AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಲರ್ ಎದುರು ಪುಟಿದೆದ್ದ ಭಾರತೀಯ ಕರೆನ್ಸಿ; ಒಮ್ಮೆಗೇ 47 ಪೈಸೆ ಜಂಪ್; 3 ತಿಂಗಳ ಗರಿಷ್ಠ ಮೌಲ್ಯ

ಡಾಲರ್ ಎದುರು ಭಾರತದ ರುಪಾಯಿ ಕರೆನ್ಸಿ ಉತ್ತಮ ಪ್ರತಿರೋಧ ತೋರಿದೆ. ಇಂದು ಒಂದೇ ದಿನ 47 ಪೈಸೆ ಮೌಲ್ಯ ಹೆಚ್ಚಳ ಆಗಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ ಇವತ್ತು ಬೆಳಗ್ಗೆ ಡಾಲರ್ ಎದುರು 94.26 ಮೌಲ್ಯದಲ್ಲಿ ರುಪಾಯಿ ವಹಿವಾಟು ಮಾಡುತ್ತಿದೆ. ಇದು ಕಳೆದ ಮೂರು ತಿಂಗಳಲ್ಲೇ ರುಪಾಯಿಯ ಉತ್ತಮ ಸ್ಥಿತಿ.

ಡಾಲರ್ ಎದುರು ಪುಟಿದೆದ್ದ ಭಾರತೀಯ ಕರೆನ್ಸಿ; ಒಮ್ಮೆಗೇ 47 ಪೈಸೆ ಜಂಪ್; 3 ತಿಂಗಳ ಗರಿಷ್ಠ ಮೌಲ್ಯ
ರುಪಾಯಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2026 | 4:08 PM

Share

ಮುಂಬೈ, ಸೆಪ್ಟೆಂಬರ್ 3: ಭಾರತದ ರುಪಾಯಿ ಕರೆನ್ಸಿ ಉತ್ತಮ ಕಂಬ್ಯಾಕ್ ಮಾಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ 47 ಪೈಸೆಯಷ್ಟು ಏರಿಕೆ ಕಂಡಿದೆ. ಒಂದು ಡಾಲರ್​ಗೆ 94.26 ರೂಪಾಯಿ ಮೌಲ್ಯದಲ್ಲಿ ಫಾರೆಕ್ಸ್​ನಲ್ಲಿ (Forex Market) ವಹಿವಾಟು ನಡೆಯುತ್ತಿದೆ. ಕಳೆದ ಎರಡು ತಿಂಗಳಲ್ಲೇ ರುಪಾಯಿಯ ಗರಿಷ್ಠ ಮೌಲ್ಯ ಇದಾಗಿದೆ. ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ (JCR) ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿದ್ದು, ಹಾಗೂ ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ನಿರೀಕ್ಷೆಮೀರಿದ ಪ್ರಮಾಣದಲ್ಲಿ ಹಿಗ್ಗಿದ್ದು, ರುಪಾಯಿ ಚೇತರಿಕೆಗೆ ಪೂರಕ ವಾತಾವರಣ ಸೃಷ್ಟಿಸಿರಬಹುದು.

ಡಾಲರ್ ಎದುರು ರುಪಾಯಿ ಚೇತರಿಕೆಗೆ ಪ್ರಮುಖ ಕಾರಣಗಳು

  • ಬಲವಾದ ಆರ್ಥಿಕ ದತ್ತಾಂಶ: ಏಪ್ರಿಲ್​ನಿಂದ ಜೂನ್​ವರೆಗಿನ ಮೊದಲ ಕ್ವಾರ್ಟರ್​ನಲ್ಲಿ (Q1) ಜಿಡಿಪಿ ಬೆಳವಣಿಗೆ ದರ 7.8% ತಲುಪಿರುವುದು ಮತ್ತು ಜಾಗತಿಕ ರೇಟಿಂಗ್ ಏಜೆನ್ಸಿ ಜೆಸಿಆರ್ (JCR) ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ‘BBB+’ ನಿಂದ ‘A-‘ ಗೆ ಹೆಚ್ಚಿಸಿರುವುದು ಹೂಡಿಕೆದಾರರಲ್ಲಿ ಹೊಸ ವಿಶ್ವಾಸ ಮೂಡಿಸಿದೆ.
  • ಕಚ್ಚಾ ತೈಲ ದರದಲ್ಲಿ ಸ್ಥಿರತೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ತುಸು ತಣ್ಣಗಾಗಿರುವುದು ರೂಪಾಯಿಯ ಚೇತರಿಕೆಗೆ ನೆರವಾಗಿದೆ.
  • ವಿದೇಶಿ ಹೂಡಿಕೆ ಹರಿವು: ಭಾರತೀಯ ಆರ್ಥಿಕತೆಯ ಉತ್ತಮ ಮುನ್ನೋಟದಿಂದಾಗಿ ದೇಶೀಯ ಸಾಲ ಮತ್ತು ಷೇರು ಮಾರುಕಟ್ಟೆಗೆ ವಿದೇಶಿ ಬಂಡವಾಳ ಹರಿವು ಹೆಚ್ಚಿರುವುದು ಮೌಲ್ಯ ವರ್ಧನೆಗೆ ಅನುಕೂಲ ಮಾಡಿಕೊಟ್ಟಿದೆ.

ಇದನ್ನೂ ಓದಿ: ಎಸ್​ಬಿಐ ಗ್ರಾಹಕರ ಗಮನಕ್ಕೆ; ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಅರ್ಧದಷ್ಟು ಇಳಿಕೆ; ಅಕ್ಟೋಬರ್​ನಿಂದ ಹೊಸ ನಿಯಮ ಜಾರಿ

ಭಾರತೀಯ ಬ್ಯಾಂಕುಗಳಿಗೆ ಎನ್​ಆರ್​ಐಗಳಿಂದ ವಿದೇಶೀ ಕರೆನ್ಸಿ ಠೇವಣಿಗಳು (FCNR) 136.38 ಬಿಲಿಯನ್ ಡಾಲರ್​ನಷ್ಟು ಹರಿದುಬಂದಿವೆ. ಇಷ್ಟು ಡೆಪಾಸಿಟ್ ಸಿಗುತ್ತದೆ ಎಂದು ಆರ್​ಬಿಐ ಕೂಡ ನಿರೀಕ್ಷಿಸಿರಲಿಲ್ಲ. ಮಾರುಕಟ್ಟೆ ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ಸಂಘರ್ಷಗಳ ತೀವ್ರತೆ ತಗ್ಗಿದರೆ ರೂಪಾಯಿ ಮೌಲ್ಯ ಮತ್ತಷ್ಟು ಸ್ಥಿರತೆ ಕಾಣುವ ಸಾಧ್ಯತೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್