FASTag: ವಿಂಡ್​ಸ್ಕ್ರೀನಲ್ಲಿ ಫಾಸ್​ಟ್ಯಾಗ್ ಹಾಕದಿದ್ರೆ ಬ್ಲ್ಯಾಕ್​ಲಿಸ್ಟ್ ಸೇರ್ತೀರಾ ಹುಷಾರ್..! ಎನ್​ಎಚ್​ಎಐ ಬಿಗಿನಿಯಮ

NHAI new rules on FASTag: ಹೆದ್ದಾರಿ ಬಳಸುವ ಕಾರು ಮತ್ತಿತರ ವಾಹನಗಳ ಮುಂಭಾಗದ ವಿಂಡ್​ಶೀಲ್ಡ್ ಮೇಲೆ ಫಾಸ್​ಟ್ಯಾಗ್ ಅಳವಡಿಸುವುದು ಕಡ್ಡಾಯ. ಹಾಗೊಂದು ವೇಳೆ ಫ್ರಂಟ್ ವಿಂಡ್​ಶೀಲ್ಡ್​ನಲ್ಲಿ ಫಾಸ್​ಟ್ಯಾಗ್ ಹಾಕದಿದ್ದರೆ ಎರಡು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಇಂಥ ವಾಹನಗಳನ್ನು ಬ್ಲ್ಯಾಕ್​ಲಿಸ್ಟ್ ಕೂಡ ಮಾಡಲಾಗುತ್ತದೆ. ಈ ಸಂಬಂಧ ಹೆದ್ದಾರಿ ಪ್ರಾಧಿಕಾರವು ಎಲ್ಲಾ ಟೋಲ್ ಕಲೆಕ್ಷನ್ ಏಜೆನ್ಸಿಗಳಿಗೆ ಎಸ್​ಒಪಿ ಕಳುಹಿಸಿದೆ.

FASTag: ವಿಂಡ್​ಸ್ಕ್ರೀನಲ್ಲಿ ಫಾಸ್​ಟ್ಯಾಗ್ ಹಾಕದಿದ್ರೆ ಬ್ಲ್ಯಾಕ್​ಲಿಸ್ಟ್ ಸೇರ್ತೀರಾ ಹುಷಾರ್..! ಎನ್​ಎಚ್​ಎಐ ಬಿಗಿನಿಯಮ
ಫಾಸ್​ಟ್ಯಾಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2024 | 10:18 AM

ನವದೆಹಲಿ, ಜುಲೈ 19: ಹೆದ್ದಾರಿಯಲ್ಲಿ ಬಳಸುವವರು ತಮ್ಮ ವಾಹನದ ವಿಂಡ್​ಸ್ಕ್ರೀನ್​ಗೆ ಫಾಸ್​ಟ್ಯಾಗ್ ಅಂಟಿಸದೇ ಹೋದರೆ ಭಾರೀ ಬೆಲೆ ತೆರಬೇಕಾಗಬಹುದು. ಟೋಲ್ ಪ್ಲಾಜಾದಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಇ ನಿಯಮಗಳನ್ನು ಬಿಗಿಗೊಳಿಸಿದೆ. ಕೆಲ ವಾಹನ ಸವಾರರು ವಿಂಡ್​ಸ್ಕ್ರೀನ್ ಮೇಲೆ ಫಾಸ್​ಟ್ಯಾಗ್ ಅಳವಡಿಸದೇ ಇರುವುದು ಟೋಲ್ ಪ್ಲಾಜಾದಲ್ಲಿ ಟೋಲ್ ಕಲೆಕ್ಷನ್ ಕಾರ್ಯ ನಿಧಾನಗೊಳ್ಳುತ್ತಿರುವುದು ಕಂಡು ಬಂದಿತ್ತು. ಈ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರ ಹೊಸ ನಿಯಮಗಳನ್ನು ಮಾಡಿದ್ದು, ಅದರಂತೆ ಕಾರು ಅಥವಾ ಇತರ ತ್ರಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳ ವಿಂಡ್​ಶೀಲ್ಡ್​ನಲ್ಲಿ ಟ್ಯಾಗ್ ಅಂಟಿಸದಿದ್ದರೆ ಅವರಿಂದ ಎರಡು ಪಟ್ಟು ಹೆಚ್ಚು ಶುಲ್ಕ ವಸೂಲಿ ಮಾಡಬೇಕೆಂದು ಅಪ್ಪಣೆ ಮಾಡಿದೆ. ಅಷ್ಟೇ ಅಲ್ಲ, ಅಂಥ ವಾಹನಗಳನ್ನು ಬ್ಲ್ಯಾಕ್​ಲಿಸ್ಟ್​ಗೆ ಹಾಕುವಂತೆಯೂ ಸೂಚಿಸಲಾಗಿದೆ.

ಈ ಹೊಸ ನಿಯಮಗಳ ಬಗ್ಗೆ ಎಲ್ಲಾ ಟೋಲ್ ಸಂಗ್ರಹ ಏಜೆನ್ಸಿಗಳಿಗೆ ನಿನ್ನೆ ಗುರುವಾರ ಎಸ್​ಒಪಿ ಕಳುಹಿಸಲಾಗಿದೆ. ಹೆದ್ದಾರಿಯ ಎಲ್ಲಾ ಟೋಲ್ ಸೆಂಟರ್​​ಗಳಲ್ಲಿ ಈ ಬಗ್ಗೆ ಎಚ್ಚರಿಕೆಯ ಬೋರ್ಡ್ ಹಾಕಲಾಗುತ್ತಿದೆ. ವಾಹನದ ಮುಂಭಾಗದ ಗಾಜಿನ (ವಿಂಡ್​ಶೀಲ್ಡ್) ಮೇಲೆ ಫಾಸ್​ಟ್ಯಾಗ್ ಅಂಟಿಸುವುದು ಅಗತ್ಯವಾಗಿದೆ. ಟೋಲ್ ಪ್ಲಾಜಾದಲ್ಲಿ ಇರುವ ಸೆನ್ಸರ್​ಗಳು ಈ ಮುಂಭಾಗದ ವಿಂಡ್​ಶೀಲ್ಡ್​ನಲ್ಲಿರುವ ಫಾಸ್​ಟ್ಯಾಗ್ ಅನ್ನು ಗುರುತಿಸಿ ನಿಗದಿತ ಶುಲ್ಕ ಪಡೆಯುತ್ತವೆ.

ಇದನ್ನೂ ಓದಿ: ಎಚ್ಚರ..! ವೇಟಿಂಗ್ ಟಿಕೆಟ್ ಇಟ್ಕೊಂಡು ರಿಸರ್ವೇಶನ್ ಕೋಚ್​ಗೆ ನುಗ್ಗಿದ್ರೆ ಕಷ್ಟ ಕಷ್ಟ; ಈ ವೇಟಿಂಗ್ ರಗಳೆ ತಪ್ಪಿಸಲು ಸರ್ಕಾರ ಮಾಸ್ಟರ್​ಪ್ಲಾನ್

ಫಾಸ್​ಟ್ಯಾಗ್ ನಿಯಮ ಪಾಲಿಸದವರಿಗೆ ಸಿಸಿಟಿವಿ ಕಣ್ಗಾವಲು

ವಾಹನದ ಫ್ರಂಡ್ ವಿಂಡ್​ಸ್ಕ್ರೀನ್​ನಲ್ಲಿ ಫಾಸ್​ಟ್ಯಾಗ್ ಅಳವಡಿಸದೇ ಇರುವ ವಾಹನಗಳ ಮೇಲೆ ನಿಗಾ ಇಡಲು ಎಲ್ಲಾ ಟೋಲ್ ಪ್ಲಾಜಾ ಬಳಿ ಇರುವ ಸಿಸಿಟಿವಿಯನ್ನು ಬಳಸಲಾಗುತ್ತದೆ. ಫಾಸ್​ಟ್ಯಾಗ್ ಅನ್ನು ಸರಿಯಾಗಿ ಹಾಕದ ವಾಹನಗಳ ರಿಜಿಸ್ಟ್ರೇಶನ್ ನಂಬರ್ ಅನ್ನು ಸಿಸಿಟಿವಿ ಫೂಟೇಜ್ ಸಹಾಯದಿಂದ ಪಡೆಯಲಾಗುತ್ತದೆ. ಇಂಥ ವಾಹನಗಳಿಂದ ಎರಡು ಪಟ್ಟು ಹೆಚ್ಚು ಶುಲ್ಕ ವಸೂಲಾತಿ ಆಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೆದ್ದಾರಿ ಪ್ರಾಧಿಕಾರ ಕೊಟ್ಟಿರುವ ಎಸ್​ಒಪಿ ಪ್ರಕಾರ ಫ್ರಂಟ್ ವಿಂಡ್​ಶೀಲ್ಡ್​ನಲ್ಲಿ ಫಾಸ್​ಟ್ಯಾಗ್ ಹೊಂದಿರದ ವಾಹನಗಳು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಮೂಲಕ ಹಣ ಪಾವತಗೆ ಅವಕಾಶ ಇರುವುದಿಲ್ಲ. ಎರಡು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಹಾಗೆಯೇ, ಇಂಥ ವಾಹನಗಳನ್ನು ಬ್ಲ್ಯಾಕ್​ಲಿಸ್ಟ್​ಗೆ ಹಾಕಲಾಗುತ್ತದೆ.

ಫಾಸ್​ಟ್ಯಾಗ್ ಕೊಡುವ ಬ್ಯಾಂಕ್​ಗಳಿಗೂ ಸೂಚನೆ

ಬ್ಯಾಂಕುಗಳು ಅಥವಾ ಏಜೆನ್ಸಿಗಳು ಫಾಸ್​ಟ್ಯಾಗ್ ವಿತರಿಸುವ ಸಂದರ್ಭದಲ್ಲೇ ಅದನ್ನು ನಿಗದಿತ ವಾಹನದ ಮುಂಭಾಗದ ವಿಂಡ್​ಶೀಲ್ಡ್ ಮೇಲೆ ಅಂಟಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೆದ್ದಾರಿ ಸಚಿವಾಲಯ ಆದೇಶಿಸಿದೆ.

ಇದನ್ನೂ ಓದಿ: ಬೈಸಿಕಲ್​ನಿಂದ ಹಿಡಿದು ಬ್ರಹ್ಮೋಸ್​ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ

ದೇಶಾದ್ಯಂತ ಎಂಟು ಕೋಟಿಗೂ ಹೆಚ್ಚು ಜನರು ಫಾಸ್​ಟ್ಯಾಗ್ ಹೊಂದಿದ್ದಾರೆ. ಹೆದ್ದಾರಿಯಲ್ಲಿ ಪ್ರಯಾಣಿಸುವ ಶೇ. 98ರಷ್ಟು ವಾಹನಗಳು ಫಾಸ್​ಟ್ಯಾಗ್ ಹೊಂದಿವೆ. ದೇಶಾದ್ಯಂತ 45,000 ಕಿಮೀಯಷ್ಟು ರಸ್ತೆಗಳಲ್ಲಿ 1,000 ಟೋಲ್ ಪ್ಲಾಜಾಗಳಿವೆ. ಈ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ಬಂದ ಬಳಿಕ ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ನಿಲ್ಲುವ ಪ್ರಮೇಯ ತಪ್ಪಿದೆ. ಮ್ಯೂನುಯಲ್ ಆಗಿ ಸುಂಕ ಪಡೆಯುವುದರಿಂದ ಆಗುತ್ತಿದ್ದ ವಿಳಂಬ ತಪ್ಪಿದೆ. ಹೆದ್ದಾರಿ ಪ್ರಯಾಣ ತುಸು ಆರಾಮಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ