AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್​ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು

Income Tax Rules 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದಿರುವುದರಿಂದ, ತೆರಿಗೆದಾರರಲ್ಲಿ ಮೂಡಿರುವ ಗೊಂದಲವೊಂದಕ್ಕೆ ಇಲಾಖೆ ಸ್ಪಷ್ಟನೆ ನೀಡಿದೆ. ‘ತೆರಿಗೆದಾರರು ಒಂದೇ ಆದಾಯಕ್ಕೆ ಎರಡು ಬಾರಿ ಐಟಿಆರ್ (ITR) ಸಲ್ಲಿಸಬೇಕಾಗಿಲ್ಲ’ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ವರ್ಷದ (2026-27) ಆದಾಯಕ್ಕೆ 2027ರ ಏಪ್ರಿಲ್ ನಂತರ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುತ್ತೇವೆ. ಆಗ 2026-27 ಟ್ಯಾಕ್ಸ್ ಇಯರ್ ಅಡಿಯಲ್ಲಿ ಐಟಿಆರ್ ಫೈಲ್ ಮಾಡಬೇಕು.

ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್​ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು
ಆದಾಯ ತೆರಿಗೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 02, 2026 | 1:46 PM

Share

ನವದೆಹಲಿ, ಜುಲೈ 2: ಕೇಂದ್ರ ಸರ್ಕಾರವು ಹಳೆಯ ‘ಆದಾಯ ತೆರಿಗೆ ಕಾಯ್ದೆ 1961’ರ ಬದಲಿಗೆ ಹೊಸ ‘ಆದಾಯ ತೆರಿಗೆ ಕಾಯ್ದೆ 2025’ ಅನ್ನು ಜಾರಿಗೆ ತಂದಿದೆ. ಈ ಹೊಸ ಕಾಯ್ದೆಯಲ್ಲಿ ಈ ಹಿಂದೆ ಇದ್ದ “ಅಸ್ಸೆಸ್‌ಮೆಂಟ್ ಇಯರ್” (Assessment Year – AY) ಮತ್ತು “ಪ್ರಿವಿಯಸ್ ಇಯರ್” (Previous Year) ಎಂಬ ಪದಗಳನ್ನು ತೆಗೆದುಹಾಕಿ, ಅದರ ಬದಲಿಗೆ ಕೇವಲ “ಟ್ಯಾಕ್ಸ್ ಇಯರ್” (Tax Year) ಎಂಬ ಒಂದೇ ಪದವನ್ನು ಬಳಸಲು ನಿರ್ಧರಿಸಲಾಗಿದೆ. ಈ ನಿಯಮವು ಏಪ್ರಿಲ್ 1 ರಿಂದ ಜಾರಿಗೆ ಬಂದಿರುವುದರಿಂದ, ಹಲವು ತೆರಿಗೆದಾರರಲ್ಲಿ “ನಾವು ಅಸ್ಸೆಸ್‌ಮೆಂಟ್ ಇಯರ್ 2026-27 ಮತ್ತು ಟ್ಯಾಕ್ಸ್ ಇಯರ್ 2026-27 ಎರಡಕ್ಕೂ ಪ್ರತ್ಯೇಕವಾಗಿ ಐಟಿಆರ್ ಸಲ್ಲಿಸಬೇಕೇ?” ಎಂಬ ಗೊಂದಲ ಮೂಡಿರಬಹುದು. ಈ ಗೊಂದಲವನ್ನು ಪರಿಹರಿಸಿರುವ ಇಲಾಖೆ, ತೆರಿಗೆದಾರರು ಯಾವುದೇ ಕಾರಣಕ್ಕೂ ಎರಡು ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಒಂದೇ ಒಂದು ಐಟಿಆರ್ ಸಾಕು

ನೀವು ಏಪ್ರಿಲ್ 1, 2025 ರಿಂದ ಮಾರ್ಚ್ 31, 2026 ರ ಅವಧಿಯಲ್ಲಿ (ಹಣಕಾಸು ವರ್ಷ 2025-26) ಗಳಿಸಿದ ಆದಾಯಕ್ಕೆ ಕೇವಲ ಒಂದು ಐಟಿಆರ್ ಮಾತ್ರ ಸಲ್ಲಿಸಬೇಕು. ಈ ಆದಾಯವು ಹೊಸ ಕಾಯ್ದೆ ಜಾರಿಗೆ ಬರುವ ಮುನ್ನ ಗಳಿಸಿದ್ದಾಗಿರುವುದರಿಂದ, ಇದಕ್ಕೆ ಹಳೆಯ ‘ಆದಾಯ ತೆರಿಗೆ ಕಾಯ್ದೆ 1961’ರ ನಿಯಮಗಳೇ ಅನ್ವಯಿಸುತ್ತವೆ. ಇದನ್ನು ಅಸ್ಸೆಸ್‌ಮೆಂಟ್ ಇಯರ್ (AY) 2026-27 ಅಡಿಯಲ್ಲೇ ದಾಖಲಿಸಬೇಕು.

ಇದನ್ನೂ ಓದಿ: ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತ; ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಗಮನಿಸಿ

“ಟ್ಯಾಕ್ಸ್ ಇಯರ್” ನಿಯಮ ಯಾವಾಗ ಅನ್ವಯವಾಗುತ್ತದೆ?

ಹೊಸ “ಟ್ಯಾಕ್ಸ್ ಇಯರ್” ನಿಯಮವು ಏಪ್ರಿಲ್ 1, 2026 ರಿಂದ ಗಳಿಸುವ ಆದಾಯಕ್ಕೆ ಮಾತ್ರ ಅನ್ವಯವಾಗುತ್ತದೆ. ಇದರ ಅಡಿಯಲ್ಲಿ ಮೊದಲ ಐಟಿಆರ್ ಅನ್ನು ಮಾರ್ಚ್ 31, 2027 ರ ನಂತರವಷ್ಟೇ ಸಲ್ಲಿಸಬೇಕಾಗುತ್ತದೆ.

ಯಾವಾಗ ಯಾವುದನ್ನು ಆಯ್ದುಕೊಳ್ಳಬೇಕು?

  • 1 ಏಪ್ರಿಲ್ 2025 – 31 ಮಾರ್ಚ್ 2026 ಅವಧಿಯದ್ದಾದರೆ ಅಸ್ಸೆಸ್‌ಮೆಂಟ್ ಇಯರ್ (AY) 2026-27 ಅನ್ನು ಆಯ್ದುಕೊಳ್ಳಬೇಕು.
  • 1 ಏಪ್ರಿಲ್ 2026 – 31 ಮಾರ್ಚ್ 2027 ಅವಧಿಯದ್ದಾದರೆ ಟ್ಯಾಕ್ಸ್ ಇಯರ್ (Tax Year) 2026-27 ಅನ್ನು ಆಯ್ದುಕೊಳ್ಳಬೇಕು.

ನೀವು ಪ್ರಸಕ್ತ ವರ್ಷದಲ್ಲಿ (1 ಏಪ್ರಿಲ್ 2026 ರ ನಂತರ) ಗಳಿಸುತ್ತಿರುವ ಆದಾಯಕ್ಕೆ ಪಾವತಿಸಬೇಕಾದ ಮುಂಗಡ ತೆರಿಗೆ (Advance Tax) ಜವಾಬ್ದಾರಿಗಳು ಮಾತ್ರ ಈಗಾಗಲೇ ಹೊಸ ‘ಆದಾಯ ತೆರಿಗೆ ಕಾಯ್ದೆ 2025’ ರ ಅಡಿಯಲ್ಲೇ ನಿರ್ವಹಿಸಲ್ಪಡುತ್ತಿವೆ.

ಇದನ್ನೂ ಓದಿ: mAadhaar ನಿರ್ಗಮನ, ಹೊಸ ಆಧಾರ್ ಆ್ಯಪ್ ಆಗಮನ; ನೂತನ ಆ್ಯಪ್​ನಲ್ಲಿನ ವಿಶೇಷತೆಗಳೇನು?

ಸರಳವಾಗಿ ಹೇಳುವುದಾದರೆ, ಪ್ರಸಕ್ತ ಐಟಿಆರ್ ಸಲ್ಲಿಕೆ ಅವಧಿಯಲ್ಲಿ ನೀವು ಎಂದಿನಂತೆ ಕೇವಲ ಒಂದು ರಿಟರ್ನ್ (AY 2026-27) ಸಲ್ಲಿಸಿದರೆ ಸಾಕು. ಹೊಸ ಕಾನೂನಿನ ಹೆಸರು ಬದಲಾವಣೆಯಿಂದಾಗಿ ಹೆಚ್ಚುವರಿ ರಿಟರ್ನ್ ಸಲ್ಲಿಸುವ ಯಾವುದೇ ನಿಯಮವಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ