Gold Silver Price on 30th July: ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಬೆಲೆಯೂ ಹೆಚ್ಚಳ

Bullion Market 2024 July 30th: ಚಿನ್ನದ ಬೆಲೆ ಏರಿಕೆಯ ಟ್ರ್ಯಾಕ್​ನಲ್ಲಿ ಸಾಗುತ್ತಿದೆ. ಸತತವಾಗಿ ಬೆಲೆ ಹೆಚ್ಚಳವಾಗಿದೆ. ನಾಳೆ ಜುಲೈ 31ರಂದು ಅಮೆರಿಕದ ಫೆಡರಲ್ ರಿಸರ್ವ್​ನ ಬಡ್ಡಿದರ ಇಳಿಕೆಯಾದರೆ ಚಿನ್ನದ ಬೆಲೆ ಮತ್ತೆ ಇಳಿಯುವ ಸಾಧ್ಯತೆಯಂತೂ ಇದೆ.

Gold Silver Price on 30th July: ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಬೆಲೆಯೂ ಹೆಚ್ಚಳ
ಚಿನ್ನ

Updated on: Jul 30, 2024 | 5:00 AM

ಬೆಂಗಳೂರು, ಜುಲೈ 30: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಇನ್ನಷ್ಟು ಏರಿದೆ. ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆ ದುಬಾರಿಯಾಗಿದೆ. ನಿನ್ನೆ ಚಿನ್ನದ ಬೆಲೆ 25 ರೂನಷ್ಟು ಹೆಚ್ಚಾಗಿತ್ತು. ಇದರೊಂದಿಗೆ ಎರಡು ದಿನದಲ್ಲಿ ಗ್ರಾಮ್​ಗೆ 40 ರೂನಷ್ಟು ಬೆಲೆ ಹೆಚ್ಚಳವಾಗಿದೆ. ವಿದೇಶಗಳಲ್ಲೂ ಕೆಲವೆಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,400 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 30ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 69,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 69,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 63,400 ರೂ
  • ಚೆನ್ನೈ: 64,150 ರೂ
  • ಮುಂಬೈ: 63,400 ರೂ
  • ದೆಹಲಿ: 63,550 ರೂ
  • ಕೋಲ್ಕತಾ: 63,400 ರೂ
  • ಕೇರಳ: 63,400 ರೂ
  • ಅಹ್ಮದಾಬಾದ್: 63,450 ರೂ
  • ಜೈಪುರ್: 63,550 ರೂ
  • ಲಕ್ನೋ: 63,550 ರೂ
  • ಭುವನೇಶ್ವರ್: 63,400 ರೂ

ಇದನ್ನೂ ಓದಿ: ಸರ್ಕಾರಕ್ಕೆ ದುಬಾರಿಯಾಯ್ತಾ ಈ ಗೋಲ್ಡ್ ಸ್ಕೀಮ್? ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂತ್ಯಗೊಳ್ಳುತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,520 ರಿಂಗಿಟ್ (63,570 ರುಪಾಯಿ)
  • ದುಬೈ: 2,680 ಡಿರಾಮ್ (61,090 ರುಪಾಯಿ)
  • ಅಮೆರಿಕ: 730 ಡಾಲರ್ (61,120 ರುಪಾಯಿ)
  • ಸಿಂಗಾಪುರ: 1000 ಸಿಂಗಾಪುರ್ ಡಾಲರ್ (62,250 ರುಪಾಯಿ)
  • ಕತಾರ್: 2,730 ಕತಾರಿ ರಿಯಾಲ್ (62,690 ರೂ)
  • ಸೌದಿ ಅರೇಬಿಯಾ: 2,740 ಸೌದಿ ರಿಯಾಲ್ (61,150 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (62,960 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (59,590 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,400 ರೂ
  • ಚೆನ್ನೈ: 8,950 ರೂ
  • ಮುಂಬೈ: 8,500 ರೂ
  • ದೆಹಲಿ: 8,500 ರೂ
  • ಕೋಲ್ಕತಾ: 8,500 ರೂ
  • ಕೇರಳ: 8,950 ರೂ
  • ಅಹ್ಮದಾಬಾದ್: 8,500 ರೂ
  • ಜೈಪುರ್: 8,500 ರೂ
  • ಲಕ್ನೋ: 8,500 ರೂ
  • ಭುವನೇಶ್ವರ್: 8,950 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us