ಒಂದು ದೇಶದಿಂದ ಮತ್ತೊಂದಕ್ಕೆ ತೆರಳುವಾಗ ಆ ದೇಶದ ಕರೆನ್ಸಿ (Currency) ಇರುವುದು ಸಹ ಅಷ್ಟೇ ಮುಖ್ಯ. ಖರೀದಿ, ವ್ಯಾಸಂಗ, ಪ್ರವಾಸ, ಆಮದು- ರಫ್ತು ಏನೇ ಇರಲಿ ಕರೆನ್ಸಿ ಮೌಲ್ಯ ಮುಖ್ಯ ಪಾತ್ರ ವಹಿಸುತ್ತದೆ. ನಿಮಗೆ ಗೊತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ದೇಶದ ಕರೆನ್ಸಿಗೆ ಮಾನ್ಯತೆ ಇದೆ? ನಿಮಗೆ ಈ ಉತ್ತರ ಗೊತ್ತಿದ್ದಲ್ಲಿ, ಹೌದು, ಅದು ಅಮೆರಿಕದ ಡಾಲರ್. ಆದರೆ ಮೌಲ್ಯ ಅನ್ನೋ ವಿಚಾರಕ್ಕೆ ಬಂದಾಗ ಇತರ ದೇಶ, ವಲಯದ ಕರೆನ್ಸಿಗಳಿಗೆ ಬೆಲೆ ಜಾಸ್ತಿ. ಈಗ ಭಾರತದ ರೂಪಾಯಿಯಲ್ಲೇ ನೋಡುತ್ತಾ ಕೆಲವು ದೇಶಗಳ ಕರೆನ್ಸಿಗೆ ಎಷ್ಟು ನೀಡಬೇಕಾಗುತ್ತದೆ ಎಂಬುದನ್ನು ಗಮನಿಸೋಣ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿರುವವರು, ಕುತೂಹಲಕ್ಕಾದರೂ ವಿವಿಧ ಕರೆನ್ಸಿಗಳಿಗೆ ಭಾರತದ ರೂಪಾಯಿ ಮೌಲ್ಯ ಎಷ್ಟಿದೆ ಎಂದು ತಿಳಿದುಕೊಳ್ಳುವುದಕ್ಕೆ ಬಯಸುವವರಿಗೆ ಏಪ್ರಿಲ್ 18ನೇ ತಾರೀಕಿನ ಸೋಮವಾರದ ವಿನಿಮಯ ದರ (Exchange Rate) ತಿಳಿಸಲಾಗುತ್ತಿದೆ.
ಅಮೆರಿಕ ಯುಎಸ್ಡಿ 1ಕ್ಕೆ= 77.04700 ಭಾರತದ ರೂಪಾಯಿ
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ಗೆ= 100.24200 ಭಾರತದ ರೂಪಾಯಿ
ಯುರೋಗೆ= 83.01000 ಭಾರತದ ರೂಪಾಯಿ
ಚೀನಾದ ಯುವಾನ್= 12.01630 ಭಾರತದ ರೂಪಾಯಿ
ಜಪಾನ್ನ ಯೆನ್= 0.60741 (61 ಪೈಸೆ)
ಕುವೈತ್ ದಿನಾರ್= 251.28700 ಭಾರತದ ರೂಪಾಯಿ
ಇರಾನ್ನ ರಿಯಾಲ್= 0.00182 ಪೈಸೆ
ಬಾಂಗ್ಲಾದೇಶ್ ಟಾಕಾ= 0.88154 (88 ಪೈಸೆ)
ಶ್ರೀಲಂಕಾ ರೂಪಾಯಿ= 0.23653 (23 ಪೈಸೆ)
ಪಾಕಿಸ್ತಾನದ ರೂಪಾಯಿ= 0.42326 (42 ಪೈಸೆ)
ನೇಪಾಳದ ರೂಪಾಯಿ= 0.62500 (62 ಪೈಸೆ)
ರಷ್ಯಾದ ರೂಬೆಲ್= 0.92831 (93 ಪೈಸೆ)
ತೈಲ ಖರೀದಿ ಸೇರಿದಂತೆ ಸಾಮಾನ್ಯವಾಗಿ ಅಂತರರಾಷ್ಟ್ರೀಯ ವಹಿವಾಟುಗಳು ಮೊದಲಾದವುಗಳಿಗೆ ಅಮೆರಿಕನ್ ಡಾಲರ್ ಬಳಸಲಾಗುತ್ತದೆ. ಆದರೆ ಯುನೈಟೆಡ್ ಕಿಂಗ್ಡಮ್ನ ಪೌಂಡ್ ಸ್ಟರ್ಲಿಂಗ್, ಯುರೋಪ್ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್ ದಿನಾರ್ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.
(ಮಾಹಿತಿ ಮೂಲ: goodreturns.in)
ಇದನ್ನೂ ಓದಿ: Nepal Economic Crisis: ಶ್ರೀಲಂಕಾದ ಬೆನ್ನಲ್ಲೇ ನೇಪಾಳದಲ್ಲೂ ತೀವ್ರ ಆರ್ಥಿಕ ಬಿಕ್ಕಟ್ಟು; ತಜ್ಞರು ಏನಂತಾರೆ?