Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ

Bullion Market 2025 November 16th: ಈ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಭರ್ಜರಿ ಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 255 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 11,720 ರೂ ಇದ್ದದ್ದು 11,465 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 12,508 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 173 ರೂನಿಂದ 169 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 183 ರೂನಿಂದ 175 ರೂಗೆ ಇಳಿದಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ
ಚಿನ್ನ

Updated on: Nov 16, 2025 | 4:03 PM

ಬೆಂಗಳೂರು, ನವೆಂಬರ್ 16: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಕಡಿಮೆ ಆಗಿದೆ. ಗ್ರಾಮ್​ಗೆ ಬರೋಬ್ಬರಿ 255 ರೂಗಳಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ (Silver rates) 4-8 ರೂಗಳಷ್ಟು ಕುಸಿದಿದೆ. ಮೊನ್ನೆ ಇದರ ಬೆಲೆ ಒಮ್ಮೆಲೇ 10 ರೂ ಜಿಗಿದಿತ್ತು. ವಿದೇಶಗಳಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾಕಷ್ಟು ಕಡಿಮೆ ಆಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,14,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 16ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,508 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,465 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,381 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,508 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,465 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,465 ರೂ
  • ಚೆನ್ನೈ: 11,550 ರೂ
  • ಮುಂಬೈ: 11,465 ರೂ
  • ದೆಹಲಿ: 11,480 ರೂ
  • ಕೋಲ್ಕತಾ: 11,465 ರೂ
  • ಕೇರಳ: 11,465 ರೂ
  • ಅಹ್ಮದಾಬಾದ್: 11,470 ರೂ
  • ಜೈಪುರ್: 11,480 ರೂ
  • ಲಕ್ನೋ: 11,480 ರೂ
  • ಭುವನೇಶ್ವರ್: 11,465 ರೂ

ಇದನ್ನೂ ಓದಿ: ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಮ್; ಕಾರಣ ಇದು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 533 ರಿಂಗಿಟ್ (11,439 ರುಪಾಯಿ)
  • ದುಬೈ: 455.50 ಡಿರಾಮ್ (10,999 ರುಪಾಯಿ)
  • ಅಮೆರಿಕ: 127 ಡಾಲರ್ (11,264 ರುಪಾಯಿ)
  • ಸಿಂಗಾಪುರ: 165.30 ಸಿಂಗಾಪುರ್ ಡಾಲರ್ (11,290 ರುಪಾಯಿ)
  • ಕತಾರ್: 454.50 ಕತಾರಿ ರಿಯಾಲ್ (11,058 ರೂ)
  • ಸೌದಿ ಅರೇಬಿಯಾ: 463 ಸೌದಿ ರಿಯಾಲ್ (10,950 ರುಪಾಯಿ)
  • ಓಮನ್: 48 ಒಮಾನಿ ರಿಯಾಲ್ (11,057 ರುಪಾಯಿ)
  • ಕುವೇತ್: 37.35 ಕುವೇತಿ ದಿನಾರ್ (10,801 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 169 ರೂ
  • ಚೆನ್ನೈ: 175 ರೂ
  • ಮುಂಬೈ: 169 ರೂ
  • ದೆಹಲಿ: 169 ರೂ
  • ಕೋಲ್ಕತಾ: 169 ರೂ
  • ಕೇರಳ: 175 ರೂ
  • ಅಹ್ಮದಾಬಾದ್: 169 ರೂ
  • ಜೈಪುರ್: 169 ರೂ
  • ಲಕ್ನೋ: 169 ರೂ
  • ಭುವನೇಶ್ವರ್: 175 ರೂ
  • ಪುಣೆ: 169

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us