AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಓನರ್ ಸೆಕ್ಯೂರಿಟಿ ಡೆಪಾಸಿಟ್ ಹಣ ಕೊಡ್ತಾ ಇಲ್ವಾ? ಹಾಗಾದ್ರೆ ನೀವು ಈ ಸಲಹೆ ಪಾಲಿಸಿ

ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಮನೆ ಮಾಲೀಕರು ಒಪ್ಪಂದ ಮುಗಿದ ನಂತರ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಸಾಮಾನ್ಯವಾಗಿ ಹಿಂದಿರುಗಿಸಲಾಗುತ್ತದೆ. ಕೆಲವೊಮ್ಮೆ ಮನೆ ಮಾಲೀಕರು ಭದ್ರತಾ ಠೇವಣಿಯನ್ನು ಹಿಂದಿರುಗಿಸಲು ನಿರಾಕರಿಸುತ್ತಾರೆ. ಆದರೆ ಪೇಂಟಿಂಗ್‌, ನಿಯಮಿತ ನಿರ್ವಹಣೆ ಅಥವಾ ರಿಪೇರಿಗಾಗಿ ಭದ್ರತಾ ಠೇವಣಿಯನ್ನು ಕಡಿತಗೊಳಿಸಲಾಗುತ್ತದೆ. ಆದರೆ ಈ ಬಾಡಿಗೆದಾರರು ಈ ಕೆಲವು ಸಲಹೆಗಳ ಮೂಲಕ ತಾವು ಡೆಪಾಸಿಟ್ ಇಟ್ಟ ಮೊತ್ತವನ್ನು ಸುರಕ್ಷಿತವಾಗಿ ಮರಳಿ ಪಡೆಯಬಹುದಾಗಿದೆ.

ಮನೆ ಓನರ್ ಸೆಕ್ಯೂರಿಟಿ ಡೆಪಾಸಿಟ್ ಹಣ ಕೊಡ್ತಾ ಇಲ್ವಾ? ಹಾಗಾದ್ರೆ ನೀವು ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರImage Credit source: DEV IMAGES/Moment/Getty Images
ಸಾಯಿನಂದಾ
|

Updated on: Sep 28, 2026 | 6:52 PM

Share

ಮುಖ್ಯಾಂಶಗಳು

  • ಮನೆಮಾಲೀಕರು ಭದ್ರತಾ ಠೇವಣಿ ರೂಪದಲ್ಲಿ ಇಂತಿಷ್ಟು ಹಣವನ್ನು ಪಡೆಯುತ್ತಾರೆ
  • ಮನೆ ಮಾಲೀಕರು ಡೆಪಾಸಿಟ್ ಹಣವನ್ನು ಹಿಂತಿರುಗಿಸದಿದ್ದರೆ ಈ ಸಲಹೆ ಪಾಲಿಸುವುದು ಉತ್ತಮ
  • ಬಾಡಿಗೆ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಮುನ್ನ ಪುರಾವೆಗಳನ್ನು ಇಟ್ಟುಕೊಂಡಿರಬೇಕು

ಬಾಡಿಗೆ ಮನೆ (Rented house) ಅಂದ ಮೇಲೆ ಮನೆಮಾಲೀಕರು ಭದ್ರತಾ ಠೇವಣಿ ರೂಪದಲ್ಲಿ ಇಂತಿಷ್ಟು ಹಣವನ್ನು ಪಡೆಯುತ್ತಾರೆ. ಆದರೆ ಬಾಡಿಗೆ ಮನೆ ಬಿಡುವಾಗ ಆ ಹಣವನ್ನು ಬಾಡಿಗೆದಾರರು ವಾಪಸ್ಸು ಪಡೆಯುವುದು ಸಹಜ. ಈ ಭದ್ರತಾ ಠೇವಣಿ ವಿಚಾರವಾಗಿ ಮನೆ ಮಾಲೀಕರು ಹಾಗೂ ಬಾಡಿಗೆದಾರರ ವಿಚಾರವಾಗಿ ಜಗಳಗಳು ನಡೆಯುತ್ತವೆ. ಮನೆ ಮಾಲೀಕರು ಡೆಪಾಸಿಟ್ ಹಣವನ್ನು ಹಿಂತಿರುಗಿಸದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನೀವು ನಗದು ರೂಪದಲ್ಲಿ ಹಣ ಪಾವತಿಸಿದರೆ, ನಿಮ್ಮ ಬಳಿ ಯಾವುದೇ ಪುರಾವೆಗಳಿರಲ್ಲ. ಭದ್ರತಾ ಠೇವಣಿ, ಮಾಸಿಕ ಬಾಡಿಗೆ ಮತ್ತು ಬಾಡಿಗೆ ಹೆಚ್ಚಳದ ಬಗ್ಗೆ ಮುಂಚಿತವಾಗಿ ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತ. ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಸಮಸ್ಯೆಗಳಾದಂತೆ ತಡೆಯುತ್ತದೆ.

ಭದ್ರತಾ ಠೇವಣಿಯನ್ನು ಹಿಂತಿರುಗಿಸದಿದ್ದರೆ ಏನು ಮಾಡ್ಬೇಕು?

  • ಮನೆ ಮಾಲೀಕರು ಭದ್ರತಾ ಠೇವಣಿಯನ್ನು ಹಿಂತಿರುಗಿಸದಿದ್ದರೆ, ಬಾಡಿಗೆದಾರರು ದೂರು ದಾಖಲಿಸಿ.
  • ಮೊದಲನೆಯದಾಗಿ, ವಕೀಲರ ಮೂಲಕ ಲೀಗಲ್ ನೋಟೀಸ್ ಕಳುಹಿಸಿ.
  • ಮನೆ ಓನರ್‌ ನ್ಯಾಯಾಲಯಕ್ಕೆ ಹಾಜರಾಗುವ ಬದಲು ಹಣವನ್ನು ಹಿಂದಿರುಗಿಸಲು ಮುಂದಾಗುತ್ತಾರೆ.
  • ಒಂದು ವೇಳೆ ಠೇವಣಿ ಹಣವನ್ನು ನೀಡದಿದ್ದರೆ ನೀವು ನಿಮ್ಮ ನಗರದಲ್ಲಿನ ಬಾಡಿಗೆ ಪ್ರಾಧಿಕಾರ ಅಥವಾ ಬಾಡಿಗೆ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.
  • 20 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ದೂರು ಸಲ್ಲಿಸಬಹುದು.

ಇದನ್ನೂ ಓದಿ: ಪಿಎಂ ಆವಾಸ್ ಯೋಜನೆ; ಸ್ವಂತ ಸೂರು ಇಲ್ಲದವರಿಗೆ ಒಂದು ಆಶಾಕಿರಣ; ಸರ್ಕಾರದ ನೆರವು ಬಳಸಿ

ಬಾಡಿಗೆದಾರರೇ ಈ ವಿಚಾರ ನಿಮಗೆ ತಿಳಿದಿರಲಿ

ಮನೆ ಮಾಲೀಕರು ಭದ್ರತಾ ಠೇವಣಿಯನ್ನು ಹಿಂತಿರುಗಿಸದಿದ್ದು, ಬಾಡಿಗೆದಾರ ಗ್ರಾಹಕ ವೇದಿಕೆ ಅಥವಾ ಬಾಡಿಗೆ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಇಂತಹ ಸಂದರ್ಭಗಳು ಎದುರಾದರೆ ನೀವು ದಾಖಲೆ ಪುರಾವೆಗಳನ್ನು ಇಟ್ಟುಕೊಂಡಿರುವುದು ಬಹಳ ಮುಖ್ಯ. ಹೀಗಾಗಿ ಬಾಡಿಗೆ ಮನೆ ಪ್ರವೇಶಿಸುವ ಮೊದಲು ಫೋಟೋಗಳನ್ನು ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಮೌಖಿಕ ಒಪ್ಪಂದ ಮಾಡಿಕೊಳ್ಳಬೇಡಿ. ಕಡ್ಡಾಯವಾಗಿ ನಿಯಮಗಳು, ಡೆಪಾಸಿಟ್ ಮೊತ್ತ ಮತ್ತು ಅದನ್ನು ಮರಳಿ ನೀಡುವ ಸಮಯವನ್ನು ಒಳಗೊಂಡ ಲಿಖಿತ ಒಪ್ಪಂದಕ್ಕೆ ಸಹಿ ಮಾಡಿ. ಬಾಡಿಗೆ ಪಾವತಿ ಬಿಲ್ ಸೇರಿದಂತೆ ಇನ್ನಿತ್ತರ ದಾಖಲೆಗಳು ನಿಮ್ಮ ಬಳಿ ಇರಲಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More