Gold Rate: ಚಿನ್ನದ ಬೆಲೆ 2 ದಿನದಲ್ಲಿ 45 ರು ಇಳಿಕೆ; ಬೆಳ್ಳಿ ಬೆಲೆ 5-10 ರೂ ಕಡಿಮೆ

Gold Price 5 June 2026: ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಇಳಿಕೆ ಆಗಿದೆ. ಎರಡು ದಿನದಲ್ಲಿ 45 ರು ತಗ್ಗಿದೆ. ಬೆಳ್ಳಿ ಬೆಲೆಯೂ 5 ರೂ ಕಡಿಮೆಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 14,310 ರೂನಿಂದ 14,275 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 15,573 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 275 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 280 ರೂ ಇದೆ.

Gold Rate: ಚಿನ್ನದ ಬೆಲೆ 2 ದಿನದಲ್ಲಿ 45 ರು ಇಳಿಕೆ; ಬೆಳ್ಳಿ ಬೆಲೆ 5-10 ರೂ ಕಡಿಮೆ
ಚಿನ್ನ
Image Credit source: Shutterstock

Updated on: Jun 05, 2026 | 12:14 PM

ನವದೆಹಲಿ, ಜೂನ್ 5: ಭಾರತದಲ್ಲಿ ಚಿನ್ನದ ಬೆಲೆಯ (Gold Rates) ಸತತ ಇಳಿಕೆ ಆಗುತ್ತಿದೆ. ನಿನ್ನೆ ಗುರುವಾರ ಗ್ರಾಮ್​ಗೆ 10 ರೂ ಇಳಿದಿದ್ದ ಆಭರಣ ಚಿನ್ನದ ಬೆಲೆ ಇವತ್ತು ಶುಕ್ರವಾರ 35 ರೂ ಕಡಿಮೆಗೊಂಡಿದೆ. ಎರಡು ದಿನದಲ್ಲಿ 45 ರುಗಳಷ್ಟು ಬೆಲೆ ತಗ್ಗಿದೆ. ಆದರೆ, ವಿದೇಶಗಳಲ್ಲಿ ಹಲವೆಡೆ ಇದರ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆ ಹಲವು ದಿನಗಳ ಬಳಿಕ ಕಡಿಮೆ ಆಗಿದೆ. ಈ ಬಿಳಿ ಲೋಹ ಗ್ರಾಮ್​ಗೆ 5ರಿಂದ 10 ರೂಗಳಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,573 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,275 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,680 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,573 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,275 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,275 ರೂ
  • ಚೆನ್ನೈ: 14,430 ರೂ
  • ಮುಂಬೈ: 14,275 ರೂ
  • ದೆಹಲಿ: 14,290 ರೂ
  • ಕೋಲ್ಕತಾ: 14,275 ರೂ
  • ಕೇರಳ: 14,275 ರೂ
  • ಅಹ್ಮದಾಬಾದ್: 14,280 ರೂ
  • ಜೈಪುರ್: 14,290 ರೂ
  • ಲಕ್ನೋ: 14,290 ರೂ
  • ಭುವನೇಶ್ವರ್: 14,275 ರೂ

ಇದನ್ನೂ ಓದಿ: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 591 ರಿಂಗಿಟ್ (14,006 ರುಪಾಯಿ)
  • ದುಬೈ: 538.50 ಡಿರಾಮ್ (13,998 ರುಪಾಯಿ)
  • ಅಮೆರಿಕ: 147.50 ಡಾಲರ್ (14,056 ರುಪಾಯಿ)
  • ಸಿಂಗಾಪುರ: 195.60 ಸಿಂಗಾಪುರ್ ಡಾಲರ್ (14,506 ರುಪಾಯಿ)
  • ಕತಾರ್: 538.50 ಕತಾರಿ ರಿಯಾಲ್ (14,077 ರೂ)
  • ಸೌದಿ ಅರೇಬಿಯಾ: 554 ಸೌದಿ ರಿಯಾಲ್ (14,061 ರುಪಾಯಿ)
  • ಓಮನ್: 57 ಒಮಾನಿ ರಿಯಾಲ್ (14,110 ರುಪಾಯಿ)
  • ಕುವೇತ್: 45.19 ಕುವೇತಿ ದಿನಾರ್ (14,035 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us