Gold Rate Today Bangalore: 13,000 ರೂ ಗಡಿದಾಟಿದ ಅಪರಂಜಿ ಚಿನ್ನದ ಬೆಲೆ

Bullion Market 2025 December 1st: ಚಿನ್ನ, ಬೆಳ್ಳಿ ಬೆಲೆಗಳೆರಡೂ ಸೋಮವಾರವೂ ಹೆಚ್ಚಿದೆ. ಚಿನ್ನದ ಬೆಲೆ ಗ್ರಾಮ್​ಗೆ 60 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 3 ರೂ ಏರಿದೆ. ಆಭರಣ ಚಿನ್ನದ ಬೆಲೆ 11,900 ರೂನಿಂದ 11,960 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,048 ರೂ ಮುಟ್ಟಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 185 ರೂನಿಂದ 188 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 196 ರೂಗೆ ಏರಿದೆ.

Gold Rate Today Bangalore: 13,000 ರೂ ಗಡಿದಾಟಿದ ಅಪರಂಜಿ ಚಿನ್ನದ ಬೆಲೆ
ಚಿನ್ನ

Updated on: Dec 01, 2025 | 11:47 AM

ಬೆಂಗಳೂರು, ಡಿಸೆಂಬರ್ 1: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಅಪರಂಜಿ ಚಿನ್ನದ ಬೆಲೆ 13,000 ರೂ ಗಡಿ ದಾಟಿದೆ. ಆಭರಣ ಚಿನ್ನದ ಬೆಲೆ 12,000 ರೂ ಗಡಿ ಸಮೀಪ ಇದೆ. ಚೆನ್ನೈನಲ್ಲಿ ಇದರ ಬೆಲೆ 12,000 ರೂ ಗಡಿಯನ್ನೂ ದಾಟಿದೆ. ಇಂದು ಸೋಮವಾರ ಚಿನ್ನದ ಬೆಲೆ (gold rate) ಗ್ರಾಮ್​ಗೆ 60 ರೂ ಹೆಚ್ಚಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿ ಇದೆ. ಇನ್ನು, ಬೆಳ್ಳಿ ಬೆಲೆಯ ಭರ್ಜರಿ ಏರಿಕೆಯ ಓಟ ಮುಂದುವರಿದಿದೆ. ಇಂದು ಗ್ರಾಮ್​ಗೆ 3 ರೂ ಹೆಚ್ಚಿದೆ. ಇದರೊಂದಿಗೆ ಬೆಳ್ಳಿ ಬೆಲೆ 185 ರೂನಿಂದ 188 ರೂ ಮುಟ್ಟಿದೆ. ಚೆನ್ನೈ ಮೊದಲಾದ ಕಡೆ ಇದರ ಬೆಲೆ 4 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,19,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,30,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,19,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 18,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 1ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,048 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,960 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,786 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,048 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,960 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,960 ರೂ
  • ಚೆನ್ನೈ: 12,070 ರೂ
  • ಮುಂಬೈ: 11,960 ರೂ
  • ದೆಹಲಿ: 11,975 ರೂ
  • ಕೋಲ್ಕತಾ: 11,960 ರೂ
  • ಕೇರಳ: 11,960 ರೂ
  • ಅಹ್ಮದಾಬಾದ್: 11,965 ರೂ
  • ಜೈಪುರ್: 11,975 ರೂ
  • ಲಕ್ನೋ: 11,975 ರೂ
  • ಭುವನೇಶ್ವರ್: 11,960 ರೂ

ಇದನ್ನೂ ಓದಿ: LPG Cylinder Price: 19 ಕಿಲೋ ಎಲ್​ಪಿಜಿ ಬೆಲೆ 10.50 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 545 ರಿಂಗಿಟ್ (11,795 ರುಪಾಯಿ)
  • ದುಬೈ: 470.75 ಡಿರಾಮ್ (11,467 ರುಪಾಯಿ)
  • ಅಮೆರಿಕ: 131.50 ಡಾಲರ್ (11,766 ರುಪಾಯಿ)
  • ಸಿಂಗಾಪುರ: 170.90 ಸಿಂಗಾಪುರ್ ಡಾಲರ್ (11,793 ರುಪಾಯಿ)
  • ಕತಾರ್: 469.50 ಕತಾರಿ ರಿಯಾಲ್ (11,527 ರೂ)
  • ಸೌದಿ ಅರೇಬಿಯಾ: 478 ಸೌದಿ ರಿಯಾಲ್ (11,400 ರುಪಾಯಿ)
  • ಓಮನ್: 49.55 ಒಮಾನಿ ರಿಯಾಲ್ (11,515 ರುಪಾಯಿ)
  • ಕುವೇತ್: 38.65 ಕುವೇತಿ ದಿನಾರ್ (11,262 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 188 ರೂ
  • ಚೆನ್ನೈ: 196 ರೂ
  • ಮುಂಬೈ: 188 ರೂ
  • ದೆಹಲಿ: 188 ರೂ
  • ಕೋಲ್ಕತಾ: 188 ರೂ
  • ಕೇರಳ: 196 ರೂ
  • ಅಹ್ಮದಾಬಾದ್: 188 ರೂ
  • ಜೈಪುರ್: 188 ರೂ
  • ಲಕ್ನೋ: 188 ರೂ
  • ಭುವನೇಶ್ವರ್: 196 ರೂ
  • ಪುಣೆ: 188

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us