Gold Price Today: ಮತ್ತೆ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಎಷ್ಟು ಗೊತ್ತಾ?

Silver Price Today: ಇಂದು 10 ಗ್ರಾಂ ಚಿನ್ನಕ್ಕೆ 100 ರೂ. ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ ಇಂದು 1 ಕೆಜಿಗೆ 300 ರೂ. ಏರಿಕೆಯಾಗಿದೆ.

Gold Price Today: ಮತ್ತೆ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಎಷ್ಟು ಗೊತ್ತಾ?
ಚಿನ್ನದ ಆಭರಣ
Edited By:

Updated on: Mar 22, 2022 | 5:55 AM

ಬೆಂಗಳೂರು: ನೀವೇನಾದರೂ ಚಿನ್ನ ಖರೀದಿಸಲು ಯೋಚಿಸಿದ್ದೀರಾ? ಇನ್ನೇನು ಮದುವೆ ಇತ್ಯಾದಿ ಶುಭ ಸಮಾರಂಭಗಳ ಸೀಸನ್ ಶುರುವಾಗಿರುವುದರಿಂದ ಚಿನ್ನಾಭರಣ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ನಡುವೆ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 100 ರೂ. ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು 1 ಕೆಜಿಗೆ 300 ರೂ. ಏರಿಕೆಯಾಗಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಆದರೆ, ಇಂದು ಬಂಗಾರದ ದರ ಕುಸಿತ ಕಂಡಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ. ಇದ್ದುದು 47,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಇದ್ದುದು 51,700 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,930 ರೂ. ಮುಂಬೈ- 47,400 ರೂ, ದೆಹಲಿ- 47,300 ರೂ, ಕೊಲ್ಕತ್ತಾ- 47,400 ರೂ, ಬೆಂಗಳೂರು- 47,400 ರೂ, ಹೈದರಾಬಾದ್- 47,400 ರೂ, ಕೇರಳ- 47,400 ರೂ, ಪುಣೆ- 47,500 ರೂ, ಮಂಗಳೂರು- 47,400 ರೂ, ಮೈಸೂರು- 47,400 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,290 ರೂ, ಮುಂಬೈ- 51,700 ರೂ, ದೆಹಲಿ- 51,700 ರೂ, ಕೊಲ್ಕತ್ತಾ- 51,700 ರೂ, ಬೆಂಗಳೂರು- 51,700 ರೂ, ಹೈದರಾಬಾದ್- 51,700 ರೂ, ಕೇರಳ- 51,700 ರೂ, ಪುಣೆ- 51,800 ರೂ, ಮಂಗಳೂರು- 51,700 ರೂ, ಮೈಸೂರು- 51,700 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.

ಇಂದಿನ ಬೆಳ್ಳಿಯ ದರ:
ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು 300 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,000 ರೂ. ಇದ್ದುದು ಇಂದು 68,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,600 ರೂ, ಮೈಸೂರು- 72,600 ರೂ., ಮಂಗಳೂರು- 72,600 ರೂ., ಮುಂಬೈ- 68,300 ರೂ, ಚೆನ್ನೈ- 72,600 ರೂ, ದೆಹಲಿ- 68,300 ರೂ, ಹೈದರಾಬಾದ್- 72,600 ರೂ, ಕೊಲ್ಕತ್ತಾ- 68,300 ರೂ. ಇದೆ. ವಿವಿಧ ನಗರಗಳಲ್ಲಿ ಕೂಡ ಇಂದು ಬೆಳ್ಳಿ ದರ ವ್ಯತ್ಯಾಸವಾಗಿಲ್ಲ.

ಇದನ್ನೂ ಓದಿ: Gold Price on March 20: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್; 1,000 ರೂ. ಕುಸಿತ ಕಂಡ ಬೆಳ್ಳಿ ಬೆಲೆ

Gold Price Today: ಮದುವೆಗೆ ಬಂಗಾರ ಖರೀದಿಸಲು ಯೋಚಿಸಿದ್ದೀರಾ?; ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

TV9 Web

TV9 Kannada

Read More
Loading...
Unable to load recommendations.
Follow Us