Bansal Story: ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ 3 ಲಕ್ಷ ಬಂಡವಾಳದಲ್ಲಿ ಶುರುವಾದ ಬಿಸಿನೆಸ್ ಇವತ್ತು 30 ಸಾವಿರ ಕೋಟಿ ರೂ ಮೌಲ್ಯದ ಕಂಪನಿ

Flipkart co-founder Binny Bansal: ಬಿನ್ನಿ ಬನ್ಸಾಲ್ ಎಂಬ ಐಐಟಿ ಪದವೀಧರ 2007ರಲ್ಲಿ ಫ್ಲಿಪ್​ಕಾರ್ಟ್ ಸ್ಥಾಪಿಸುವ ಮುನ್ನ ಗೂಗಲ್​ನಲ್ಲಿ ಕೆಲಸಕ್ಕೆ ಸೇರಿಸಲು ಎರಡು ಬಾರಿ ವಿಫಲಯತ್ನ ಮಾಡಿದ್ದರು. ಬೆಂಗಳೂರಿನ ಕೋರಮಂಗಲದ ಅಪಾರ್ಟ್​ಮೆಂಟ್​ವೊಂದರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಫ್ಲಿಪ್​ಕಾರ್ಟ್ ಆರಂಭಿಸಿದ್ದರು. ಆನ್​ಲೈನ್ ಬುಕ್ ಸ್ಟೋರ್ ಆಗಿ ಶುರುವಾದ ಫ್ಲಿಪ್​ಕಾರ್ಟ್ ಬಿಸಿನೆಸ್ ಇವತ್ತು ಸಮಗ್ರ ಆನ್​ಲೈನ್ ಮಾರ್ಕೆಟ್​ಪ್ಲೇಸ್ ಆಗಿದೆ.

Bansal Story: ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ 3 ಲಕ್ಷ ಬಂಡವಾಳದಲ್ಲಿ ಶುರುವಾದ ಬಿಸಿನೆಸ್ ಇವತ್ತು 30 ಸಾವಿರ ಕೋಟಿ ರೂ ಮೌಲ್ಯದ ಕಂಪನಿ
ಬಿನ್ನಿ ಬನ್ಸಾಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2024 | 4:16 PM

ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಹೆಸರನ್ನು ಕೆಲವರು ಕೇಳಿರಬಹುದು. ಆದರೆ, ಇವರು ಸ್ಥಾಪಿಸಿದ್ದ ಫ್ಲಿಪ್​ಕಾರ್ಟ್ ಹೆಸರು ಬಹುತೇಕ ಯುವಕರಲ್ಲಿ ಜನಜನಿತವಾದ ಹೆಸರು. ಇವರಿಬ್ಬರು ಸಹೋದರರಲ್ಲ, ಬದಲಾಗಿ ಸ್ನೇಹಿತರು. ಐಐಟಿಯಲ್ಲಿ ಇಬ್ಬರೂ ಸಹಪಾಠಿಗಳು. 2007ರಲ್ಲಿ ಇವರು ಫ್ಲಿಪ್​ಕಾರ್ಟ್ ಎಂಬ ಆನ್​ಲೈನ್ ಪ್ಲಾಟ್​ಫಾರ್ಮ್ ಅನ್ನು ಆರಂಭಿಸಿದರು. ಆದರೆ, ಇಬ್ಬರೂ ಕೂಡ ತಾವು ಆರಂಭಿಸಿದ ಸಂಸ್ಥೆಯಿಂದ ನಿರ್ಗಮಿಸಿದ್ದಾರೆ. ಅಮೆರಿಕದ ವಾಲ್​ಮಾರ್ಟ್ ಎಂಬ ದೈತ್ಯ ರೀಟೇಲ್ ಮಳಿಗೆ ಸಂಸ್ಥೆ ಫ್ಲಿಪ್​ಕಾರ್ಟ್ ಅನ್ನು 2018ರಲ್ಲಿ ಖರೀದಿಸಿದ ಬಳಿಕ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಇಬ್ಬರೂ ನಿರ್ಗಮಿಸಿದ್ದಾರೆ. ಸಚಿನ್ ಬನ್ಸಾಲ್ 2018ರಲ್ಲೇ ತಮ್ಮ ಪಾಲನ್ನು ಸಂಪೂರ್ಣವಾಗಿ ಮಾರಿ ಹೋಗಿದ್ದಾರೆ. ನವಿ ಗ್ರೂಪ್ ಎಂಬ ಫೈನಾನ್ಷಿಯಲ್ ಸರ್ವಿಸಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಇದೀಗ ಬಿನ್ನಿ ಬನ್ಸಾಲ್ ಕೂಡ ತಮ್ಮ ಪಾಲಿನ ಷೇರನ್ನು ಪೂರ್ಣವಾಗಿ ಮಾರಿದ್ದಾರೆ. ಅವರೂ ಕೂಡ ಆಪ್​ಡೋರ್ (OppDoor) ಎಂಬ ಹೊಸ ಸ್ಟಾರ್ಟಪ್ ಆರಂಭಿಸಿದ್ದಾರೆ.

ಗೂಗಲ್​ನಲ್ಲಿ ಕೆಲಸಕ್ಕೆ ಸೇರಲು ಎರಡು ಬಾರಿ ವಿಫಲಯತ್ನ ನಡೆಸಿದ್ದ ಬಿನ್ನಿ

ಬಿನ್ನಿ ಬನ್ಸಾಲ್ ಐಐಟಿ ಎಂಜಿನಿಯರ್. ಓದಿನ ಬಳಿಕ ಅವರು ಗೂಗಲ್​ನಲ್ಲಿ ಕೆಲಸಕ್ಕೆ ಸೇರಲು ಎರಡು ಬಾರಿ ಮಾಡಿದ ಯತ್ನ ವಿಫಲವಾಗಿತ್ತು. ಇವರ ಅರ್ಜಿ ಎರಡೂ ಬಾರಿಯೂ ತಿರಸ್ಕೃತವಾಗಿತ್ತು.

ಇದನ್ನೂ ಓದಿ: Richest: ಇಲಾನ್ ಮಸ್ಕ್​ರನ್ನು ಮೀರಿಸಿದ ಬರ್ನಾರ್ಡ್ ಆರ್ನಾಲ್ಟ್; ಕುತೂಹಲ ಮೂಡಿಸಿದ ಶ್ರೀಮಂತಿಕೆ ರೇಸ್

2.71 ಲಕ್ಷ ರೂ ಬಂಡವಾಳದಲ್ಲಿ ಫ್ಲಿಪ್​ಕಾರ್ಟ್

ಬಿನ್ನಿ ಬನ್ಸಾಲ್ ತಮ್ಮ ಐಐಟಿ ಸಹಪಾಠಿ ಹಾಗೂ ಸ್ನೇಹಿತ ಸಚಿನ್ ಬನ್ಸಾಲ್ ಜೊತೆ ಸೇರಿ 2007ರಲ್ಲಿ ಫ್ಲಿಪ್​ಕಾರ್ಟ್ ಶುರು ಮಾಡಿದರು. ಮೊದಲಿಗೆ ಅದರ ಬಿಸಿನೆಸ್ ಆನ್​ಲೈನ್ ಬುಕ್ ಸ್ಟೋರ್ ಆಗಿ ಮಾತ್ರವೇ ಇತ್ತು. ಬೆಂಗಳೂರಿನ ಕೋರಮಂಗಲದ ಅಪಾರ್ಟ್​ಮೆಂಟ್​ವೊಂದನ್ನು ಬಾಡಿಗೆಗೆ ಪಡೆದು ಅವರು ಫ್ಲಿಪ್​ಕಾರ್ಟ್ ಆರಂಭಿಸಿದ್ದರು. ಆರಂಭಿಕ ಬಂಡವಾಳ ಕೇವಲ 2.71 ಲಕ್ಷ ರೂ ಮಾತ್ರವೇ.

ಇವತ್ತು ಫ್ಲಿಪ್​ಕಾರ್ಟ್ 37 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಅಂದರೆ 30,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯಾಗಿದೆ. ಅಮೇಜಾನ್​ನಂತಹ ಜಾಗತಿಕ ಇಕಾಮರ್ಸ್ ದೈತ್ಯ ಸಂಸ್ಥೆಗೆ ತೀವ್ರ ಪೈಪೋಟಿ ನೀಡುವ ಮಟ್ಟಕ್ಕೆ ಅದು ಬೆಳೆದಿದೆ. ಇದರ ಶ್ರೇಯಸ್ಸು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರಿಗೆ ಸೇರಬೇಕು.

ಬಿನ್ನಿ ಬನ್ಸಾಲ್ ಇವತ್ತು 10,000 ಕೋಟಿ ರೂಗೂ ಹೆಚ್ಚು ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಭಾರತದ ಅತ್ಯಂತ ಕಿರಿಯ ಶ್ರೀಮಂತರ ಪೈಕಿ ಅವರೊಬ್ಬರೆನಿಸಿದ್ದಾರೆ.

ಇದನ್ನೂ ಓದಿ: Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ

ಫ್ಲಿಪ್​ಕಾರ್ಟ್ ಬಿಟ್ಟು ಅವರು ಆರಂಭಿಸಿರುವ OppDoor ಎಂಬುದು ಇಕಾಮರ್ಸ್ ಬ್ರ್ಯಾಂಡ್​ಗಳ ಬಿಸಿನೆಸ್ ಬೆಳೆಸಲು ಸಹಾಯ ಮಾಡುವ ಕಂಪನಿಯಾಗಿದೆ. ಸಿಂಗಾಪುರದಲ್ಲಿ ಇದರ ಮುಖ್ಯ ಕಚೇರಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ