ಭಾರತದ ರಫ್ತು ಮತ್ತು ಆಮದು ಎರಡೂ ಏರಿಕೆ; ಟ್ರೇಡ್ ಡೆಫಿಸಿಟ್ ಹೆಚ್ಚಳಕ್ಕೆ ಕಾರಣವಾದ ಚಿನ್ನ

|

Updated on: May 15, 2024 | 6:59 PM

India Trade Deficit in 2024 April: 2024ರ ಏಪ್ರಿಲ್ ತಿಂಗಳಲ್ಲಿ ಭಾರತದ ಸರಕು ವಸ್ತುಗಳ ರಫ್ತು ಮತ್ತು ಆಮದಿನಲ್ಲಿ ಹೆಚ್ಚಳವಾಗಿದೆ. ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ ಕೂಡ ಹೆಚ್ಚಾಗಿದೆ. ರಫ್ತಿನಲ್ಲಿ ಅಲ್ಪ ಏರಿಕೆ ಆಗಿದೆ. ಆಮದಿನಲ್ಲಿ ಐದು ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿದೆ. ಚಿನ್ನದ ಆಮದು ಹೆಚ್ಚಾಗಿದ್ದು ಟ್ರೇಡ್​ ಡೆಫಿಸಿಟ್ ಹೆಚ್ಚಳಕ್ಕೆ ಕಾರಣವಾಗಿದೆ. ತೈಲ ಮತ್ತು ಚಿನ್ನ ಎರಡು ಪ್ರಮುಖವಾಗಿ ಭಾರತದ ಆಮದಿತ ವಸ್ತುಗಳಲ್ಲಿ ಸೇರಿವೆ.

ಭಾರತದ ರಫ್ತು ಮತ್ತು ಆಮದು ಎರಡೂ ಏರಿಕೆ; ಟ್ರೇಡ್ ಡೆಫಿಸಿಟ್ ಹೆಚ್ಚಳಕ್ಕೆ ಕಾರಣವಾದ ಚಿನ್ನ
ಆಮದು ರಫ್ತು
Follow us on

ನವದೆಹಲಿ, ಮೇ 15: ಭಾರತದ ಮರ್ಕಾಂಡೈಸ್ ಎಕ್ಸ್​ಪೋರ್ಟ್ ಅಥವಾ ಸರಕು ರಫ್ತು (Merchandise trading) 2024ರ ಏಪ್ರಿಲ್​ನಲ್ಲಿ ಹೆಚ್ಚಾಗಿದೆ. ಅದೇ ವೇಳೆ ಆಮದು ಪ್ರಮಾಣವೂ ಹೆಚ್ಚಾಗಿದೆ. ರಫ್ತು ಹೆಚ್ಚಳಕ್ಕಿಂತ ಆಮದು ಹೆಚ್ಚಳ ಹೆಚ್ಚಿರುವುದರಿಂದ ಟ್ರೇಡ್ ಡೆಫಿಸಿಟ್ ಕೂಡ ಹೆಚ್ಚಿದೆ. ಸರ್ಕಾರ ಇಂದು ಬುಧವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಭಾರತದಿಂದ ಆದ ಸರು ರಫ್ತು 34.99 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 34.62 ಬಿಲಿಯನ್ ಡಾಲರ್​ನಷ್ಟು ಸರಕು ರಫ್ತಾಗಿತ್ತು.

ಇನ್ನು, ಭಾರತ ಮಾಡಿಕೊಂಡ ಆಮದು 54.09 ಬಿಲಿಯನ್ ಡಾಲರ್ ಇದೆ. 2023ರ ಏಪ್ರಿಲ್​ನಲ್ಲಿ 49.06 ಬಿಲಿಯನ್ ಡಾಲರ್​ನಷ್ಟು ಆಮದು ಇತ್ತು. ಒಂದು ವರ್ಷದ ಅಂತದಲ್ಲಿ ಮಾಸಿಕ ಆಮದು ಪ್ರಮಾಣದಲ್ಲಿ 5 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಆಮದು ಮತ್ತು ರಫ್ತು ನಡುವಿನ ಅಂತರವಾಗಿರುವ ಟ್ರೇಡ್ ಡೆಫಿಸಿಟ್ 19.11 ಬಿಲಿಯನ್ ಡಾಲರ್ ಆಗಿದೆ. ಇದು ವಿವಿಧ ಆರ್ಥಿಕ ತಜ್ಞರು ಮಾಡಿದ ಅಂದಾಜಿಗಿಂತಲೂ ತುಸು ಹೆಚ್ಚಿದೆ. ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಸರಾಸರಿಯಾಗಿ ಟ್ರೇಡ್ ಡೆಫಿಸಿಟ್ 17.23 ಬಿಲಿಯನ್ ಡಾಲರ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಭಾರತದಲ್ಲಿ ಆಮದು ಪ್ರಮಾಣ ಐದು ಬಿಲಿಯನ್ ಡಾಲರ್​ನಷ್ಟು ಹೆಚ್ಚಲು ಪ್ಮರಮುಖವಾಗಿ ಕಾರಣವಾಗಿದ್ದು ಚಿನ್ನದ ಆಮದು ಹೆಚ್ಚಳ. ಮಾರ್ಚ್ ತಿಂಗಳಲ್ಲಿ 1.53 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಏಪ್ರಿಲ್​ನಲ್ಲಿ ಎರಡು ಪಟ್ಟು ಹೆಚ್ಚು, ಅಂದರೆ 3.11 ಬಿಲಿಯನ್ ಡಾಲರ್​ನಷ್ಟು ಚಿನ್ನದ ಆಮದು ಆಗಿದೆ. ಆದರೆ, ಈ ಪರಿ ಚಿನ್ನದ ಆಮದು ಹೆಚ್ಚಳ ಈಗಿನ ಪರಿಸ್ಥಿತಿಯಲ್ಲಿ ಅಸಹಜವೇನಲ್ಲ ಎಂಬುದು ಆರ್ಥಿಕ ತಜ್ಞರ ಅನಿಸಿಕೆ. ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಿರುವುದರಿಂದ ಚಿನ್ನದ ಆಮದು ಮೌಲ್ಯವೂ ಹೆಚ್ಚಿದೆ. ಆರ್​ಬಿಐ ಕೂಡ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಾ ಬಂದಿದೆ.

ಇದನ್ನೂ ಓದಿ: ಒಂದೇ ರೈಲ್ವೆ ಟಿಕೆಟ್ ಹಲವು ಸೇವೆ; ಊಟ, ಚಿಕಿತ್ಸೆ, ವಿಶ್ರಾಂತಿ ಕೊಠಡಿ, ಡಾರ್ಮಿಟರಿ, ಲಾಕರ್ ರೂಂ ಸೌಲಭ್ಯ

ಆದರೆ, ಭಾರತದ ಸರಕು ಆಮದಿನಲ್ಲಿ ಪ್ರಮುಖವಾಗಿರುವ ತೈಲ ಆಮದು ಮಾರ್ಚ್​ನದಕ್ಕಿಂತ ಏಪ್ರಿಲ್​ನಲ್ಲಿ ತುಸು ಕಡಿಮೆ ಆಗಿದೆ. ಮಾರ್ಚ್ ತಿಂಗಳಲ್ಲಿ 17.23 ಬಿಲಿಯನ್ ಡಾಲರ್ ಮೊತ್ತದ ತೈಲ ಆಮದಾಗಿತ್ತು. ಏಪ್ರಿಲ್​ನಲ್ಲಿ ಅದು 16.46 ಬಿಲಿಯನ್ ಡಾಲರ್​ಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ