು ಆಲೋಚನೆಯ ಕುಡಿಯೇ ಶಂಖ್ ಏರ್.
ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್ಪ್ರೆಸ್ಗೂ ಸಿಕ್ಕಿತು ಎನ್ಒಸಿ
ನಾಲ್ಕು ವರ್ಷದ ಹಿಂದೆ, ಟ್ರಕ್ನಂತೆ ವಿಮಾನಗಳನ್ನೂ ಓಡಿಸಬೇಕೆಂಬ ಆಲೋಚನೆ ವಿಶ್ವಕರ್ಮರ ತಲೆಯಲ್ಲಿ ಮೊದಲಿಟ್ಟಿತು. ಅಷ್ಟಕ್ಕೇ ಅದು ನಿಲ್ಲಲಿಲ್ಲ. ವಿಮಾನ ಸಂಸ್ಥೆ ಕಟ್ಟಲು ಏನು ಬೇಕು, ಆ ಉದ್ಯಮ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ಅರಿಯಲು ಯತ್ನಿಸಿದರು. ತಮ್ಮ ಟ್ರಾನ್ಸ್ಪೋರ್ಟ್ ಬ್ಯುಸಿನೆಸ್ನಲ್ಲಿ ವಿಮಾನದ ಸೇವೆಯನ್ನೂ ನಡೆಸಿ ಅನುಭವ ಇದ್ದ ಕಾರಣ ಶಂಖ್ ಏರ್ಗೆ ಸರ್ಕಾರದಿಂದ ಎನ್ಒಸಿ ಕೂಡ ಸಿಕ್ಕಿತು.
ಬಸ್, ಟೆಂಪೋದಂತೆ ವಿಮಾನವೂ ಕೂಡ ಒಂದು ಸಾರಿಗೆ ವಾಹನ ಎನ್ನುವ ವಿಶ್ವಕರ್ಮ
ವಿಮಾನಗಳ ಬಗ್ಗೆ ಶ್ರವಣಕುಮಾರ್ ವಿಶ್ವಕರ್ಮ ಅವರಿಗಿರುವ ಧೋರಣೆ ಗಮನಾರ್ಹ ಎನಿಸುತ್ತದೆ. ಅವರ ಪ್ರಕಾರ ವಿಮಾನ ಎಂಬುದು ಬಸ್ ಅಥವಾ ಟೆಂಪೋ ರೀತಿಯಲ್ಲೇ ಒಂದು ಸಾರಿಗೆ ವಾಹನ ಮಾತ್ರ. ಅದನ್ನು ಬೇರೆ ರೀತಿಯಲ್ಲಿ ನೋಡಬಾರದು ಎಂದು ಶಂಖ್ ಏರ್ನ ಛೇರ್ಮನ್ ಆಗಿರುವ ಅವರು ಹೇಳುತ್ತಾರೆ.
ಇದನ್ನೂ ಓದಿ: ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಪಡೆದು, ಯಾರಿಗೋ ಪಾಸ್ವರ್ಡ್ ಕೊಟ್ಟು, ದಿನಸಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ
ಶಂಖ್ ಏರ್ ಇದೇ ಜನವರಿ ತಿಂಗಳಲ್ಲಿ ಕಾರ್ಯಾಚರಣೆಗೆ ಇಳಿಯುತ್ತದೆ. ಆರಂಭದಲ್ಲಿ ಏರ್ಬಸ್ನ ಮೂರು ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಲಕ್ನೋ, ಮುಂಬೈ, ದೆಹಲಿ ಮತ್ತಿತರ ಕೆಲ ನಗರಗಳಿಗೆ ಇವರ ವಿಮಾನಗಳ ಹಾರಾಟ ನಡೆಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




