Gautam Adani: 100 ಬಿಲಿಯನ್ USD ಆಸ್ತಿಯೊಂದಿಗೆ ವಿಶ್ವದ 10ನೇ ಸಿರಿವಂತ ಗೌತಮ್ ಅದಾನಿ ಭಾರತದಲ್ಲಿ ಅಂಬಾನಿಯನ್ನು ಹಿಂದಿಕ್ಕಿ ನಂಬರ್ 1

ಗೌತಮ್ ಅದಾನಿ ಆಸ್ತಿ ಮೌಲ್ಯ 100 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದ್ದು, ಭಾರತದ ನಂಬರ್ ಒನ್ ಹಾಗೂ ವಿಶ್ವದ ಹತ್ತನೇ ಶ್ರೀಮಂತ ಎನಿಸಿಕೊಂಡಿದ್ದಾರೆ.

Gautam Adani: 100 ಬಿಲಿಯನ್ USD ಆಸ್ತಿಯೊಂದಿಗೆ ವಿಶ್ವದ 10ನೇ ಸಿರಿವಂತ ಗೌತಮ್ ಅದಾನಿ ಭಾರತದಲ್ಲಿ ಅಂಬಾನಿಯನ್ನು ಹಿಂದಿಕ್ಕಿ ನಂಬರ್ 1
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Apr 02, 2022 | 11:31 PM

100 ಬಿಲಿಯನ್ ಯುಎಸ್​ಡಿ, ಅಂದರೆ 10 ಸಾವಿರ ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ ವಿಶ್ವದ ಉದ್ಯಮಿಗಳ ಸಾಲಿಗೆ ಈಗ ಅದಾನಿ ಸಮೂಹದ ಗೌತಮ್ ಅದಾನಿ (Gautam Adani) ಸೇರ್ಪಡೆ ಆಗಿದ್ದಾರೆ. ಅಂದಹಾಗೆ ಭಾರತದ ಅತಿ ಶ್ರೀಮಂತ ಕೂಡ ಅವರೇ. ಕಳೆದ ಕೆಲವು ಸಮಯದಿಂದ ಭಾರತ ಮತ್ತು ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿದ್ದ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದಾರೆ. ಬಿಎಸ್​ಇ ಹಾಗೂ ಎನ್​ಎಸ್​ಇಯಲ್ಲಿ ಅದಾನಿ ಸಮೂಹದ ಲಿಸ್ಟೆಡ್ ಕಂಪೆನಿಗಳ ಷೇರು ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಗೌತಮ್ ಅವರ ಆಸ್ತಿ ಮೌಲ್ಯದಲ್ಲಿ ಹೆಚ್ಚಳ ಆಗಿದೆ. ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಏಪ್ರಿಲ್ 2, 2022ರಂದು ಗೌತಮ್ ಅದಾನಿ ನಿವ್ವಳ ಆಸ್ತಿ ಮೌಲ್ಯ 100 ಬಿಲಿಯನ್ ಡಾಲರ್​ಗೆ ಏರಿಕೆ ಆಗಿ, ಹತ್ತನೇ ಸ್ಥಾನಕ್ಕೆ ಒಯ್ದಿತು. ಈ ವರ್ಷ ಅದಾನಿ ಅವರ ಆಸ್ತಿ 2350 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. 10 ಸಾವಿರ ಕೋಟಿ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟು ಗೊತ್ತೆ? 7,59,955 ಕೋಟಿ (7.59 ಲಕ್ಷ ಕೋಟಿ ರೂಪಾಯಿ) ಆಗುತ್ತದೆ.

ಆರಂಭದಲ್ಲೇ ಹೇಳಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ ಅದಾನಿ. ಹಾಗಂತ ತುಂಬ ದೊಡ್ಡ ವ್ಯತ್ಯಾಸ ಏನಿಲ್ಲ. ಹನ್ನೊಂದನೇ ಸ್ಥಾನದಲ್ಲಿ ಇರುವ ಅಂಬಾನಿ ಅವರು ಆಸ್ತಿ ಮೌಲ್ಯ 9900 ಕೋಟಿ ಅಮೆರಿಕನ್ ಡಾಲರ್. ಈ ವರ್ಷ ಇಲ್ಲಿಯವರೆಗೆ ಅವರ ಆಸ್ತಿ ಮೌಲ್ಯ 903 ಕೋಟಿ ಅಮೆರಿಕನ್ ಡಾಲರ್​ನಷ್ಟು ಹೆಚ್ಚಾಗಿದೆ. ಬಿಲಿಯನೇರ್ ಸೂಚ್ಯಂಕದಲ್ಲಿ ಅದಾನಿ ಹಾಗೂ ಅಂಬಾನಿ ಬಹಳ ಹತ್ತಿರ ಹತ್ತಿರ ಇದ್ದಾರೆ. ಒಬ್ಬರನ್ನೊಬ್ಬರು ಹಲವು ಸಂದರ್ಭಗಳಲ್ಲಿ ಮೀರಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು 273 ಬಿಲಿಯನ್ ಯುಎಸ್​ಡಿ ಇದೆ. ಎರಡರಲ್ಲಿ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಸ್ 188 ಶತಕೋಟಿ ಡಾಲರ್, ಮೂರರಲ್ಲಿ LVMH ಮೊಯೆಟ್ ಹೆನ್ನೆಸ್ಸಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ಆಸ್ತಿ 148 ಶತಕೋಟಿ ಡಾಲರ್ ಜತೆಗೆ ಮೂರನೇ ಸ್ಥಾನದಲ್ಲಿದ್ದಾರೆ. ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಬರ್ಕ್‌ಷೈರ್ ಹಾಥ್‌ವೇ ಸಿಇಒ ವಾರೆನ್ ಬಫೆಟ್ ಕ್ರಮವಾಗಿ 133 ಬಿಲಿಯನ್ ಮತ್ತು 127 ಬಿಲಿಯನ್ ಯುಎಸ್​ಡಿ ನಿವ್ವಳ ಮೌಲ್ಯದೊಂದಿಗೆ ಬಿಲಿಯನೇರ್ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಗೂಗಲ್​ನ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಸಹ-ಸಂಸ್ಥಾಪಕರು 125 ಶತಕೋಟಿ ಯುಎಸ್​ಡಿ ಮತ್ತು 119 ಶತಕೋಟಿ ಅಮೆರಿಕನ್​ ಡಾಲರ್​ನೊಂದಿಗೆ ಆರು ಮತ್ತು ಏಳನೇ ಸ್ಥಾನದಲ್ಲಿದ್ದಾರೆ.

ಮೈಕ್ರೋಸಾಫ್ಟ್‌ನ ಮಾಜಿ ಸಿಇಒ ಸ್ಟೀವ್ ಬಲ್ಮರ್ 108 ಬಿಲಿಯನ್ ಯುಎಸ್​ಡಿ ಜತೆ 8ನೇ ಸ್ಥಾನ, ಒರಾಕಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ 103 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

Published On - 11:30 pm, Sat, 2 April 22