ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರದ ಯತ್ನ: ತೆರಿಗೆ ರಿಯಾಯ್ತಿ ಘೋಷಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಈ ವಿನಾಯ್ತಿ ಆದೇಶದಿಂದ ಹೊರಗಿಡಲಾಗಿದೆ.
ಬೆಂಗಳೂರು: ಕೊರೊನಾ ಪಿಡುಗಿನಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ 2021-22ನೇ ಹಣಕಾಸು ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಮನರಂಜನಾ ಪಾರ್ಕ್ಗಳ ಆಸ್ತಿ ತೆರಿಗೆಯಲ್ಲಿ ಅರ್ಧದಷ್ಟು, ಅಂದರೆ ಶೇ 50ರಷ್ಟು ಷರತ್ತುಬದ್ಧ ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಈ ವಿನಾಯ್ತಿ ಆದೇಶದಿಂದ ಹೊರಗಿಡಲಾಗಿದೆ.
ಲಾಕ್‌ಡೌನ್‌ನಿಂದ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ ಕೊರೊನಾ ಮಾರಿಯ ಅವಕೃಪೆಯಿಂದಾಗಿ ಇಡೀ ದೇಶ ಲಾಕ್‌ಡೌನ್ ಕ್ರಮಕ್ಕೆ ಒಳಗಾದ ಪರಿಣಾಮ ಬರೋಬ್ಬರಿ 5.4 ಲಕ್ಷ ಕೋಟಿ (Rs. 5.4 trillion) ರೂಪಾಯಿ ನಷ್ಟವುಂಟಾಗಿದೆ. ಇದು ಮೊದಲ ಅಲೆಯ ಲೆಕ್ಕವಲ್ಲ. ಕೊರೊನಾ 2ನೇ ಅಲೆಯಿಂದ ದೇಶದಲ್ಲಿ ಲಾಕ್‌ಡೌನ್ ಬೀಗ ಬಿದ್ದಿದ್ದಕ್ಕೆ ಅಂದಾಜು ಐದೂವರೆ ಲಕ್ಷ ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಬರ್ಕಲೇ ಸಂಸ್ಥೆ ಅಂದಾಜು ಮಾಡಿದೆ.
ಇನ್ನು, 2ನೇ ಅಲೆಯಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳಗೊಂಡಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಪರಿಣಾಮ 2.7 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ನಷ್ಟದಿಂದ ದೇಶದಲ್ಲಿ ಜನರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಉದ್ಯೋಗ ನಷ್ಟದಿಂದ ದೇಶದ ಆರ್ಥಿಕತೆಗೂ ಹೊಡೆತ ಬಿದ್ದಿದೆ.
ಈ ಮಧ್ಯೆ, ಆರ್ಥಿಕತೆ ಚೇತರಿಕೆಗೆ ಯಾವ ಪ್ಯಾಕೇಜ್ ಕೂಡ ಘೋಷಿಸಿಲ್ಲ. ಆರ್ಥಿಕತೆ ಚೇತರಿಕೆಗೆ ಜನರ ಕೈಗೆ ದುಡ್ಡು ಸಿಗುವಂತಾಗಬೇಕು. ಜನರ ಕೈಗೆ ನೇರವಾಗಿ ಹಣ ಸಿಗುವಂತಾಗಬೇಕೆಂದು ಬರ್ಕಲೇ ಸಂಸ್ಥೆ ಸಲಹೆ ಮಾಡಿದೆ. MSME ಕೈಗಾರಿಕೆಗಳ ಪುನಃಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಅತ್ಯಗತ್ಯವಾಗಿದೆ ಎಂದು ಆರ್ಥಿಕ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಹೆಚ್ಚು ಹಣ ಖರ್ಚು ಮಾಡಿದರೆ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿ ಸಾಗಲಿದೆ.
ಇದನ್ನೂ ಓದಿ: ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ… ಇನ್ನೂ ನಷ್ಟ ನಷ್ಟ ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಎಲ್ಲರನ್ನೂ ಖುಷಿಯಾಗಿಸಿಲ್ಲ, ಬಂಕ್ ಮಾಲೀಕರು ನಷ್ಟವಾಗಿದೆ ಎನ್ನುತ್ತಿದ್ದಾರೆ!