Gold: ಹೊಸ ದಾಖಲೆಯ ಮಟ್ಟಕ್ಕೆ ಏರುತ್ತಾ ಚಿನ್ನದ ಬೆಲೆ? ಅಮೆರಿಕದ ಎಫೆಕ್ಟ್ ಇದು…

Gold rates updates: ಅಪರಂಜಿ ಚಿನ್ನದ ಬೆಲೆ 10 ಗ್ರಾಮ್​ಗೆ 70,000 ರೂ ಗಡಿದಾಟಿದೆ. ಈ ಏರಿಕೆ ಓಟ ಸದ್ಯಕ್ಕೆ ನಿಲ್ಲುವ ಸಾಧ್ಯತೆ ಇಲ್ಲ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಮೊನ್ನೆಯ ಮೀಟಿಂಗ್​ನಲ್ಲಿ ಸೆಪ್ಟೆಂಬರ್​ನಷ್ಟರಲ್ಲಿ ಬಡ್ಡಿದರ ಇಳಿಸುವ ಸಾಧ್ಯತೆ ತಿಳಿಸಿದ್ದರು. ಇದರ ಪರಿಣಾಮವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ.

Gold: ಹೊಸ ದಾಖಲೆಯ ಮಟ್ಟಕ್ಕೆ ಏರುತ್ತಾ ಚಿನ್ನದ ಬೆಲೆ? ಅಮೆರಿಕದ ಎಫೆಕ್ಟ್ ಇದು...
ಚಿನ್ನ
Follow us
|

Updated on: Aug 01, 2024 | 3:53 PM

ನವದೆಹಲಿ, ಆಗಸ್ಟ್ 1: ಚಿನ್ನದ ಬೆಲೆ ಮತ್ತೆ ನಾಗಾಲೋಟದಲ್ಲಿದೆ. ಈಗ್ಗೆ ಕೆಲ ದಿನಗಳಿಂದ ಸತತವಾಗಿ ಬೆಲೆ ಏರುತ್ತಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿತಗೊಳಿಸಬಹುದು ಎನ್ನುವ ಸುಳಿವು ಸಿಕ್ಕ ಬೆನ್ನಲ್ಲೇ ಬಹಳಷ್ಟು ಹೂಡಿಕೆದಾರರು ಚಿನ್ನದ ಮೇಲೆ ಮುಗಿಬೀಳತೊಡಗಿದ್ದಾರೆ. ಇದರ ಪರಿಣಾಮವಾಗಿ ಕೆಲವಾರು ತಿಂಗಳ ಕಾಲ ಚಿನ್ನದ ಬೆಲೆ ಕ್ರಮೇಣವಾಗಿ ಏರಿಕೆ ಆಗುತ್ತಿರುವ ಸಾಧ್ಯತೆ ಇದೆ. ಇಂದು ಗುರುವಾರ ಚಿನ್ನದ ಬೆಲೆ ಕಳೆದ ಎರಡು ವಾರದಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ.

ಅಮೆರಿಕದ ಫೆಡರಲ್ ರಿಸರ್ವ್ (ಸೆಂಟ್ರಲ್ ಬ್ಯಾಂಕ್) ಮುಖ್ಯಸ್ಥ ಜಿರೋಮ್ ಪೊವೆಲ್ ಅವರು ಸೆಪ್ಟಂಬರ್​ನಷ್ಟರಲ್ಲಿ ಬಡ್ಡಿದರ ಕಡಿತಗೊಳಿಸುವುದಾಗಿ ನಿನ್ನೆ ಹೇಳಿದ್ದರು. ಇದಾದ ಬಳಿಕ ಅಂತಾರಾಷ್ಟ್ರೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಒಂದು ಔನ್ಸ್ ಚಿನ್ನ 2,445.39 ಡಾಲರ್ ಬೆಲೆಯಲ್ಲಿ ವಹಿವಾಟು ಆಗುತ್ತಿದೆ. ಅಮೆರಿಕದ ಗೋಲ್ಡ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನ 2,490 ಡಾಲರ್ ಬೆಲೆ ಪಡೆದುಕೊಂಡಿದೆ.

ಇದನ್ನೂ ಓದಿ: ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ

ಭಾರತದಲ್ಲಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ 10 ಗ್ರಾಮ್ ಚಿನ್ನದ ಬೆಲೆ 70,000 ರೂ ಗಡಿ ದಾಟಿದೆ. ಇದು ಆಗಸ್ಟ್​ ಡೆಲಿವರಿಗೆ ಬುಕ್ ಮಾಡಲಾದ ಗೋಲ್ಡ್ ಕಾಂಟ್ರಾಕ್ಟ್ಸ್ ಬೆಲೆ.

ಬಡ್ಡಿದರ ಕಡಿಮೆ ಆದರೆ ಚಿನ್ನದ ಬೆಲೆ ಏರುವುದೇಕೆ?

ಚಿನ್ನವನ್ನು ಇರಿಸಿಕೊಂಡರೆ ಅದರಿಂದ ವರ್ಷಕ್ಕೆ ಲಾಭ ಅಥವಾ ಯೀಲ್ಡ್ ಸಿಕ್ಕುವುದಿಲ್ಲ. ಸುರಕ್ಷಿತ ಹೂಡಿಕೆ ಮಾಡಬಯಸುವವರು ಹೆಚ್ಚಿನ ಬಡ್ಡಿ ಸಿಗುವ ಬ್ಯಾಂಕ್ ಠೇವಣಿ, ಗವರ್ನ್ಮೆಂಟ್ ಬಾಂಡ್ ಇತ್ಯಾದಿ ಕಡೆ ಹೋಗುತ್ತಾರೆ. ಬಡ್ಡಿದರ ಇಳಿಕೆ ಮಾಡಿದರೆ ಠೇವಣಿಯಿಂದ ಬರುವ ಆದಾಯ ಕಡಿಮೆ ಆಗುತ್ತದೆ. ಇದು ಹೂಡಿಕೆದಾರರನ್ನು ಚಿನ್ನದತ್ತ ಆಕರ್ಷಿತರನ್ನಾಗಿ ಮಾಡಬಹುದು.

ಇದನ್ನೂ ಓದಿ: ಸರ್ಕಾರಕ್ಕೆ ದುಬಾರಿಯಾಯ್ತಾ ಈ ಗೋಲ್ಡ್ ಸ್ಕೀಮ್? ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂತ್ಯಗೊಳ್ಳುತ್ತಾ?

ಭಾರತದಲ್ಲಿ ಜುಲೈ 23ರ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಇತ್ಯಾದಿ ಮೇಲೆ ಆಮದು ಸುಂಕವನ್ನು ಕಡಿಮೆಗೊಳಿಸಲಾಗಿದೆ. ಇದರಿಂದ ಬೆಲೆ ಬಹಳಷ್ಟು ಇಳಿದಿದೆ. ಇದು ಈಗ ಭಾರತದಲ್ಲಿ ಆಭರಣ ಖರೀದಿಸುವವರನ್ನು ಮತ್ತು ಹೂಡಿಕೆ ಮಾಡಬಯಸುವವರನ್ನು ಚಿನ್ನ ಸೆಳೆಯುತ್ತಿದೆ. ಆಕರ್ಷಕ ದರ ಇರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಒಂದು ಅಂದಾಜು ಪ್ರಕಾರ 70,000 ರೂ ಗಡಿ ದಾಟಿರುವ 10 ಗ್ರಾಮ್ ಚಿನ್ನದ ಬೆಲೆ ಶೀಘ್ರದಲ್ಲೇ 82,000 ರೂ ಆಗಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ