AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ

ಜಿಯೋಫೋನ್ ನೆಕ್ಸ್ಟ್ ಕೈಗೆಟುಕುವ ಸ್ಮಾರ್ಟ್​ಫೋನ್​ ಬಿಡುಗಡೆ ದೀಪಾವಳಿಗೆ ಮುಂದೂಡಲಾಗಿದೆ ಎಂದು ಗೂಗಲ್- ಜಿಯೋದಿಂದ ತಿಳಿಸಲಾಗಿದೆ.

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 10, 2021 | 1:29 PM

Share

ಜಿಯೋ ಮತ್ತು ಗೂಗಲ್​ನಿಂದ ಸೆಪ್ಟೆಂಬರ್​ 10ನೇ ತಾರೀಕಿನಿಂದ ಹೇಳಿರುವ ಪ್ರಕಾರ, ಜಿಯೋಫೋನ್​ ನೆಕ್ಸ್ಟ್ ಅನ್ನು ದೀಪಾವಳಿ ಹಬ್ಬದ ಸಂದರ್ಭಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಕೈಗೆಟುಕುವ ಬೆಲೆಯ ಸ್ಮಾರ್ಟ್​ಫೋನ್ ಆರಂಭದಲ್ಲಿ ಗಣೇಶ ಚತುರ್ಥಿಗೆ ಬಿಡುಗಡೆ ಆಗಬೇಕಿತ್ತು. ಜಿಯೋ ಮತ್ತು ಗೂಗಲ್ ಹೇಳಿರುವಂತೆ, ಕಂಪೆನಿಯು ಸ್ಮಾರ್ಟ್​ಫೋನ್ ಬಿಡುಗಡೆ ವಿಚಾರವಾಗಿ “ಸಾಕಷ್ಟು ಪ್ರಗತಿ” ಆಗಿದೆ. “ಎರಡೂ ಕಂಪೆನಿಗಳು ಜಿಯೋಫೋನ್​ ನೆಕ್ಸ್ಟ್​ ಅನ್ನು ಇನ್ನಷ್ಟು ಸುಧಾರಣೆ ತರುವುದಕ್ಕೆ ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ಪರೀಕ್ಷೆ ಆರಂಭಿಸಿವೆ ಮತ್ತು ದೀಪಾವಳಿ ಹಬ್ಬದ ಹೊತ್ತಿಗೆ ವ್ಯಾಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಕೆಲಸ ಮಾಡಲಾಗುತ್ತಿದೆ. ಈಗಿನ ಹೆಚ್ಚುವರಿ ಸಮಯವು ಸದ್ಯಕ್ಕೆ ಈ ವಲಯದಲ್ಲಿ ಕಾಣಿಸಿಕೊಂಡಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯಿಂದ ಹೊರಬರುವುದಕ್ಕೆ ಸಹಾಯ ಮಾಡುತ್ತದೆ,” ಎಂದು ಜಿಯೋ ಮತ್ತು ಗೂಗಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಜಿಯೋಫೋನ್ ನೆಕ್ಸ್ಟ್ ಆಂಡ್ರಾಯಿಡ್​ ಆಪರೇಟಿಂಗ್ ಸಿಸ್ಟಮ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಗೂಗಲ್ ಅಸಿಸ್ಟೆಂಟ್, ಆಟೋಮೆಟಿಕ್ ಜೋರಾದ-ಓದು, ಆನ್​ಸ್ಕ್ರೀನ್ ಟೆಕ್ಸ್ಟ್​​ಗೆ ಭಾಷಾನುವಾದ, ಸ್ಮಾರ್ಟ್​ ಕ್ಯಾಮೆರಾ ಜತೆಗೆ ಇಂಡಿಯಾ ಸೆಂಟ್ರಿಕ್ ಫಿಲ್ಟರ್ಸ್​ಗಳನ್ನು ಒಳಗೊಂಡಿದೆ.

ಬಳಕೆದಾರರು ಈಚೆಗಿನ ಕ್ರಿಕೆಟ್​ ಸ್ಕೋರ್​ಗಳು ಮತ್ತು ಹವಾಮಾನ ಅಪ್​ಡೇಟ್ಸ್​ ಪರಿಶೀಲಿಸಬಹುದು. ಗೂಗಲ್ ಅಸಿಸ್ಟೆಂಟ್​​ಗೆ ಜಿಯೋ ಸಾವನ್​ನಲ್ಲಿ ಸಂಗೀತ ಪ್ಲೇ ಮಾಡುವಂತೆ ಅಥವಾ ಮೈ ಜಿಯೋದಲ್ಲಿ ಬ್ಯಾಲೆನ್ಸ್ ಪರಿಶೀಲಿಸುವಂತೆ ಕೇಳಬಹುದು. ಅಂದಹಾಗೆ 4G ಸ್ಮಾರ್ಟ್​ಫೋನ್ ದರ ಇನ್ನೂ ಬಹಿರಂಗ ಮಾಡಿಲ್ಲ.

ಇದನ್ನೂ ಓದಿ: ರೂ. 4,000 ದೊಳಗೆ ಸ್ಮಾರ್ಟ್ ಪೋನ್ ಬೇಕೇ? ಸ್ವಲ್ಪ ದಿನ ಕಾಯಿರಿ, ಮುಕೇಶ್ ಅಂಬಾನಿ ಅದನ್ನು ನೀಡಲಿದ್ದಾರೆ!

(JioPhone Next Affordable Smart Phone Release Postponed To Deepavali Here Is The Details)

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​