AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40ರ ವರ್ಷ ವಯಸ್ಸು ದಾಟಿದ ಬಳಿಕ ಹಣದ ಬಳಕೆ ಹೇಗಿರಬೇಕು? ತಜ್ಞರ ಅನಿಸಿಕೆ ಇದು…

Ankur Warikoo shares important money rules a 40 plus aged person can adopt: 40 ವರ್ಷ ವಯಸ್ಸು ಎಂದರೆ ಅದು ಅನುಭವದಲ್ಲಿ ಮಾಗಿದ ವಯಸ್ಸು. ಇಲ್ಲಿ ಎಲ್ಲದರಲ್ಲೂ ಪ್ರೌಢಿಮೆ ಬರುತ್ತದೆ. ಆದರೆ, ಹಣ ಸಂಪಾದನೆಯ ದಾವಂತದಲ್ಲಿ ಹಣದ ಸಮರ್ಪಕ ಬಳಕೆ ಬಗ್ಗೆ ಹೆಚ್ಚು ಮಂದಿ ಯೋಚಿಸುವುದಿಲ್ಲ. ಖ್ಯಾತ ಯೂಟ್ಯೂಬರ್ ಮತ್ತು ಹಣಕಾಸು ತಜ್ಞ ಅಂಕುರ್ ವಾರಿಕೂ ತಮ್ಮ ಕೆಲ ಅನುಭವ ಹಂಚಿಕೊಂಡಿದ್ದಾರೆ.

40ರ ವರ್ಷ ವಯಸ್ಸು ದಾಟಿದ ಬಳಿಕ ಹಣದ ಬಳಕೆ ಹೇಗಿರಬೇಕು? ತಜ್ಞರ ಅನಿಸಿಕೆ ಇದು...
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2026 | 6:06 PM

Share

ಜೀವನಪೂರ್ತಿ ಶಕ್ತಿ, ಅವಕಾಶಗಳನುಸಾರ ಹಣ ಸಂಪಾದಿಸುತ್ತಲೇ ಇರುತ್ತೇವೆ. ಹಾಗೆಯೇ, ಮನಸ್ಸಿಗೆ ಅನಿಸಿದಂತೆಲ್ಲಾ ವೆಚ್ಚಗಳನ್ನೂ ಮಾಡುತ್ತಿರುತ್ತೇವೆ. ಆದರೆ, ವಯಸ್ಸಾದಂತೆ ನಾವು ಮಾನಸಿಕವಾಗಿ ಪ್ರಬುದ್ಧರಾದಂತೆ, ಹಣಕಾಸು ಮತ್ತು ಜೀವನಶೈಲಿ ವಿಚಾರದಲ್ಲೂ ಪ್ರೌಢಿಮೆ ಹೊದಿರುವುದು ಮುಖ್ಯ. ಈ ನಿಟ್ಟಿನಲ್ಲಿ ಖ್ಯಾತ ಉದ್ಯಮಿ, ಹಣಕಾಸು ಪರಿಣಿತ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಅಂಕುರ್ ವಾರಿಕೂ (Ankur Warikoo) ತಮ್ಮ ಜೀವನದ ಅನುಭವಗಳನ್ನು ಆಧಿರಿಸಿ, 40ರ ವಯಸ್ಸು ದಾಟಿದವರು ಯಾವ ಹಣಕಾಸು ನಿಯಮಗಳನ್ನು (Money Rules) ಹೊಂದಿರಬೇಕು ಎಂಬುದನ್ನು ತಿಳಿಸಿದ್ದಾರೆ.

ಲಿಂಕ್ಡ್​ಇನ್​ನಲ್ಲಿ ಅವರು ಈ ಮಾಹಿತಿ ಅಥವಾ ಸಲಹೆ ಹಂಚಿಕೊಂಡಿದ್ದಾರೆ. ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದ ವಾರಿಕೂ ಅವರದ್ದು ಮಧ್ಯ ವಯಸ್ಸು. ಸತತ ವೈಫಲ್ಯಗಳು, ಆಘಾತಗಳ ಬಳಿಕ ಕಳೆದ ಕೆಲ ವರ್ಷಗಳಿಂದ ಯಶಸ್ಸು ಕಂಡಿದ್ದಾರೆ. ತಾವು ಹಾಗೂ ತಮ್ಮ ಕುಟುಂಬ ಹಣಕಾಸನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಅವರ ಐದು ಸಲಹೆಗಳು ಹಲವರಿಗೆ ಉಪಯುಕ್ತ ಎನಿಸಬಹುದು.

ಇದನ್ನೂ ಓದಿ: ಈ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ 4,900 ಡಾಲರ್ ಮುಟ್ಟಬಹುದು: ಗೋಲ್ಡ್‌ಮನ್ ಸ್ಯಾಕ್ಸ್ ಅಂದಾಜು

1. ಶ್ರೀಮಂತಿಕೆಯ ತೋರ್ಪಡಿಕೆ ಬೇಡ; ನಿಜವಾದ ಸಂಪತ್ತು ಸೃಷ್ಟಿಸಿ

ತೋರ್ಪಡಿಕೆಗೆ ಖರ್ಚು ಬೇಡ: “ನಾವು ಶ್ರೀಮಂತರಂತೆ ಕಾಣಿಸಿಕೊಳ್ಳಲು ಹಣ ಖರ್ಚು ಮಾಡುವುದಿಲ್ಲ; ನಿಜವಾದ ಸಂಪತ್ತು ಗಳಿಸಿ, ನಮ್ಮ ಸಮಯದ ಸ್ವಾತಂತ್ರ್ಯವನ್ನು (Freedom of Time) ಪಡೆಯಲು ಖರ್ಚು ಮಾಡುತ್ತೇವೆ” ಎಂಬುದು ಅವರ ತತ್ವ.

ಐಷಾರಾಮಕ್ಕೆ ನೋ: ಅವರು ಯಾವುದೇ ದುಬಾರಿ ಕಾರನ್ನು ಹೊಂದಿಲ್ಲ. ಬದಲಿಗೆ ಬಾಡಿಗೆ ಕಾರು ಬಳಸುತ್ತಾರೆ. ಪ್ರದರ್ಶನಕ್ಕಾಗಿ ಹೆಚ್ಚುವರಿ ರಿಯಲ್ ಎಸ್ಟೇಟ್ ಅಥವಾ ದುಬಾರಿ ಬ್ರಾಂಡ್‌ಗಳ ಮೇಲೆ ಹಣ ವ್ಯರ್ಥ ಮಾಡುವುದಿಲ್ಲ. ಅವರ ಹೂಡಿಕೆಯು ಹೆಚ್ಚಾಗಿ ಚಿನ್ನ, ಈಕ್ವಿಟಿಗಳಿಗೆ ಹೋಗುತ್ತದೆ.

2. ಲಕ್ಸುರಿಗಿಂತ ಆರೋಗ್ಯವೇ ಪ್ರಮುಖ

ಬೇರೆ ವಿಷಯಗಳಲ್ಲಿ ಖರ್ಚು ನಿಯಂತ್ರಿಸಿದರೂ, ಉತ್ತಮ ಗುಣಮಟ್ಟದ ಮತ್ತು ಪೌಷ್ಟಿಕ ಆಹಾರದ ಮೇಲೆ ಹಣ ಖರ್ಚು ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ದೇಹಕ್ಕೆ ನೀಡುವ ಪೌಷ್ಟಿಕಾಂಶವೇ ಅತಿದೊಡ್ಡ ಸಂಪತ್ತು. ಆರೋಗ್ಯಕರ ಆಹಾರ ದುಬಾರಿಯಾಗಿದ್ದರೂ, ಅದು ದೀರ್ಘಾವಧಿಯ ಒಳ್ಳೆಯ ಹೂಡಿಕೆಯಾಗಿದೆ ಎನ್ನುವುದು ಅವರ ಅನುಭವದ ನುಡಿ.

3. ವಸ್ತುಗಳಿಗಿಂತ ಅನುಭವಗಳಿಗೆ ಖರ್ಚು ಮಾಡಿ

ಭೌತಿಕ ವಸ್ತುಗಳು (ವಸ್ತು, ಕಾರು, ಗ್ಯಾಜೆಟ್‌ಗಳು) ನೀಡುವ ಸಂತೋಷ ಕ್ಷಣಿಕ. ಆದರೆ ಪ್ರವಾಸ, ಹೊಸ ವಿಷಯಗಳನ್ನು ಕಲಿಯುವುದು ಹಾಗೂ ಕುಟುಂಬದೊಂದಿಗೆ ಕಳೆಯುವ ಸಮಯದಂತಹ “ಅನುಭವಗಳು (Experiences)” ವ್ಯಕ್ತಿತ್ವವನ್ನು ಬೆಳೆಸುತ್ತವೆ ಮತ್ತು ಜೀವಮಾನದ ನೆನಪುಗಳನ್ನು ನೀಡುತ್ತವೆ ಎಂದು ಯೂಟ್ಯೂಬರ್ ಕೂಡ ಆಗಿರುವ ಅಂಕುರ್ ವಾರಿಕೂ ಹೇಳುತ್ತಾರೆ.

ಇದನ್ನೂ ಓದಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಷ್ಟಿರಲೇಬೇಕು

4. ಖರ್ಚು ಮಾಡುವ ಮುನ್ನ ಹೂಡಿಕೆ ಮಾಡಿ

ವಾರಿಕೂ ಅವರು ಆದಾಯ ಕೈಗೆ ಬಂದ ತಕ್ಷಣ, ಅದರ ಸಿಂಹಪಾಲನ್ನು (ದೊಡ್ಡ ಭಾಗ) ಮೊದಲು ಹೂಡಿಕೆಗೆ (Investments) ಮೀಸಲಿಡುತ್ತಾರೆ. ಉಳಿದ ಹಣದಲ್ಲಿ ಮಾತ್ರ ತಿಂಗಳ ದಿನನಿತ್ಯದ ಖರ್ಚುಗಳನ್ನು ನಿರ್ವಹಿಸುತ್ತಾರೆ. ಇದರಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಬೀಳುತ್ತದೆ.

5. ಕಲಿಕೆಗೆ ಯಾವುದೇ ಬಜೆಟ್ ಮಿತಿ ಇಲ್ಲ

ಪುಸ್ತಕಗಳನ್ನು ಕೊಳ್ಳಲು, ಹೊಸ ಕೌಶಲ್ಯಗಳನ್ನು (Skills) ಕಲಿಯಲು ಅಥವಾ ಕೋರ್ಸ್‌ಗಳನ್ನು ಮಾಡಲು ಅಂಕುರ್ ಅವರು ಯಾವುದೇ ಹಣಕಾಸಿನ ಮಿತಿ ಅಥವಾ ಬಜೆಟ್ ಇಟ್ಟುಕೊಳ್ಳುವುದಿಲ್ಲ. ಜ್ಞಾನ ಮತ್ತು ಸ್ವ-ಅಭಿವೃದ್ಧಿಗೆ (Self-growth) ಮಾಡುವ ಖರ್ಚು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದು ಅವರ ನಂಬಿಕೆ.

ಪ್ರದರ್ಶನಕ್ಕಾಗಿ ಜೀವಿಸದೆ, ಸಮಯದ ಸ್ವಾತಂತ್ರ್ಯ, ಆರೋಗ್ಯ ಮತ್ತು ಸ್ವ-ಅಭಿವೃದ್ಧಿಗೆ ಆದ್ಯತೆ ನೀಡುವುದೇ ನಿಜವಾದ ಹಣಕಾಸು ಸ್ವಾತಂತ್ರ್ಯ (Financial Freedom) ಎಂದು ಅಂಕುರ್ ವಾರಿಕೂ ಅಭಿಪ್ರಾಯಪಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ