Gold Rate Today Bangalore: ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ಬೆಲೆ 188 ರೂ

Bullion Market 2025 December 2nd: ಇಂದು ಮಂಗಳವಾರ ಚಿನ್ನದ ಬೆಲೆ ಗ್ರಾಮ್​ಗೆ 25 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 11,960 ರೂನಿಂದ 11,935 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,020 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 188 ರೂ ಇದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 196 ರೂ ಇದೆ.

Gold Rate Today Bangalore: ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ಬೆಲೆ 188 ರೂ
ಚಿನ್ನ

Updated on: Dec 02, 2025 | 11:03 AM

ಬೆಂಗಳೂರು, ಡಿಸೆಂಬರ್ 2: ಸತತ ಏರಿಕೆ ಬಳಿಕ ಚಿನ್ನದ ಬೆಲೆ (Gold rate) ಮಂಗಳವಾರ ಸ್ವಲ್ಪ ತಗ್ಗಿದೆ. ಇಂದು ಇದರ ಬೆಲೆ ಗ್ರಾಮ್​ಗೆ 25 ರೂ ಕಡಿಮೆಗೊಂಡಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಸ್ವರ್ಣ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಹಲವು ದಿನಗಳಿಂದ ಭರ್ಜರಿ ಏರಿಕೆ ಕಾಣುತ್ತಿದ್ದ ಬೆಳ್ಳಿ ಬೆಲೆ ಇಂದು ಯಾವ ಬದಲಾವಣೆ ಕಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,19,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,30,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,19,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 18,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 2ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,765 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,020 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,935 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 188 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,935 ರೂ
  • ಚೆನ್ನೈ: 12,040 ರೂ
  • ಮುಂಬೈ: 11,935 ರೂ
  • ದೆಹಲಿ: 11,950 ರೂ
  • ಕೋಲ್ಕತಾ: 11,935 ರೂ
  • ಕೇರಳ: 11,935 ರೂ
  • ಅಹ್ಮದಾಬಾದ್: 11,940 ರೂ
  • ಜೈಪುರ್: 11,950 ರೂ
  • ಲಕ್ನೋ: 11,950 ರೂ
  • ಭುವನೇಶ್ವರ್: 11,935 ರೂ

ಇದನ್ನೂ ಓದಿ: ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 545 ರಿಂಗಿಟ್ (11,839 ರುಪಾಯಿ)
  • ದುಬೈ: 473.75 ಡಿರಾಮ್ (11,547 ರುಪಾಯಿ)
  • ಅಮೆರಿಕ: 131.50 ಡಾಲರ್ (11,803 ರುಪಾಯಿ)
  • ಸಿಂಗಾಪುರ: 170.60 ಸಿಂಗಾಪುರ್ ಡಾಲರ್ (11,809 ರುಪಾಯಿ)
  • ಕತಾರ್: 472 ಕತಾರಿ ರಿಯಾಲ್ (11,623 ರೂ)
  • ಸೌದಿ ಅರೇಬಿಯಾ: 481 ಸೌದಿ ರಿಯಾಲ್ (11,504 ರುಪಾಯಿ)
  • ಓಮನ್: 49.95 ಒಮಾನಿ ರಿಯಾಲ್ (11,645 ರುಪಾಯಿ)
  • ಕುವೇತ್: 38.68 ಕುವೇತಿ ದಿನಾರ್ (11,311 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 188 ರೂ
  • ಚೆನ್ನೈ: 196 ರೂ
  • ಮುಂಬೈ: 188 ರೂ
  • ದೆಹಲಿ: 188 ರೂ
  • ಕೋಲ್ಕತಾ: 188 ರೂ
  • ಕೇರಳ: 196 ರೂ
  • ಅಹ್ಮದಾಬಾದ್: 188 ರೂ
  • ಜೈಪುರ್: 188 ರೂ
  • ಲಕ್ನೋ: 188 ರೂ
  • ಭುವನೇಶ್ವರ್: 196 ರೂ
  • ಪುಣೆ: 188

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us