ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ

Indigo CEO Pieter Elbers resigns: ಕೆಲ ತಿಂಗಳ ಹಿಂದೆ ವಿಮಾನ ಪ್ರಯಾಣಿಕರನ್ನು ಅಲ್ಲೋಲಕಲ್ಲೋಲಗೊಳಿಸಿದ್ದ ಇಂಡಿಗೋ ಸಂಸ್ಥೆಯಿಂದ ಸಿಇಒ ನಿರ್ಗಮಿಸಿದ್ದಾರೆ. ಪೀಟರ್ ಎಲ್ಬರ್ಸ್ ರಾಜೀನಾಮೆ ಕೊಟ್ಟಿರುವುದಾಗಿ ಇಂಡಿಗೋ ಪ್ರಕಟಿಸಿದೆ. ಇಂಡಿಗೋದ ಸಹ-ಸಂಸ್ಥಾಪಕರಾದ ರಾಹುಲ್ ಭಾಟಿಯಾ ಅವರು ಹಂಗಾಮಿಯಾಗಿ ಸಿಇಒ ಸ್ಥಾನ ನಿಭಾಯಿಸಲಿದ್ದಾರೆ.

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ
ಪೀಟರ್ ಎಲ್ಬರ್ಸ್

Updated on: Mar 10, 2026 | 7:21 PM

ನವದೆಹಲಿ, ಮಾರ್ಚ್ 10: ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ (Pieter Elbers) ರಾಜೀನಾಮೆ ನೀಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಪೈಲಟ್​ಗಳಿಲ್ಲದೇ ಹಲವಾರು ಫ್ಲೈಟ್​​ಗಳು ಸ್ಥಗಿತಗೊಂಡ ಬಳಿಕ ಸಿಇಒ ತಲೆದಂಡವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಅಂತೆಯೇ ಪೀಟರ್ಸ್ ರಾಜೀನಾಮೆ ಕೊಟ್ಟಿದ್ದಾರೆ. ಇಂದು ಮಂಗಳವಾರ ಅವರ ರಾಜೀನಾಮೆ ನಿರ್ಧಾರವನ್ನು ಇಂಡಿಗೋ ಸಂಸ್ಥೆ ಪ್ರಕಟಿಸಿದೆ. ಸಂಸ್ಥೆಯ ನಿರ್ವಾಹಕ ನಿರ್ದೇಶಕ ರಾಹುಲ್ ಭಾಟಿಯಾ ಅವರು ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಇಂಡಿಗೋದ ಮಾಲಕಸಂಸ್ಥೆಯಾದ ಇಂಟರ್​ಗ್ಲೋಬ್ ಏವಿಯೇಶನ್​ನ ಪ್ರೊಮೋಟರ್ ಆಗಿರುವ ರಾಹುಲ್ ಭಾಟಿಯಾ ಅವರು ಹೊಸ ಸಿಇಒ ಬರುವವರೆಗೂ ಸಂಸ್ಥೆಯ ಮುಖ್ಯ ಎಕ್ಸಿಕ್ಯೂಟಿವ್ ಸ್ಥಾನವನ್ನು ನಿಭಾಯಿಸಲಿದ್ದಾರೆ

ಇದನ್ನೂ ಓದಿ: ನಾವ್ಯಾಕೆ ತೈಲ ನೀಡಬೇಕು? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ

ಇಂಡಿಗೋ ಬಿಕ್ಕಟ್ಟಿಗೆ ಸಿಲುಕಿದ್ದು ಹೇಗೆ?

ಸರ್ಕಾರವು ಫ್ಲೈಟ್ ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿಯ ಫ್ಲೈಟ್ ಕರ್ತವ್ಯ ಸಮಯ ಪರಿಮಿತಿ ನಿಯಮಗಳನ್ನು ರೂಪಿಸಿದೆ. ಇದು ಜಾರಿ ಮಾಡಲು ಸಾಕಷ್ಟು ಗಡುವು ಕೊಡಲಾಗಿತ್ತು. ಅಂತಿಮ ಗಡುವು ಮುಗಿಯುತ್ತಿದ್ದರಿಂದ ಹೊಸ ನಿಯಮಗಳನ್ನು ಇಂಡಿಗೋ ಪಾಲಿಸಲೇಬೇಕಾಯಿತು. ಪೈಲಟ್​ಗಳ ಕರ್ತವ್ಯ ಸಮಯವನ್ನು ಸೀಮಿತಗೊಳಿಸಬೇಕು. ನಿರ್ದಿಷ್ಟ ಅವಧಿ ವಿಶ್​ರಾಂತಿಗೆ ಅವಕಾಶ ಕೊಡಬೇಕು ಇತ್ಯಾದಿ ನಿಯಮಗಳಿವೆ.

ನವೆಂಬರ್​ನಲ್ಲಿ ಹೊಸ ಫ್ಲೈಟ್ ಡ್ಯೂಟಿ ನಿಯಮಗಳು ಜಾರಿಗೆ ಬಂದಿದ್ದು. ಇದನ್ನು ಪಾಲಿಸಬೇಕೆಂದರೆ ಪೈಲಟ್​ಗಳ ಸಂಖ್ಯೆ ಹೆಚ್ಚಿಸಬೇಕಿತ್ತು. ಇಂಡಿಗೋ ಆ ಕೆಲಸ ಮಾಡಲಿಲ್ಲ. ಹೀಗಾಗಿ, ಅನೇಕ ಇಂಡಿಗೋ ಫ್ಲೈಟ್​ಗಳಿಗೆ ಪೈಲಟ್​ಗಳೇ ಇಲ್ಲವಾದರು. ಹೀಗಾಗಿ, ಹಲವು ಫ್ಲೈಟ್​ಗಳನ್ನು ನಿಲ್ಲಸಬೇಕಾಯಿತು. ವಿಮಾನಗಳು ನಿಲುಗಡೆಗೊಂಡವು. ಬಹಳ ಜನರ ಟಿಕೆಟ್​ಗಳು ಕ್ಯಾನ್ಸಲ್ ಆಯಿತು. ಇದರಿಂದ ಕೆಲ ದಿನಗಳ ಕಾಲ ಬಿಕ್ಕಟ್ಟು ಉದ್ಭವವಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us