Gold Rate Today Bangalore: ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ಬೆಲೆ ತುಸು ಏರಿಕೆ

Bullion Market 2025 April 27th: ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ, ಬೆಳ್ಳಿ ಬೆಲೆಯಲ್ಲಿ ಅಲ್ಪ ಹೆಚ್ಚಳ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 9,005 ರೂನಿಂದ 9,002 ರೂಗೆ ಇಳಿದಿದೆ. 10 ಗ್ರಾಮ್ ಚಿನ್ನದ ಬೆಲೆ 90,020 ರೂ ಆಗಿದೆ. ಹೂಡಿಕೆಗೆ ಖರೀದಿಸುವ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಮ್​​ಗೆ 98,210 ರೂದೆ. ಬೆಳ್ಳಿ ಬೆಲೆ 102 ರೂಗೆ ಏರಿದೆ.

Gold Rate Today Bangalore: ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ಬೆಲೆ ತುಸು ಏರಿಕೆ
ಚಿನ್ನ

Updated on: Apr 27, 2025 | 11:06 AM

ಬೆಂಗಳೂರು, ಏಪ್ರಿಲ್ 27: ಚಿನ್ನದ ಬೆಲೆ ಕೆಲ ದಿನಗಳಿಂದ ಬಹುತೇಕ ಶಾಂತವಾಗಿದೆ. ವಾರದ ಆರಂಭದ ಎರಡು ದಿನದಲ್ಲಿ ಗ್ರಾಮ್​​ಗೆ 350ಕ್ಕೂ ಹೆಚ್ಚು ರುಪಾಯಿಗಳಷ್ಟು ಏರಿಕೆಗೊಂಡಿದ್ದ ಚಿನ್ನದ ಬೆಲೆ (Gold rate today) ನಂತರ ಇಳಿಕೆಯಾಗತೊಡಗಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಬಹಳ ಅಲ್ಪ ಇಳಿಕೆ ಆಗಿದೆ. ಗ್ರಾಮ್​​ಗೆ 3 ರೂ ಇಳಿದಿದೆ. ಬೆಳ್ಳಿ ಬೆಲೆ ಗ್ರಾಮ್​​ಗೆ ಒಂದು ರುನಷ್ಟು ಮೇಲೇರಿದೆ. ವಿದೇಶಗಳಲ್ಲಿ ವಾರಾಂತ್ಯದಲ್ಲಿ ಚಿನ್ನದ ಬೆಲೆ ಸ್ವಲ್ಪ ಏರುಪೇರು ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,020 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,210 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,020 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 27ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,020 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,210 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,660 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,020 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,210 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,020 ರೂ
  • ಚೆನ್ನೈ: 90,020 ರೂ
  • ಮುಂಬೈ: 90,020 ರೂ
  • ದೆಹಲಿ: 90,170 ರೂ
  • ಕೋಲ್ಕತಾ: 90,020 ರೂ
  • ಕೇರಳ: 90,020 ರೂ
  • ಅಹ್ಮದಾಬಾದ್: 90,070 ರೂ
  • ಜೈಪುರ್: 90,170 ರೂ
  • ಲಕ್ನೋ: 90,170 ರೂ
  • ಭುವನೇಶ್ವರ್: 90,020 ರೂ

ಇದನ್ನೂ ಓದಿ: 2026ರೊಳಗೆ ಅಮೆರಿಕದ ಮಾರುಕಟ್ಟೆಗೆ ಶೇ. 100 ಮೇಡ್ ಇನ್ ಇಂಡಿಯಾ ಐಫೋನ್: ಆ್ಯಪಲ್ ಗುರಿ

ಇದನ್ನೂ ಓದಿ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,650 ರಿಂಗಿಟ್ (90,770 ರುಪಾಯಿ)
  • ದುಬೈ: 3,702.50 ಡಿರಾಮ್ (86,070 ರುಪಾಯಿ)
  • ಅಮೆರಿಕ: 1,005 ಡಾಲರ್ (85,810 ರುಪಾಯಿ)
  • ಸಿಂಗಾಪುರ: 1,361 ಸಿಂಗಾಪುರ್ ಡಾಲರ್ (88,390 ರುಪಾಯಿ)
  • ಕತಾರ್: 3,725 ಕತಾರಿ ರಿಯಾಲ್ (87,270 ರೂ)
  • ಸೌದಿ ಅರೇಬಿಯಾ: 3,770 ಸೌದಿ ರಿಯಾಲ್ (85,810 ರುಪಾಯಿ)
  • ಓಮನ್: 393 ಒಮಾನಿ ರಿಯಾಲ್ (87,150 ರುಪಾಯಿ)
  • ಕುವೇತ್: 304.50 ಕುವೇತಿ ದಿನಾರ್ (84,760 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,200 ರೂ
  • ಚೆನ್ನೈ: 11,200 ರೂ
  • ಮುಂಬೈ: 10,200 ರೂ
  • ದೆಹಲಿ: 10,200 ರೂ
  • ಕೋಲ್ಕತಾ: 10,200 ರೂ
  • ಕೇರಳ: 11,200 ರೂ
  • ಅಹ್ಮದಾಬಾದ್: 10,200 ರೂ
  • ಜೈಪುರ್: 10,200 ರೂ
  • ಲಕ್ನೋ: 10,200 ರೂ
  • ಭುವನೇಶ್ವರ್: 11,200 ರೂ
  • ಪುಣೆ: 10,200

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Sun, 27 April 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us