ಒಂದು ವೇಳೆ ಒಬ್ಬ ವ್ಯಕ್ತಿಯ ಪತ್ನಿ ಕೂಡ ಉದ್ಯೋಗ ಮಾಡುತ್ತಿದ್ದ ಪಕ್ಷದಲ್ಲಿ ಅವರು ತಮ್ಮ ಪೋಷಕರಿಗೆ ಆರೋಗ್ಯ ವಿಮೆಯನ್ನು ಖರೀದಿಸುವ ಮೂಲಕ 50 ಸಾವಿರ ರೂಪಾಯಿ ತನಕ ವಿನಾಯಿತಿ ಕ್ಲೇಮ್ ಮಾಡಬಹುದು. ಈ ರೀತಿಯಾಗಿ ಕುಟುಂಬದ ಒಟ್ಟಾರೆ ಆದಾಯದಲ್ಲಿ ಗರಿಷ್ಠ ಮಟ್ಟದ ತೆರಿಗೆ ಉಳಿತಾಯ ವಿನಾಯಿತಿ ಪಡೆಯಬಹುದು.
ತಂದೆ ಅಥವಾ ತಾಯಿ ಅಥವಾ ಪೋಷಕರಿಬ್ಬರಿಗೂ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮಾಡುವ ಮೂಲಕ ಗರಿಷ್ಠ 25,000 ರೂಪಾಯಿ ವಿನಾಯಿತಿ ಕ್ಲೇಮ್ ಮಾಡಬಹುದು. ಒಂದು ವೇಳೆ ಪೋಷಕರು ಹಿರಿಯ ನಾಗರಿಕರಾಗಿದ್ದಲ್ಲಿ (60 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರು) ಗರಿಷ್ಠ 50,000 ರೂಪಾಯಿ ತನಕ ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಗರಿಷ್ಠ ವಿನಾಯಿತಿ ಪಡೆಯುವ ಬಗೆ ಹೇಗೆ ಎಂಬ ಮಾಹಿತಿ ಇಲ್ಲಿದೆ:
– ಸ್ವಂತಕ್ಕೆ, ಸಂಗಾತಿಗೆ ಮತ್ತು ಅವಲಂಬಿತ ಮಕ್ಕಳಿಗೆ ಕವರ್ ಆಗುವಂತೆ ಕಟ್ಟಿದ ಪ್ರೀಮಿಂ ರೂ. 25,000
– ಹೆಚ್ಚುವರಿಯಾಗಿ 25,000 ರೂಪಾಯಿ ಪ್ರೀಮಿಯಂ ಪಾವತಿಗೂ ಅವಕಾಶ ಇದೆ. ಆದರೆ ಅವಲಂಬಿತ ಪೋಷಕರ ವಯಸ್ಸು 60 ವರ್ಷದೊಳಗಿರಬೇಕು; ಅಥವಾ
– ಹೆಚ್ಚುವರಿ ರೂ. 50,000: ಅವಲಂಬಿತ ಪೋಷಕರಿಗೆ 60 ವರ್ಷ ಅಥವಾ ಮೇಲ್ಪಟ್ಟಿದ್ದಲ್ಲಿ (ಹಿರಿಯ ನಾಗರಿಕರು);
ಆರೋಗ್ಯ ವಿಮೆ ಪ್ರೀಮಿಯಂ ಪಾವತಿಯನ್ನು ಗದು ಹೊರತುಪಡಿಸಿದಂತೆ ಬೇರೆ ಯಾವುದಾದರೂ ವಿಧಾನದಲ್ಲಿ ಮಾಡಿರಬೇಕು. ಇಲ್ಲದಿದ್ದಲ್ಲಿ ವಿನಾಯಿತಿ ಸಿಗುವುದಿಲ್ಲ. ಆದರೆ ಆರೋಗ್ಯ ವಿಮೆಯನ್ನು ತೆರಿಗೆ ಉಳಿತಾಯ ಎಂಬಷ್ಟೇ ಕಾರಣಕ್ಕೆ ಖರೀದಿಸಬಾರದು. ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಹಣಕಾಸು ಒತ್ತಡ ಕಡಿಮೆ ಮಾಡುತ್ತದೆ ಎಂಬ ಅಂಶವೂ ಗಮನದಲ್ಲಿರಬೇಕು.
ಇದನ್ನೂ ಓದಿ: Income Tax Return: ಆದಾಯ ತೆರಿಗೆ ಸಂಬಂಧಿತ ಈ 5 ಜವಾಬ್ದಾರಿಗಳನ್ನು ಮುಗಿಸಲು ಮಾರ್ಚ್ 31 ಗಡುವು