Gold Rate Today Bangalore: ಚಿನ್ನದ ಬೆಲೆ ಸತತ ಇಳಿಕೆ; ಮಂಗಳವಾರವೂ ಕುಸಿದ ಬೆಲೆ

Bullion Market 2025 March 25th: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​​ಗೆ 30 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,185 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,929 ರೂಗೆ ಕುಸಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮುಂತಾದ ಹೆಚ್ಚಿನ ಕಡೆ 101 ರೂ ಇದ್ದರೆ, ಚೆನ್ನೈ ಮೊದಲಾದ ಕೆಲವೆಡೆ ಬೆಲೆ 110 ರೂನಲ್ಲಿ ಮುಂದುವರಿದಿದೆ.

Gold Rate Today Bangalore: ಚಿನ್ನದ ಬೆಲೆ ಸತತ ಇಳಿಕೆ; ಮಂಗಳವಾರವೂ ಕುಸಿದ ಬೆಲೆ
ಚಿನ್ನ

Updated on: Mar 25, 2025 | 10:13 AM

ಬೆಂಗಳೂರು, ಮಾರ್ಚ್ 25: ಷೇರು ಮಾರುಕಟ್ಟೆಯಂತೆ ಚಿನಿವಾರಪೇಟೆಯಲ್ಲೂ (Bullion Market) ಮಾರ್ಕೆಟ್ ಕರೆಕ್ಷನ್ ನಡೆದಿದೆ. ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಉಬ್ಬಿಹೋಗಿದ್ದ ಚಿನ್ನದ ಬೆಲೆ (Gold Rates) ಸತತವಾಗಿ ಇಳಿಯುತ್ತಿದೆ. ಅಪರಂಜಿ ಚಿನ್ನದ ಬೆಲೆ ಗ್ರಾಮ್​​ಗೆ 33 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 8,200 ರೂಗಿಂತ ಕೆಳಗೆ ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಮುಖವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 81,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 89,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 81,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 25ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 81,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,290 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,990 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 81,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,290 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 81,850 ರೂ
  • ಚೆನ್ನೈ: 81,850 ರೂ
  • ಮುಂಬೈ: 81,850 ರೂ
  • ದೆಹಲಿ: 82,000 ರೂ
  • ಕೋಲ್ಕತಾ: 81,850 ರೂ
  • ಕೇರಳ: 81,850 ರೂ
  • ಅಹ್ಮದಾಬಾದ್: 81,900 ರೂ
  • ಜೈಪುರ್: 82,000 ರೂ
  • ಲಕ್ನೋ: 82,000 ರೂ
  • ಭುವನೇಶ್ವರ್: 81,850 ರೂ

ಇದನ್ನೂ ಓದಿ: ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್​ಗಳು, ಮಾರ್ಚ್ 31ರವರೆಗೆ ಲಭ್ಯ

ಇದನ್ನೂ ಓದಿ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ
ವಿಶ್ವದ ಶೇ. 11ರಷ್ಟು ಚಿನ್ನ ಭಾರತೀಯ ಹೆಂಗಸರ ಬಳಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,230 ರಿಂಗಿಟ್ (81,720 ರುಪಾಯಿ)
  • ದುಬೈ: 3,372.50 ಡಿರಾಮ್ (78,700 ರುಪಾಯಿ)
  • ಅಮೆರಿಕ: 915 ಡಾಲರ್ (78,460 ರುಪಾಯಿ)
  • ಸಿಂಗಾಪುರ: 1,255 ಸಿಂಗಾಪುರ್ ಡಾಲರ್ (80,390 ರುಪಾಯಿ)
  • ಕತಾರ್: 3,390 ಕತಾರಿ ರಿಯಾಲ್ (79,760 ರೂ)
  • ಸೌದಿ ಅರೇಬಿಯಾ: 3,430 ಸೌದಿ ರಿಯಾಲ್ (78,410 ರುಪಾಯಿ)
  • ಓಮನ್: 359 ಒಮಾನಿ ರಿಯಾಲ್ (79,990 ರುಪಾಯಿ)
  • ಕುವೇತ್: 276.10 ಕುವೇತಿ ದಿನಾರ್ (76,770 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,100 ರೂ
  • ಚೆನ್ನೈ: 11,000 ರೂ
  • ಮುಂಬೈ: 10,100 ರೂ
  • ದೆಹಲಿ: 10,100 ರೂ
  • ಕೋಲ್ಕತಾ: 10,100 ರೂ
  • ಕೇರಳ: 11,000 ರೂ
  • ಅಹ್ಮದಾಬಾದ್: 10,100 ರೂ
  • ಜೈಪುರ್: 10,100 ರೂ
  • ಲಕ್ನೋ: 10,100 ರೂ
  • ಭುವನೇಶ್ವರ್: 11,000 ರೂ
  • ಪುಣೆ: 10,100

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:09 am, Tue, 25 March 25

Loading...
Unable to load recommendations.
Follow Us