ಚಿನ್ನ
Image Credit source: PTI
ಮುಖ್ಯಾಂಶಗಳು
- ಚಿನ್ನದ ಬೆಲೆ ಗ್ರಾಮ್ಗೆ 290 ರೂ, ಬೆಳ್ಳಿ ಬೆಲೆ 5 ರೂ ಇಳಿದಿದೆ.
- ಆಭರಣ ಚಿನ್ನದ ಬೆಲೆ 14,940 ರೂನಿಂದ 14,650 ರೂಗೆ ಇಳಿದಿದೆ.
- ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 255 ರೂ ಇದೆ.
ನವದೆಹಲಿ, ಆಗಸ್ಟ್ 28: ಚಿನ್ನದ ಬೆಲೆ ಸತತ ಎರಡನೇ ಬಾರಿ ಇಳಿದಿದೆ. ನಿನ್ನೆ 70 ರೂ ಇಳಿದಿದ್ದ ಬಂಗಾರದ ದರ (Gold Price) ಇವತ್ತು ಬರೋಬ್ಬರಿ 290 ರೂಗಳಷ್ಟು ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ ಮತ್ತೆ 16,000 ರೂ ಗಡಿಯೊಳಗೆ ಬಂದಿದೆ. 18 ಕ್ಯಾರಟ್ ಚಿನ್ನದ ಬೆಲೆ 12,000 ಗಡಿಯೊಳಗೆ ಇಳಿದಿದೆ. ವಿದೇಶಗಳಲ್ಲಿ ಬೆಲೆಯಲ್ಲಿ ಏರಿಳಿತಗಳಿವೆ. ಸ್ಪಾಟ್ ಗೋಲ್ಡ್ ಬೆಲೆಯಲ್ಲೂ ಇಳಿಕೆಯಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಭಾರತದಲ್ಲಿ 5 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,46,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,59,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,46,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 26,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 28ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,982
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,650
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,987
- ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,650 ರೂ
- ಚೆನ್ನೈ: 14,650 ರೂ
- ಮುಂಬೈ: 14,650 ರೂ
- ದೆಹಲಿ: 14,665
- ಕೋಲ್ಕತಾ: 14,650 ರೂ
- ಕೇರಳ: 14,650 ರೂ
- ಅಹ್ಮದಾಬಾದ್: 14,655 ರೂ
- ಜೈಪುರ್: 14,665
- ಲಕ್ನೋ: 14,665
- ಭುವನೇಶ್ವರ್: 14,650 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 147.38 ಡಾಲರ್ (14,080 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 2.217 ಡಾಲರ್ (211 ರುಪಾಯಿ)
ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಆಮದು ಸುಂಕ ಇಳಿಸಲು ಸರ್ಕಾರ ಸಜ್ಜು; ಗ್ರಾಮ್ಗೆ 1,300 ರೂನಷ್ಟು ಕುಸಿಯುತ್ತಾ ಬಂಗಾರದ ದರ?
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 15,982 ರುಪಾಯಿ
- ಮಲೇಷ್ಯಾ: 609 ರಿಂಗಿಟ್ (14,449 ರುಪಾಯಿ)
- ದುಬೈ: 554.50 ಡಿರಾಮ್ (14,401 ರುಪಾಯಿ)
- ಅಮೆರಿಕ: 151.50 ಡಾಲರ್ (14,476 ರುಪಾಯಿ)
- ಸಿಂಗಾಪುರ: 199 ಸಿಂಗಾಪುರ್ ಡಾಲರ್ (14,965 ರುಪಾಯಿ)
- ಕತಾರ್: 552 ಕತಾರಿ ರಿಯಾಲ್ (14,469 ರೂ)
- ಸೌದಿ ಅರೇಬಿಯಾ: 569 ಸೌದಿ ರಿಯಾಲ್ (14,480 ರುಪಾಯಿ)
- ಓಮನ್: 58.80 ಒಮಾನಿ ರಿಯಾಲ್ (14,593 ರುಪಾಯಿ)
- ಕುವೇತ್: 45.87 ಕುವೇತಿ ದಿನಾರ್ (14,283 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 255 ರೂ
- ಚೆನ್ನೈ: 260 ರೂ
- ಮುಂಬೈ: 255 ರೂ
- ದೆಹಲಿ: 255 ರೂ
- ಕೋಲ್ಕತಾ: 255 ರೂ
- ಕೇರಳ: 260 ರೂ
- ಅಹ್ಮದಾಬಾದ್: 255 ರೂ
- ಜೈಪುರ್: 255 ರೂ
- ಲಕ್ನೋ: 255 ರೂ
- ಭುವನೇಶ್ವರ್: 260 ರೂ
- ಪುಣೆ: 255
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ