ಸಿಕ್ಕಾಪಟ್ಟೆ ಏರುತ್ತಿರುವ ಚಿನ್ನದ ಬೆಲೆ ಮುಂದಿನ ವರ್ಷಕ್ಕೆ ಎಷ್ಟಾಗಬಹುದು? ಬಂಗಾರಪ್ರಿಯರಿಗೆ ಕಾದಿದೆ ಶಾಕ್
Gold rates prediction for 2026: ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಶೇ. 50ರ ಆಸುಪಾಸಿನಷ್ಟು ಏರಿಕೆ ಆಗಿದೆ. 2023ರಲ್ಲಿ 5,688 ರೂ ಇದ್ದ ಅಪರಂಜಿ ಚಿನ್ನದ ಬೆಲೆ ಈಗ 12,400 ರೂ ಗಡಿ ದಾಟಿ ಹೋಗಿದೆ. ಮುಂದಿನ ದಿನಗಳಲ್ಲಿ ದಿನಕ್ಕೆ 50 ರೂನಿಂದ 200 ರೂವರೆಗೆ ಏರುವ ನಿರೀಕ್ಷೆ ಇದೆ. 2026ರಲ್ಲಿ ಚಿನ್ನದ ಬೆಲೆ 15,000 ರೂಗಳ ಮೈಲಿಗಲ್ಲು ದಾಟಬಹುದು.

ಬೆಂಗಳೂರು, ಅಕ್ಟೋಬರ್ 9: ಚಿನ್ನದ ಬೆಲೆ ಈಗ ಚಿನ್ನದ ಬೆಲೆಯನ್ನೂ (Gold rate) ಮೀರಿಸುತ್ತಿದೆ. ಚಿನ್ನ ಮಾತ್ರವಲ್ಲ, ಬೆಳ್ಳಿ, ಪ್ಲಾಟಿನಂ, ಕಾಪರ್ ಇತ್ಯಾದಿ ಅಮೂಲ್ಯ ಲೋಹಗಳ ಬೆಲೆಗಳು ಕಳೆದ ಒಂದು ವರ್ಷದಿಂದ ಅಸಹಜವಾಗಿ ಏರಿಕೆ ಆಗುತ್ತಿದೆ. ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಶೇ. 65ರಷ್ಟು ಏರಿದೆ. ಈ ಏರಿಕೆಯ ಓಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಚಿನ್ನ ತನ್ನ ಗರಿಷ್ಠ ಮಟ್ಟ ಮುಟ್ಟಿತು ಎಂದು ಭಾವಿಸಿದ್ದವರ ಎಣಿಕೆ ಉಲ್ಟಾ ಆಗಿದೆ. ಈ ಲೋಹಗಳ ಬೆಲೆ ಎಗ್ಗಿಲ್ಲದೇ ಏರುವುದು ಮುಂದುವರಿದಿದೆ.
5,688 ರೂನಿಂದ 12,415 ರೂಗೆ ಏರಿಕೆ
ಎರಡು ವರ್ಷಗಳ ಹಿಂದೆ, 2023ರ ಅಕ್ಟೋಬರ್ 8-9ರಂದು 24 ಕ್ಯಾರಟ್ನ ಒಂದು ಗ್ರಾಮ್ ಚಿನ್ನದ ಬೆಲೆ 5,688 ರೂ ಇತ್ತು. ಈಗ 2025ರ ಅಕ್ಟೋಬರ್ 8ರಂದು ಅದರ ಬೆಲೆ 12,315 ರೂಗೆ ಏರಿದೆ. ಇವತ್ತು ಬೆಲೆ 12,415 ರೂ ಆಗಿದೆ.
ಇದನ್ನೂ ಓದಿ: ವೃತ್ತಿಯಲ್ಲಿ ಮುಂದೆ ಬರಬೇಕಾ? ಅಲ್ಲಿ ಕೆಲಸ ಆರಂಭಿಸಿ: ಯುವಜನರಿಗೆ ಅಮೇಜಾನ್ ಸಂಸ್ಥಾಪಕರ ಕಿವಿಮಾತು
22 ಕ್ಯಾರಟ್ ಚಿನ್ನದ ಬೆಲೆ ಎರಡು ವರ್ಷದ ಹಿಂದೆ 5,262 ರೂ ಇತ್ತು. ಈಗ ಅದು 11,290 ರೂ ಆಗಿದೆ. ಬೆಳ್ಳಿ ಬೆಲೆ 2023ರಲ್ಲಿ ಕಿಲೋಗೆ 68,800 ರೂ ಇತ್ತು. 2024ರಲ್ಲಿ 93,400 ರೂ ಆಯಿತು. ಈಗ 1.61 ಲಕ್ಷ ರೂ ಆಗಿದೆ.
ಮುಂದೆ ಎಷ್ಟು ಏರುತ್ತೆ ಚಿನ್ನದ ಬೆಲೆ?
ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಕಡಿಮೆಗೊಳ್ಳುವ ಸಾಧ್ಯತೆ ಇಲ್ಲ. ಬೆಲೆ ಏರಿಕೆ ವೇಗವೂ ಮಂದವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ದಿನಕ್ಕೆ 50 ರೂನಿಂದ 200 ರೂವವರೆಗೆ ಬೆಲೆ ಏರಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಅವರ ಅಂದಾಜು ಪ್ರಕಾರ 2026ರ ಅಕ್ಟೋಬರ್ನಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 15,000 ರೂ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಬಹುದು. ಬೆಳ್ಳಿ ಬೆಲೆಯೂ ಕೂಡ ಎರಡು ಲಕ್ಷ ರು ದಾಟಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಏರಿಕೆಯಲ್ಲಿ ಪೈಪೋಟಿ; ದಾಖಲೆ ಬೆಲೆ
ಚಿನ್ನ, ಬೆಳ್ಳಿ ಬೆಲೆ ಇಷ್ಟೊಂದು ಏರುತ್ತಿರುವುದು ಯಾಕೆ?
ಚಿನ್ನ, ಬೆಳ್ಳಿ ಬೆಲೆಗಳನ್ನು ಐತಿಹಾಸಿಕವಾಗಿ ಗಮನಿಸಿದಾಗ ವಾರ್ಷಿಕವಾಗಿ ಶೇ. 8ರಿಂದ 15ರಷ್ಟು ಏರಿರುವುದನ್ನು ಕಾಣಬಹುದು. ಆದರೆ, ಕಳೆದ ಒಂದು ವರ್ಷದಿಂದ ಅವೆರಡೂ ಕೂಡ ಶೇ. 60ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. ಇದಕ್ಕೆ ಹಲವು ಕಾರಣಗಳು ಗೋಚರಿಸುತ್ತವೆ.
ಚಿನ್ನ ಸೀಮಿತವಾಗಿ ಲಭ್ಯ ಇರುವುದು ಸೇರಿದಂತೆ, ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ನೆಲಸಿರುವುದು, ಆರ್ಥಿಕ ಬೆಳವಣಿಗೆ ಮಂದಗೊಂಡಿರುವುದು, ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಹೆಚ್ಚೆಚ್ಚು ಖರೀದಿಸುತ್ತಿರುವುದು ಇವೇ ಮುಂತಾದ ಕಾರಣಗಳಿಗೆ ಚಿನ್ನದ ಬೆಲೆ ಹೆಚ್ಚುತ್ತಿದೆ. ಬೆಳ್ಳಿ, ತಾಮ್ರ ಇತ್ಯಾದಿ ಲೋಹಗಳೂ ಕೂಡ ಇದೇ ಕಾರಣಕ್ಕೆ ಬೆಲೆ ಏರಿಕೆ ಕಾಣುತ್ತಿವೆ. ಜೊತೆಗೆ ಇವು ಔದ್ಯಮಿಕ ಕಾರ್ಯಗಳಿಗೂ ಉಪಯೋಗಗೊಳ್ಳುವುದರಿಂದ ಬೇಡಿಕೆ ಹೆಚ್ಚು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




