ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿದ್ದರೆ ಈ ದೇಶಕ್ಕೆ ಪ್ರಯಾಣಿಸುವಂತಿಲ್ಲ
ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ಹೆಸರುಗಳನ್ನು ಸ್ಪಷ್ಟವಾಗಿ ಘೋಷಿಸಿರಬೇಕು. ಮಧ್ಯದ ಹೆಸರು ಮಾತ್ರ ಇದ್ದರೆ ಯುಎಇಯಲ್ಲಿ ಅದಕ್ಕೆ ಮಾನ್ಯತೆಯಿಲ್ಲ.
ನವದೆಹಲಿ: ಇನ್ನುಮುಂದೆ ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಫಸ್ಟ್ ನೇಮ್ (First Name) ಮತ್ತು ಲಾಸ್ಟ್ ನೇಮ್ (Last Name) ಇಲ್ಲದೆ ಕೇವಲ ಒಂದೇ ಹೆಸರಿದ್ದರೆ ನೀವು ಯುಎಇ (United Arab Emirates)ಗೆ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ. ಪ್ರವಾಸಕ್ಕೆ ಅಥವಾ ಇತರ ಯಾವುದೇ ರೀತಿಯ ಭೇಟಿಗಾಗಿ ವೀಸಾದಲ್ಲಿ ಪ್ರಯಾಣಿಸುವವರ ಪಾಸ್‌ಪೋರ್ಟ್‌ನಲ್ಲಿ (Passport) ಒಂದೇ ಹೆಸರಿದ್ದರೆ ಆ ಪ್ರಯಾಣಿಕರಿಗೆ ಯುಎಇಯಲ್ಲಿ ವಾಸ್ತವ್ಯ ಹೂಡಲು ಅನುಮತಿಯಿಲ್ಲ. ಕಳೆದ ಸೋಮವಾರದಿಂದಲೇ ಜಾರಿಗೆ ಬರುವಂತೆ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು ಇಂಡಿಗೋ ಏರ್ಲೈನ್ಸ್ಗೆ ತಿಳಿಸಿದ್ದಾರೆ.
ಇದರರ್ಥವೇನೆಂದರೆ, ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ಹೆಸರುಗಳನ್ನು ಸ್ಪಷ್ಟವಾಗಿ ಘೋಷಿಸಿರಬೇಕು. ಮಧ್ಯದ ಹೆಸರು ಮಾತ್ರ ಇದ್ದರೆ ಯುಎಇಯಲ್ಲಿ ಅದಕ್ಕೆ ಮಾನ್ಯತೆಯಿಲ್ಲ.
ಇದನ್ನೂ ಓದಿ: ಕೇವಲ ಪಾಸ್‌ಪೋರ್ಟ್ ಇದ್ದರೆ ಸಾಕು, ವೀಸಾವಿಲ್ಲದೆ ಭಾರತದಿಂದ ಪ್ರಯಾಣಿಸಬಹುದಾದ ದೇಶಗಳಿವು
ಯುಎಇ ಅಧಿಕಾರಿಗಳ ಸೂಚನೆಗಳ ಪ್ರಕಾರ, ನವೆಂಬರ್ 21ರಿಂದ ಜಾರಿಗೆ ಬರುವಂತೆ ಪ್ರವಾಸಿ, ವಿಸಿಟಿಂಗ್ ಅಥವಾ ಇತರ ಯಾವುದೇ ರೀತಿಯ ವೀಸಾದಡಿ ಪ್ರಯಾಣಿಸುವವರು ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಒಂದೇ ಹೆಸರನ್ನು ಹೊಂದಿದ್ದರೆ ಆ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಹೀಗಾಗಿ, ಪಾಸ್‌ಪೋರ್ಟ್‌ನಲ್ಲಿ ಆ ರೀತಿಯ ದೋಷ ಇರುವವರು ಕೂಡಲೆ ಅದನ್ನು ಸರಿಪಡಿಸಬೇಕು.
ಹೆಚ್ಚಿನ ವಿವರಗಳಿಗಾಗಿ ತಮ್ಮ ಖಾತೆ ವ್ಯವಸ್ಥಾಪಕರನ್ನು ಸಂಪರ್ಕಿಸಲು ಅಥವಾ ಅವರ ವೆಬ್‌ಸೈಟ್ goindigo.comಗೆ ಭೇಟಿ ನೀಡುವಂತೆ ವಿಮಾನಯಾನ ಸಂಸ್ಥೆಯು ಸೂಚಿಸಿದೆ.