Gold Rates 31 Aug: ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Gold Price 31 August 2026: ವಾರಾಂತ್ಯದಲ್ಲಿ 145 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ ಸೋಮವಾರ 135 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 14,505 ರೂನಿಂದ 14,370 ರೂಗೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 15,677 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 255 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 260 ರೂ ಇದೆ.

Gold Rates 31 Aug: ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Image Credit source: PTI

Updated on: Aug 31, 2026 | 2:52 PM

ಮುಖ್ಯಾಂಶಗಳು

  • ವಾರಾಂತ್ಯದಲ್ಲಿ 145 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ ಸೋಮವಾರ 135 ರೂ ಇಳಿದಿದೆ.
  • ಆಭರಣ ಚಿನ್ನದ ಬೆಲೆ 14,505 ರೂನಿಂದ 14,370 ರೂಗೆ ತಗ್ಗಿದೆ.
  • ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 255 ರೂ ಇದೆ.

ನವದೆಹಲಿ, ಆಗಸ್ಟ್ 31: ಕಳೆದ ವಾರ ಹೆಚ್ಚಿನ ದಿನಗಳು ಕುಸಿದಿದ್ದ ಚಿನ್ನದ ಬೆಲೆ (gold price) ಈ ವಾರದಲ್ಲೂ ಭರ್ಜರಿ ಇಳಿಕೆಯಲ್ಲಿದೆ. ಸೋಮವಾರ ಬಂಗಾರದ ದರ 135 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಏಳು ದಿನದಲ್ಲಿ ಹಳದಿ ಲೋಹದ ಬೆಲೆ 660 ರೂಗಳಷ್ಟು ತಗ್ಗಿದೆ. ಅಂತಾರಾಷ್ಟ್ರೀಯವಾಗಿ ಕೆಲ ದೇಶಗಳಲ್ಲಿ ಬೆಲೆ ಇಳಿದಿದೆ. ಸ್ಪಾಟ್ ಗೋಲ್ಡ್ ಬೆಲೆ 2 ಡಾಲರ್​ನಷ್ಟು ತಗ್ಗಿದೆ. ಇನ್ನೊಂದೆಡೆ, ಸ್ಪಾಟ್ ಸಿಲ್ವರ್ ಬೆಲೆ ಸ್ವಲ್ಪ ಏರಿದೆ, ಆದರೆ, ಭಾರತದಲ್ಲಿ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,770 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 31ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,677
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,370
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,758
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,370 ರೂ
  • ಚೆನ್ನೈ: 14,370 ರೂ
  • ಮುಂಬೈ: 14,370 ರೂ
  • ದೆಹಲಿ: 14,385
  • ಕೋಲ್ಕತಾ: 14,370 ರೂ
  • ಕೇರಳ: 14,370 ರೂ
  • ಅಹ್ಮದಾಬಾದ್: 14,375 ರೂ
  • ಜೈಪುರ್: 14,385
  • ಲಕ್ನೋ: 14,385
  • ಭುವನೇಶ್ವರ್: 14,370 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 142.61 ಡಾಲರ್ (13,575 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.153 ಡಾಲರ್ (205 ರುಪಾಯಿ)

ಇದನ್ನೂ ಓದಿ: 40ರ ವರ್ಷ ವಯಸ್ಸು ದಾಟಿದ ಬಳಿಕ ಹಣದ ಬಳಕೆ ಹೇಗಿರಬೇಕು? ತಜ್ಞರ ಅನಿಸಿಕೆ ಇದು…

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,677 ರುಪಾಯಿ
  • ಮಲೇಷ್ಯಾ: 590 ರಿಂಗಿಟ್ (13,952 ರುಪಾಯಿ)
  • ದುಬೈ: 536.75 ಡಿರಾಮ್ (13,908 ರುಪಾಯಿ)
  • ಅಮೆರಿಕ: 147 ಡಾಲರ್ (13,988 ರುಪಾಯಿ)
  • ಸಿಂಗಾಪುರ: 193.70 ಸಿಂಗಾಪುರ್ ಡಾಲರ್ (14,487 ರುಪಾಯಿ)
  • ಕತಾರ್: 536.50 ಕತಾರಿ ರಿಯಾಲ್ (14,022 ರೂ)
  • ಸೌದಿ ಅರೇಬಿಯಾ: 552 ಸೌದಿ ರಿಯಾಲ್ (13,991 ರುಪಾಯಿ)
  • ಓಮನ್: 57 ಒಮಾನಿ ರಿಯಾಲ್ (14,089 ರುಪಾಯಿ)
  • ಕುವೇತ್: 44.46 ಕುವೇತಿ ದಿನಾರ್ (13,775 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 260 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 260 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Mon, 31 August 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us