AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಗ್ರಾಹಕರ ಗಮನಕ್ಕೆ; ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಅರ್ಧದಷ್ಟು ಇಳಿಕೆ; ಅಕ್ಟೋಬರ್​ನಿಂದ ಹೊಸ ನಿಯಮ ಜಾರಿ

ಎಸ್​ಬಿಐನ ಸ್ಯಾಲರಿ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಎಟಿಎಂ ನಿಯಮಗಳಲ್ಲಿ ಬದಲಾವಣೆ ಆಗುತ್ತಿದೆ. ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ ಉಚಿತವಾಗಿ ಮಾಡಲಾಗುವ ಟ್ರಾನ್ಸಾಕ್ಷನ್​ನ ಮಿತಿ ಇಳಿಸಲಾಗುತ್ತಿದೆ. ಅಕ್ಟೋಬರ್ 1ರಿಂದ ಈ ಎಸ್​ಬಿಐ ಗ್ರಾಹಕರು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಉಚಿತವಾಗಿ 5 ಟ್ರಾನ್ಸಾಕ್ಷನ್ ಮಾಡಬಹುದು.

ಎಸ್​ಬಿಐ ಗ್ರಾಹಕರ ಗಮನಕ್ಕೆ; ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಅರ್ಧದಷ್ಟು ಇಳಿಕೆ; ಅಕ್ಟೋಬರ್​ನಿಂದ ಹೊಸ ನಿಯಮ ಜಾರಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2026 | 11:01 PM

Share

ನವದೆಹಲಿ, ಸೆಪ್ಟೆಂಬರ್ 2: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್​ನಲ್ಲಿ ಸ್ಯಾಲರಿ ಅಕೌಂಟ್ ಹೊಂದಿರುವ ಗ್ರಾಹಕರು ಮುಂದಿನ ದಿನಗಳಲ್ಲಿ ಬೇರೆ ಬ್ಯಾಂಕ್ ಎಟಿಎಂಗಳನ್ನು ಬಳಸುವಾಗ ಎಚ್ಚರ ವಹಿಸಬೇಕಾಗುತ್ತದೆ. ಒಂದು ತಿಂಗಳ ಉಚಿತ ಎಟಿಎಂ ವಹಿವಾಟುಗಳ ಮಿತಿಯನ್ನು ಅರ್ಧದಷ್ಟು ಕಡಿಮೆಗೊಳಿಸಿದೆ. ಈ ಹೊಸ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ. ಅಕ್ಟೋಬರ್ 1ರಿಂದ ಎಸ್​ಬಿಐ ಖಾತೆದಾರರು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ 10 ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಲು ಆಗುವುದಿಲ್ಲ. ಒಂದು ತಿಂಗಳಲ್ಲಿ ಐದಕ್ಕೆ ಮಾತ್ರವೇ ಅವಕಾಶ ಇರುತ್ತದೆ. ಈ ಮಿತಿ ಮೀರಿ ಮಾಡಲಾಗುವ ಪ್ರತಿಯೊಂದು ಟ್ರಾನ್ಸಾಕ್ಷನ್​ಗೂ ಶುಲ್ಕ ಅನ್ವಯ ಆಗುತ್ತದೆ.

ಈ ಐದು ಉಚಿತ ಟ್ರಾನ್ಸಾಕ್ಷನ್ ಮಿತಿಯಲ್ಲಿ ಹಣ ವಿತ್​ಡ್ರಾ ಮಾಡುವುದು, ಬ್ಯಾಲನ್ಸ್ ಪರಿಶೀಲಿಸುವುದು ಇತ್ಯಾದಿ ಟ್ರಾನ್ಸಾಕ್ಷನ್​ಗಳೂ ಒಳಗೊಳ್ಳುತ್ತವೆ. ಹೀಗಾಗಿ, ಬ್ಯಾಲನ್ಸ್ ಪರಿಶೀಲಿಸಲು ಸಾಧ್ಯವಾದರೆ ಯುಪಿಐ ಆ್ಯಪ್​ಗಳನ್ನು ಬಳಸಬಹುದು. ಈ ನಿಯಮವು ಎಸ್​ಬಿಐನ ಸ್ಯಾಲರಿ ಅಕೌಂಟ್​​ಗಳಿಗೆ ಅನ್ವಯ ಆಗುತ್ತದೆ. ಇತರ ಅಕೌಂಟ್​​ಗಳಿಗೆ ಈ ಹಿಂದಿನ ನಿಯಮಗಳೇ ಅನ್ವಯ ಆಗುತ್ತದೆ.

ಇದನ್ನೂ ಓದಿ: ಹತ್ತು ವರ್ಷದಲ್ಲಿ 5 ಕೋಟಿ ರೂ ಗುರಿ ಮುಟ್ಟಲು ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಲೆಕ್ಕಾಚಾರ

ಮಿತಿಮೀರುವ ಟ್ರಾನ್ಸಾಕ್ಷನ್​ಗೆ ಎಷ್ಟು ಶುಲ್ಕ?

ಬೇರೆ ಬ್ಯಾಂಕ್ ಎಟಿಎಂಗಳಲ್ಲಿ 5ಕ್ಕಿಂತ ಹೆಚ್ಚು ಟ್ರಾನ್ಸಾಕ್ಷನ್ ಮಾಡಿದರೆ, ಪ್ರತಿ ಹೆಚ್ಚುವರಿ ವಹಿವಾಟಿಗೂ ಶುಲ್ಕ ಇರುತ್ತದೆ. ಹಣ ವಿತ್​ಡ್ರಾ ಮಾಡಿದರೆ 23 ರೂ ಶುಲ್ಕ ವಸೂಲಿ ಮಾಡಲಾಗುತ್ತದೆ. ಜಿಎಸ್​ಟಿ ಸೇರಿಸಿದರೆ ಇನ್ನೂ ಹೆಚ್ಚಿರುತ್ತದೆ. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ನಾನ್-ಫೈನಾನ್ಷಿಯಲ್ ಟ್ರಾನ್ಸಾಕ್ಷನ್​ಗೆ 11 ರೂ + ಜಿಎಸ್​ಟಿ ಶುಲ್ಕ ಇರುತ್ತದೆ.

ಈ ಶುಲ್ಕವು, ನೀವು ಎಟಿಎಂನಲ್ಲಿ 500 ರೂ ವಿತ್​ಡ್ರಾ ಮಾಡಿದರೂ ಅಷ್ಟೇ, ಹತ್ತು ಸಾವಿರ ರೂ ವಿತ್ಡ್ರಾ ಮಾಡಿದರೂ ಅಷ್ಟೇ. ಆದರೆ, ಎಸ್​​ಬಿಐನ ಎಟಿಎಂಗಳಲ್ಲಿ ಟ್ರಾನ್ಸಾಕ್ಷನ್ ಮಾಡುವ ಮಿತಿಯಲ್ಲಿ ಬದಲಾವಣೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More