Gold Silver Price on 15 November: ದೀಪಾವಳಿ ಹಬ್ಬದ ಕೊನೆಯಲ್ಲಿ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ಇವತ್ತಿನ ದರಪಟ್ಟಿ
Bullion Market 2023, November 15th: ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,600 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 73 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 55,550 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,175 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ನವೆಂಬರ್ 15: ದೀಪಾವಳಿ ಹಬ್ಬದವರೆಗೂ ಸತತ ಇಳಿಕೆಗಳನ್ನು ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver Rates) ಇದೀಗ ಏರಿವೆ. ಭಾರತ ಹಾಗೂ ಬಹುತೇಕ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ಬೆಲೆಗಳ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,175 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 15ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,600 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,600 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 717.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,550 ರೂ
- ಚೆನ್ನೈ: 56,150 ರೂ
- ಮುಂಬೈ: 55,550 ರೂ
- ದೆಹಲಿ: 55,700 ರೂ
- ಕೋಲ್ಕತಾ: 55,550 ರೂ
- ಕೇರಳ: 55,550 ರೂ
- ಅಹ್ಮದಾಬಾದ್: 55,600 ರೂ
- ಜೈಪುರ್: 55,700 ರೂ
- ಲಕ್ನೋ: 55,700 ರೂ
- ಭುವನೇಶ್ವರ್: 55,550 ರೂ
ಇದನ್ನೂ ಓದಿ: ಈ ಹಬ್ಬದ ಸೀಸನ್ನಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ 3.75 ಲಕ್ಷಕೋಟಿ ರೂ ವಹಿವಾಟು; ಇದು ಹೊಸ ದಾಖಲೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,980 ರಿಂಗಿಟ್ (52,524 ರುಪಾಯಿ)
- ದುಬೈ: 2,182.50 ಡಿರಾಮ್ (49,423 ರುಪಾಯಿ)
- ಅಮೆರಿಕ: 595 ಡಾಲರ್ (49,492 ರುಪಾಯಿ)
- ಸಿಂಗಾಪುರ: 823 ಸಿಂಗಾಪುರ್ ಡಾಲರ್ (50,318 ರುಪಾಯಿ)
- ಕತಾರ್: 2,250 ಕತಾರಿ ರಿಯಾಲ್ (51,399 ರೂ)
- ಸೌದಿ ಅರೇಬಿಯಾ: 2,250 ಸೌದಿ ರಿಯಾಲ್ (49,897 ರುಪಾಯಿ)
- ಓಮನ್: 238 ಒಮಾನಿ ರಿಯಾಲ್ (51,420 ರುಪಾಯಿ)
- ಕುವೇತ್: 187.50 ಕುವೇತಿ ದಿನಾರ್ (50,498 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,175 ರೂ
- ಚೆನ್ನೈ: 7,600 ರೂ
- ಮುಂಬೈ: 7,300 ರೂ
- ದೆಹಲಿ: 7,300 ರೂ
- ಕೋಲ್ಕತಾ: 7,300 ರೂ
- ಕೇರಳ: 7,600 ರೂ
- ಅಹ್ಮದಾಬಾದ್: 7,300 ರೂ
- ಜೈಪುರ್: 7,300 ರೂ
- ಲಕ್ನೋ: 7,300 ರೂ
- ಭುವನೇಶ್ವರ್: 7,600 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ