ಜಾಗತಿಕ ಅಸ್ಥಿರತೆಯ ಮಧ್ಯೆಯೂ ಭಾರತದ್ದು ಸುದೃಢ ಸ್ಥಾನ: ಉದ್ಯಮಿ ಅಜಯ್ ಪಿರಮಾಲ್

ಭಾರತದ ಒಟ್ಟಾರೆ ಆರ್ಥಿಕ ವಾತಾವರಣ ಉತ್ತಮವಾಗಿದೆ ಎಂದು ಉದ್ಯಮಿ ಅಜಯ್ ಪಿರಮಾಲ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಅಸ್ಥಿರ ಅಂಶಗಳ ಮಧ್ಯೆ, ಇತರ ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಸ್ಪರ್ಧಾತ್ಮಕವಾಗಿದೆ ಎಂದು ಪಿರಮಾಲ್ ಗ್ರೂಪ್ ಅಧ್ಯಕ್ಷರಾದ ಅವರು ಅಭಿಪ್ರಾಯಪಟ್ಟಿದ್ದಾರೆ. ಆಂತರಿಕ ಅನುಭೋಗ, ಖಾಸಗಿ ಹೂಡಿಕೆ, ಗಟ್ಟಿಯಾದ ಮಾರುಕಟ್ಟೆ, ಉತ್ತಮಗೊಳ್ಳುತ್ತಿರುವ ಮೂಲಸೌಕರ್ಯ ಇವೆಲ್ಲಾ ಅಂಶಗಳು ಭಾರತಕ್ಕೆ ಅನುಕೂಲ ತಂದಿವೆ ಎಂದಿದ್ದಾರೆ.

ಜಾಗತಿಕ ಅಸ್ಥಿರತೆಯ ಮಧ್ಯೆಯೂ ಭಾರತದ್ದು ಸುದೃಢ ಸ್ಥಾನ: ಉದ್ಯಮಿ ಅಜಯ್ ಪಿರಮಾಲ್
ಅಜಯ್ ಪಿರಮಾಲ್
Image Credit source: PTI

Updated on: Sep 03, 2026 | 7:49 PM

ನವದೆಹಲಿ, ಸೆಪ್ಟೆಂಬರ್ 3: ಪ್ರಸ್ತುತ ಜಾಗತಿಕವಾಗಿ ವಿವಿಧ ಆರ್ಥಿಕ ಸವಾಲುಗಳು ಮತ್ತು ಭೌಗೋಳಿಕ-ರಾಜಕೀಯ ಅಸ್ಥಿರತೆಗಳು ಎದುರಾಗಿದ್ದರೂ, ಭಾರತವು ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಬಲವಾದ ಹಾಗೂ ಸ್ಪರ್ಧಾತ್ಮಕ ಸ್ಥಾನದಲ್ಲಿದೆ ಎಂದು ಪಿರಮಾಲ್ ಗ್ರೂಪ್ (Piramal Group) ಅಧ್ಯಕ್ಷ ಅಜಯ್ ಪಿರಮಾಲ್ ಅಭಿಪ್ರಾಯಪಟ್ಟಿದ್ದಾರೆ.

ಬಿಸಿನೆಸ್ ಟುಡೇ ಜೊತೆ ಮಾತನಾಡಿದ ಅವರು, ಭಾರತದ ಆರ್ಥಿಕತೆಯು ಆಂತರಿಕ ಬಲ ಮತ್ತು ಸಶಕ್ತ ಮಾರುಕಟ್ಟೆಯನ್ನು ಹೊಂದಿರುವುದರಿಂದ ಜಾಗತಿಕ ಆಘಾತಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಶೇ 7.8 ಜಿಡಿಪಿ ದರ ಸಮರ್ಥಿಸಿದ ವಿಶ್ವಬ್ಯಾಂಕ್ ಅಧಿಕಾರಿ; ಸಾಕ್ಷ್ಯ ಸೂಚಕಗಳನ್ನು ಉಲ್ಲೇಖಿಸಿದ ನೀಲಕಂಠ ಮಿಶ್ರಾ

ಭಾರತದ ಬೃಹತ್ ಜನಸಂಖ್ಯೆ ಮತ್ತು ನಿರಂತರವಾಗಿ ಬೆಳೆಯುತ್ತಿರುವ ಆಂತರಿಕ ಅನುಭೋಗ (Consumption) ದೇಶದ ಆರ್ಥಿಕತೆಗೆ ಮುಖ್ಯ ರಕ್ಷಣಾ ಕವಚವಾಗಿದೆ ಎಂದು ಅಜಯ್ ಪಿರಮಾಲ್ ಹೇಳಿದ್ದಾರೆ.

ಮೂಲಸೌಕರ್ಯ ಮತ್ತು ಸುಧಾರಣೆಗಳು: ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆ ಮತ್ತು ಸರಳೀಕೃತ ಉದ್ಯಮ ನೀತಿಗಳು (Ease of Doing Business) ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆ (Private Capex) ಮರಳಿ ವೇಗ ಪಡೆಯುತ್ತಿದ್ದು, ಇದು ಮುಂಬರುವ ತ್ರೈಮಾಸಿಕಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ನವೀನ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಪಿರಮಾಲ್ ಗ್ರೂಪ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಡಾಲರ್ ಎದುರು ಪುಟಿದೆದ್ದ ಭಾರತೀಯ ಕರೆನ್ಸಿ; ಒಮ್ಮೆಗೇ 47 ಪೈಸೆ ಜಂಪ್; 3 ತಿಂಗಳ ಗರಿಷ್ಠ ಮೌಲ್ಯ

ಜಾಗತಿಕ ಪೂರೈಕೆ ಸರಪಳಿಯಲ್ಲಿ (Global Supply Chain) ಭಾರತವು ಚೀನಾಗೆ ಪರ್ಯಾಯವಾಗಿ ರೂಪುಗೊಳ್ಳುತ್ತಿದ್ದು, ಭಾರತೀಯ ಉದ್ಯಮ ರಂಗಕ್ಕೆ ಇದು ಸುವರ್ಣಾವಕಾಶವಾಗಿದೆ ಎಂದು ಪಿರಮಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಿರಮಾಲ್ ಗ್ರೂಪ್​ನ ಮುಖ್ಯಸ್ಥರಾಗಿರುವ ಅಜಯ್ ಪಿರಮಾಲ್ ಅವರು ಅಂಬಾನಿ ಕುಟುಂಬದ ಬೀಗರೂ ಹೌದು. ಮುಕೇಶ್ ಅಂಬಾನಿಯವರ ಮಗಳಾದ ಇಶಾ ಅಂಬಾನಿ ಅವರು ಪಿರಮಾಲ್ ಕುಟುಂಬದ ಸೊಸೆಯಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us