Passport For Newborn Baby: ನವಜಾತ ಶಿಶುವಿನ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
Steps to Apply Passport For Newborn Baby; ಅಂತಾರಾಷ್ಟ್ರೀಯ ಪ್ರಯಾಣ ಮಾಡುವ ಚಿಕ್ಕ ಮಕ್ಕಳು ಮತ್ತು ನವಜಾತ ಶಿಶುಗಳ ಹೆಸರಿನಲ್ಲಿಯೂ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ನವಜಾತ ಶಿಶುಗಳ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ಹಂತ ಹಂತದ ವಿವರಣೆ ಇಲ್ಲಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಪಾಸ್‌ಪೋರ್ಟ್ (Passport) ಬಹು ಅಗತ್ಯ. ಗುರುತಿನ ಚೀಟಿಯಾಗಿಯೂ ವಿಳಾಸ ದೃಢೀಕರಣದ ಗುರುತಾಗಿಯೂ ಪಾಸ್‌ಪೋರ್ಟ್ ಅನ್ನು ಬಳಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನೂ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅಂತಾರಾಷ್ಟ್ರೀಯ ಪ್ರಯಾಣ (International Travel) ಮಾಡುವ ಚಿಕ್ಕ ಮಕ್ಕಳು ಮತ್ತು ನವಜಾತ ಶಿಶುಗಳ ಹೆಸರಿನಲ್ಲಿಯೂ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ನವಜಾತ ಶಿಶುವಿಗೆ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವ ವಿಧಾನ ವಯಸ್ಕರ ಅರ್ಜಿ ಸಲ್ಲಿಕೆ ವಿಧಾನಕ್ಕಿಂತ ತುಸು ಭಿನ್ನವಾಗಿದೆ. ಇಲ್ಲಿ ಪಾಲಕರು ಅಥವಾ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ‘ಅನುಬಂಧ ಡಿ’ಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಶಿಶುವಿನ ವಿವರಗಳನ್ನು ದೃಢೀಕರಿಸುವ ಘೋಷಣಾ ಪತ್ರವನ್ನು ಅರ್ಜಿ ಜತೆ ಸಲ್ಲಿಸಬೇಕಾಗುತ್ತದೆ.
ನವಜಾತ ಶಿಶುಗಳ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ಹಂತ ಹಂತದ ವಿವರಣೆ ಇಲ್ಲಿದೆ;
- ಪಾಸ್‌ಪೋರ್ಟ್ ಸೇವಾ ಆನ್ಲೈನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿ
- ನೋಂದಾಯಿತ ಲಾಗಿನ್ ಐಡಿ ಮೂಲಕ ಪಾಸ್‌ಪೋರ್ಟ್ ಸೇವಾ ಆನ್ಲೈನ್ ಪೋರ್ಟಲ್ಗೆ ಲಾಗಿನ್ ಆಗಿ
- ‘ಅಪ್ಲೈ ಫಾರ್ ಫ್ರೆಷ್ ಪಾಸ್‌ಪೋರ್ಟ್/ರಿ-ಇಶ್ಯೂ ಆಫ್ ಪಾಸ್‌ಪೋರ್ಟ್’ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅರ್ಜಿಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ
- ‘ವಿವ್ ಸೇವ್ಡ್ / ಸಬ್ಮಿಟ್ಟೆಡ್ ಅಪ್ಲಿಕೇಷನ್ಸ್’ ಸ್ಕ್ರೀನ್ ಮೇಲೆ ಕಾಣಿಸುವ ‘ಪೇ ಆ್ಯಂಡ್ ಶೆಡ್ಯೂಲ್ ಅಪಾಯಿಂಟ್ಮೆಂಟ್’ ಮೇಲೆ ಕ್ಲಿಕ್ ಮಾಡಿ
- ಇದು ನಿಮಗೆ ಅಪಾಯಿಂಟ್ಮೆಂಟ್ ನಿಗದಿಪಡಿಸಲು ಅನುಮತಿಸುತ್ತದೆ
- ಆನ್ಲೈನ್ ಪಾವತಿ ಮಾಡಿ (ಇದು ಎಲ್ಲ ಪಿಎಸ್ಕೆ/ಪಿಒಪಿಎಸ್ಕೆ/ಪಿಒ ಅಪಾಯಿಂಟ್ಮೆಂಟ್ಗಳಿಗೆ ಕಡ್ಡಾಯವಾಗಿದೆ)
- ‘ಪ್ರಿಂಟ್ ಅಪ್ಲಿಕೇಷನ್ ರಿಸಿಪ್ಟ್’ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ರೆಫೆರೆನ್ಸ್ ನಂಬರ್ / ಅಪಾಯಿಂಟ್ಮೆಂಟ್ ನಂಬರ್ ಇರುವ ರಿಸಿಟ್ ಪ್ರಿಂಟ್ ತೆಗೆದುಕೊಳ್ಳಿ.
- ನೀವು ಅಪಾಯಿಂಟ್ಮೆಂಟ್ ಪಡೆದಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರದ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ
- ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ತೆರಳುವಾಗ ದಾಖಲೆಗಳ ಮೂಲ ಪ್ರತಿಗಳನ್ನು ಕೊಂಡೊಯ್ಯಿರಿ. 4 ವರ್ಷಕ್ಕಿಂತ ಕೆಳಗಿನವರ ಅರ್ಜಿಗಳ ಜತೆ ಇತ್ತೀಚೆಗೆ ತೆಗೆದ ಬಿಳಿ ಬ್ಯಾಕ್ಗ್ರೌಂಡ್ನ ಪಾಸ್‌ಪೋರ್ಟ್ ಸೈಜ್ (4.5 X 3.5 ಸೆಂ.ಮೀ.) ಫೋಟೊ ನಿಮ್ಮ ಜತೆಗಿರಲಿ. ಹಿರಿಯರ ಫೋಟೊ ತೆಗೆದಂತೆ ಮಕ್ಕಳ ಫೋಟೊವನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ತೆಗೆಯುವುದಿಲ್ಲ.
- ಅಪ್ರಾಪ್ತರ ಅರ್ಜಿಗಳಿಗೆ ಸಬಂಧಪಟ್ಟ ದಾಖಲೆಗಳನ್ನು ಪಾಲಕರೇ ದೃಢೀಕರಿಸಿರಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Fri, 23 December 22