ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ; ಇದು ನಿರ್ಮಿಸುತ್ತಿರೋದು ಭಾರತೀಯ ಕಂಪನಿ

ಅಮೆರಿಕದ ಐಯಾವಾ ರಾಜ್ಯದಲ್ಲಿ ಬೃಹತ್ ಸ್ಟೀಲ್ ಫ್ಯಾಕ್ಟರಿಯೊಂದು ಸ್ಥಾಪನೆಯಾಗಲಿದೆ. ಅಲ್ಲಿಯ ಮಿನ್ನೆಸೊಟಾದಲ್ಲಿ ಕಬ್ಬಿಣ ಅದಿರಿನ ಮೈನಿಂಗ್ ಕೂಡ ಶುರುವಾಗಲಿದೆ. ಕಳೆದ 50 ವರ್ಷದಲ್ಲಿ ಅಮೆರಿಕದಲ್ಲಿ ಕಬ್ಬಿಣ ಅದಿರಿನ ಮೈನಿಂಗ್ ನಡೆಯಲಿರುವುದು ಇದೇ ಮೊದಲು. ಈ ಮೈನಿಂಗ್ ಮತ್ತು ಸ್ಟೀಲ್ ಫ್ಯಾಕ್ಟರಿ ಸ್ಥಾಪಿಸಲಿರುವುದು ಭಾರತದ ಎಸ್ಸಾರ್ ಗ್ರೂಪ್ ಸಂಸ್ಥೆ.

ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ; ಇದು ನಿರ್ಮಿಸುತ್ತಿರೋದು ಭಾರತೀಯ ಕಂಪನಿ
ಡೊನಾಲ್ಡ್ ಟ್ರಂಪ್
Image Credit source: AP

Updated on: Sep 29, 2026 | 11:58 AM

ವಾಷಿಂಗ್ಟನ್, ಸೆಪ್ಟೆಂಬರ್ 29: ಭಾರತದ ದೊಡ್ಡ ಉದ್ಯಮ ಸಂಸ್ಥೆಯಾದ ಎಸ್ಸಾರ್ ಗ್ರೂಪ್ (Essar Group) ಅಮೆರಿಕದಲ್ಲಿ ಬೃಹತ್ತಾದ ಉಕ್ಕಿನ ಫ್ಯಾಕ್ಟರಿ ನಿರ್ಮಿಸಲಿದೆ. ಅಮೆರಿಕದಲ್ಲಿರುವ ತನ್ನ ಅಂಗಸಂಸ್ಥೆಯಾದ ಮೆಸಾಬಿ ಮೆಟಾಲಿಕ್ಸ್ (Mesabi Metallics) ಮೂಲಕ ಎಸ್ಸಾರ್ ಗ್ರೂಪ್ ಈ ಘಟಕವನ್ನು ಸ್ಥಾಪಿಸಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದನ್ನು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ ಎಂದು ಬಣ್ಣಿಸಿದ್ದಾರೆ. ಅಮೆರಿಕದ ಮಧ್ಯಭಾಗದಲ್ಲಿರುವ ಐಯಾವಾ (Iowa) ರಾಜ್ಯದಲ್ಲಿ ಇದು ನೆಲೆಗೊಳ್ಳಲಿದೆ.

ಡೊನಾಲ್ಡ್ ಟ್ರಂಪ್ ಈ ಪ್ರಾಜೆಕ್ಟ್ ಅನ್ನು ಇವತ್ತು ಘೋಷಿಸಿದ್ದಾರೆ. ಈ ಬೃಹತ್ ಘಟಕವು ಒಂದು ವರ್ಷದಲ್ಲಿ 10 ಮಿಲಿಯನ್ ಟನ್​ಗಳಷ್ಟು ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ನಿರೀಕ್ಷೆ ಇದೆ. ಹಾಗೆಯೇ, ಇದನ್ನು ನಿರ್ಮಿಸುವ ಸಂದರ್ಭದಲ್ಲಿ 6,000 ಮಂದಿಗೆ ಉದ್ಯೋಗ ಸಿಗಲಿದೆ. ಮೈನಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಖಾಯಂ ಆದ 2,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು ಗಡುವುಗಳ ವಿಸ್ತರಣೆ

‘ಐಯಾವಾ ನಗರದಲ್ಲಿ ಮೆಸಾಬಿ ಮೆಟಾಲಿಕ್ಸ್ ಕಂಪನಿ ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಪ್ಲಾಂಟ್ ನಿರ್ಮಿಸಲಿದೆ. ಅದು ವಿಶ್ವದಲ್ಲೇ ಅತಿದೊಡ್ಡ ಉಕ್ಕಿನ ಫ್ಯಾಕ್ಟರಿಗಳಲ್ಲಿ ಒಂದೆನಿಸಲಿದೆ’ ಎಂದು ಟ್ರಂಪ್ ಅವರು ತಮ್ಮ ಗೃಹಕಚೇರಿಯಾದ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್ಸಾರ್ ಗ್ರೂಪ್ ಭಾರತೀಯರದ್ದು…

ಮೆಸಾಬಿ ಮೆಟಾಲಿಕ್ಸ್​ನ ಮಾತೃ ಸಂಸ್ಥೆ ಎಸ್ಸಾರ್ ಗ್ರೂಪ್. ಶಶಿ ರೂಯಾ ಮತ್ತು ರವಿ ರೂಯಾ ಅವರು ಜಂಟಿಯಾಗಿ 1969ರಲ್ಲಿ ಸ್ಥಾಪಿಸಿದ ಸಂಸ್ಥೆ ಇದು. ತೈಲ, ಅನಿಲ, ಮೂಲಸೌಕರ್ಯ, ಲಾಜಿಸ್ಟಿಕ್ಸ್, ಮೈನಿಂಗ್, ಟೆಕ್ನಾಲಜಿ ಇತ್ಯಾದಿ ಬಹಳ ಪ್ರಮುಖ ಕ್ಷೇತ್ರಗಳಲ್ಲಿ ಇದು ಪ್ರಬಲ ಬ್ಯುಸಿನೆಸ್ ಹೊಂದಿದೆ. ಹಲವು ದೇಶಗಳಲ್ಲಿ ಇದರ ಅಂಗಸಂಸ್ಥೆಗಳು ಚಾಚಿಕೊಂಡಿವೆ.

ಇದನ್ನೂ ಓದಿ: ಮನೆ ಓನರ್ ಸೆಕ್ಯೂರಿಟಿ ಡೆಪಾಸಿಟ್ ಹಣ ಕೊಡ್ತಾ ಇಲ್ವಾ? ಹಾಗಾದ್ರೆ ನೀವು ಈ ಸಲಹೆ ಪಾಲಿಸಿ

2007ರಲ್ಲಿ ಅಮೆರಿಕದ ಮಿನ್ನೆಸೊಟಾ ರಾಜ್ಯದಲ್ಲಿ ಮಿನ್ನೆಸೊಟಾ ಸ್ಟೀಲ್ ಕಂಪನಿಯನ್ನು ಖರೀದಿಸಿತ್ತು. ಈಗ ಆ ರಾಜ್ಯದಲ್ಲಿ ಕಬ್ಬಿಣ ಅದಿರು ಸಂಪನ್ಮೂಲ ಬಹಳಷ್ಟಿದೆ. ಹೊಸ ಗಣಿಗಾರಿಕೆ ಮೂಲಕ ಅದಿರನ್ನು ಹೊರತೆಗೆದು, ಐಯಾವಾದ ಉಕ್ಕಿನ ಘಟಕದಲ್ಲಿ ಸ್ಟೀಲ್ ತಯಾರಿಕೆಗೆ ಬಳಸಲಾಗುತ್ತಿದೆ. ಮೈನಿಂಗ್​ನಿಂದ ಹಿಡಿದು ಪ್ರತಿಯೊಂದು ಕೂಡ ಅಮೆರಿಕದಲ್ಲೇ ತಯಾರಾಗುವುದರಿಂದ ಟ್ರಂಪ್ ಸಂತಸಗೊಂಡಿದ್ದಾರೆ. ಕಳೆದ 50 ವರ್ಷದಲ್ಲೇ ಅಮೆರಿಕದಲ್ಲಿ ಮೊದಲ ಕಬ್ಬಿಣ ಅದಿರಿನ ಗಣಿಗಾರಿಕೆ ಸ್ಥಾಪನೆಯಾಗಲಿರುವುದು ವಿಶೇಷ. 2030ರ ಆಸುಪಾಸಿನ ವೇಳೆಗೆ ಐಯಾವಾ ನಗರದ ಉಕ್ಕಿನ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us