Gold Rate Today Bangalore: ಸತತ ಏರಿಕೆ ಬಳಿಕ ಶುಕ್ರವಾರ ಕುಸಿದ ಚಿನ್ನ, ಬೆಳ್ಳಿ ಬೆಲೆ

Bullion Market 2025 June 20th: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಹೊಯ್ದಾಟ ಮುಂದುವರಿದಿದೆ. ಸತತ ಎರಡು ದಿನ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆಗಳು ಇವತ್ತು ತಗ್ಗಿವೆ. ಆಭರಣ ಚಿನ್ನದ ಬೆಲೆ 9,210 ರೂ ಇದ್ದರೆ ಅಪರಂಜಿ ಚಿನ್ನದ ಬೆಲೆ 10,048 ರೂಗೆ ಇಳಿದಿದೆ. 18 ಕ್ಯಾರಟ್ ಚಿನ್ನದ ಬೆಲೆ 9,536 ರೂ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 2 ರೂ ಕಡಿಮೆ ಆಗಿದೆ. 112 ರೂನಿಂದ 110 ರೂಗೆ ಇಳಿದಿದೆ. ತಮಿಳುನಾಡು, ಕೇರಳ ಇತ್ಯಾದಿ ಕಡೆ 120 ರೂಗೆ ಬೆಲೆ ಇಳಿಕೆಯಾಗಿದೆ.

Gold Rate Today Bangalore: ಸತತ ಏರಿಕೆ ಬಳಿಕ ಶುಕ್ರವಾರ ಕುಸಿದ ಚಿನ್ನ, ಬೆಳ್ಳಿ ಬೆಲೆ
ಚಿನ್ನ

Updated on: Jun 20, 2025 | 10:15 AM

ಬೆಂಗಳೂರು, ಜೂನ್ 20: ಸತತ ಏರುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತು ಶುಕ್ರವಾರ ಕಡಿಮೆಗೊಂಡಿವೆ. ಚಿನ್ನದ ಬೆಲೆ ಗ್ರಾಮ್​​ಗೆ 50 ರೂನಷ್ಟು ಕಡಿಮೆಯಾಗಿದೆ. ಬೆಳ್ಳಿ ಬೆಲೆ (Silver Rates) ಇನ್ನೂ ಭರ್ಜರಿ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 9,265 ರೂನಿಂದ 9,210 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 10,048 ರೂಗೆ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ಇಳಿಮುಖವಾಗಿದೆ. ತಜ್ಞರೂ ಕೂಡ ಈ ಹಳದಿಲೋಹದ ಬೆಲೆ ಈ ವರ್ಷ ಶೇ. 30ರಷ್ಟು ಇಳಿಯಬಹುದು ಎಂದು ಅಂದಾಜಿಸಿದ್ದಾರೆ. ಬೆಳ್ಳಿ ಬೆಲೆ ಇವತ್ತು ಗ್ರಾಮ್​​ಗೆ ಬರೋಬ್ಬರಿ 2 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,00,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 20ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,480 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,360 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,480 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,100 ರೂ
  • ಚೆನ್ನೈ: 92,100 ರೂ
  • ಮುಂಬೈ: 92,100 ರೂ
  • ದೆಹಲಿ: 92,250 ರೂ
  • ಕೋಲ್ಕತಾ: 92,100 ರೂ
  • ಕೇರಳ: 92,100 ರೂ
  • ಅಹ್ಮದಾಬಾದ್: 92,150 ರೂ
  • ಜೈಪುರ್: 92,250 ರೂ
  • ಲಕ್ನೋ: 92,250 ರೂ
  • ಭುವನೇಶ್ವರ್: 92,100 ರೂ

ಇದನ್ನೂ ಓದಿ: ಭರ್ಜರಿ ವೀವ್ಸ್ ಕೊಟ್ಟ ಆರ್​​ಸಿಬಿ; ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ; ಬೇರೆ ಕ್ರೀಡೆಗಳಿಗೆ ಇರೋ ವೀಕ್ಷಕರ ಬಳಗ ಎಷ್ಟು?

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,510 ರಿಂಗಿಟ್ (91,850 ರುಪಾಯಿ)
  • ದುಬೈ: 3,760 ಡಿರಾಮ್ (88,730 ರುಪಾಯಿ)
  • ಅಮೆರಿಕ: 1,045 ಡಾಲರ್ (90,560 ರುಪಾಯಿ)
  • ಸಿಂಗಾಪುರ: 1,347 ಸಿಂಗಾಪುರ್ ಡಾಲರ್ (90,870 ರುಪಾಯಿ)
  • ಕತಾರ್: 3,775 ಕತಾರಿ ರಿಯಾಲ್ (89,740 ರೂ)
  • ಸೌದಿ ಅರೇಬಿಯಾ: 3,830 ಸೌದಿ ರಿಯಾಲ್ (88,450 ರುಪಾಯಿ)
  • ಓಮನ್: 398.50 ಒಮಾನಿ ರಿಯಾಲ್ (89,690 ರುಪಾಯಿ)
  • ಕುವೇತ್: 307 ಕುವೇತಿ ದಿನಾರ್ (86,830 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,000 ರೂ
  • ಚೆನ್ನೈ: 12,000 ರೂ
  • ಮುಂಬೈ: 11,000 ರೂ
  • ದೆಹಲಿ: 11,000 ರೂ
  • ಕೋಲ್ಕತಾ: 11,000 ರೂ
  • ಕೇರಳ: 12,000 ರೂ
  • ಅಹ್ಮದಾಬಾದ್: 11,000 ರೂ
  • ಜೈಪುರ್: 11,000 ರೂ
  • ಲಕ್ನೋ: 11,000 ರೂ
  • ಭುವನೇಶ್ವರ್: 12,000 ರೂ
  • ಪುಣೆ: 11,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us