Gold Price Today: ಬಂಗಾರ ಖರೀದಿಸಲು ಯೋಚಿಸಿದ್ದೀರಾ?; ಮತ್ತೆ ಕುಸಿತ ಕಂಡ ಚಿನ್ನದ ಬೆಲೆ

Silver Rate Today: ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

Gold Price Today:  ಬಂಗಾರ ಖರೀದಿಸಲು ಯೋಚಿಸಿದ್ದೀರಾ?; ಮತ್ತೆ ಕುಸಿತ ಕಂಡ ಚಿನ್ನದ ಬೆಲೆ
ಸಾಂದರ್ಭಿಕ ಚಿತ್ರ
Edited By:

Updated on: Mar 04, 2022 | 6:02 AM

Gold and Silver Rate: ನಿನ್ನೆ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಂದು ಮತ್ತೆ ಕುಸಿತ ಕಂಡಿದೆ. ಭಾರತದಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ಚಿನ್ನದ ಬೆಲೆ (Gold Rate) 440 ರೂ. ಕಡಿಮೆಯಾಗಿದ್ದು, ಇದರಿಂದ ಮದುವೆ ಮತ್ತಿತರ ಸಮಾರಂಭದ ತಯಾರಿಯಲ್ಲಿರುವ ಕೆಳ ಹಾಗೂ ಮಧ್ಯಮ ವರ್ಗದವರಿಗೆ ಸಂತೋಷವಾಗಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 440 ರೂ. ಇಳಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ (Silver Price) ಕೂಡ 2 ದಿನಗಳಿಂದ ಏರಿಕೆಯಾಗಿದ್ದು, ನಿನ್ನೆಗಿಂತ ಇಂದು 100 ರೂ. ಹೆಚ್ಚಳವಾಗಿದೆ.

ಭಾರತದ ಅನೇಕ ನಗರಗಳಲ್ಲಿ ಚಿನ್ನದ ದರ ನಿನ್ನೆ ಭಾರೀ ಏರಿಕೆಯಾಗಿತ್ತು. ಆದರೆ, ಇದೀಗ 10 ಗ್ರಾಂ ಚಿನ್ನಕ್ಕೆ 440 ರೂ. ಇಳಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,700 ರೂ. ಇದ್ದುದು ಇಂದು 47,300 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,040 ರೂ. ಇದ್ದುದು 51,600 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,470 ರೂ, ಮುಂಬೈ- 47,300 ರೂ, ದೆಹಲಿ- 47,300 ರೂ, ಕೊಲ್ಕತ್ತಾ- 47,300 ರೂ, ಬೆಂಗಳೂರು- 47,300 ರೂ, ಹೈದರಾಬಾದ್- 47,300 ರೂ, ಕೇರಳ- 47,300 ರೂ, ಪುಣೆ- 47,350 ರೂ, ಮಂಗಳೂರು- 47,300 ರೂ, ಮೈಸೂರು- 47,300 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,850 ರೂ, ಮುಂಬೈ- 51,600 ರೂ, ದೆಹಲಿ- 51,600 ರೂ, ಕೊಲ್ಕತ್ತಾ- 51,600 ರೂ, ಬೆಂಗಳೂರು- 51,600 ರೂ, ಹೈದರಾಬಾದ್- 51,600 ರೂ, ಕೇರಳ- 51,600 ರೂ, ಪುಣೆ- 51,650 ರೂ, ಮಂಗಳೂರು- 51,600 ರೂ, ಮೈಸೂರು- 51,600 ರೂ. ಇದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಕೊಂಚ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 100 ರೂ. ಏರಿಕೆಯಾಗಿದೆ. ನಿನ್ನೆ ಒಂದೇ ದಿನದಲ್ಲಿ 2,200 ರೂ. ಏರಿಕೆ ಕಂಡಿದ್ದ ಬೆಳ್ಳಿ ದರದಲ್ಲಿ ಇಂದು ಹೆಚ್ಚೇನೂ ಏರಿಕೆಯಾಗಿಲ್ಲ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 67,200 ರೂ. ಇದ್ದುದು 67,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,500 ರೂ, ಮೈಸೂರು- 72,500 ರೂ., ಮಂಗಳೂರು- 72,500 ರೂ., ಮುಂಬೈ- 67,300 ರೂ, ಚೆನ್ನೈ- 72,500 ರೂ, ದೆಹಲಿ- 67,300 ರೂ, ಹೈದರಾಬಾದ್- 72,500 ರೂ, ಕೊಲ್ಕತ್ತಾ- 67,300 ರೂ. ಇದೆ.

ಇದನ್ನೂ ಓದಿ: Gold Price Today: ಮತ್ತೆ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

Gold Rate: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ಬೆಂಗಳೂರು ಹಾಗೂ ಇತರ ನಗರಗಳಲ್ಲಿ ದರ ಎಷ್ಟಿದೆ?

Web contact

TV9 Kannada

Read More
Follow Us