ಆನ್‌ಲೈನ್ ಬ್ಯಾಂಕಿಂಗ್ ವಂಚನೆ
ನಿಮ್ಮ ಹೋಮ್ ಲೋನ್, ಕಾರ್ ಲೋನ್ ಅಥವಾ ಪರ್ಸನಲ್ ಲೋನ್ ಚಾಲ್ತಿಯಲ್ಲಿದ್ದರೆ ಜಾಗರೂಕರಾಗಿರಿ. ವಂಚಕರು (ಸೈಬರ್ ಕ್ರೈಮ್) ಇಎಂಐ ಪಾವತಿಯ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ವಂಚಕರು ಬ್ಯಾಂಕ್ ಅಧಿಕಾರಿಗಳೆಂದು ಬಿಂಬಿಸಿಕೊಂಡು ಗ್ರಾಹಕರನ್ನು ಸಂಪರ್ಕಿಸಿ ಅವರಿಂದ ಬ್ಯಾಂಕಿಂಗ್ ಮಾಹಿತಿ ಪಡೆದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲವು ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಬ್ಯಾಂಕುಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿವೆ. ಇಂತಹ ವಂಚನೆ ಪ್ರಕರಣಗಳನ್ನು ತಪ್ಪಿಸಲು ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕ ಎಚ್ಚರಿಕೆ ನೀಡುತ್ತಿವೆ.
ವಂಚಕರು ಹೇಗೆ ಏಮಾರಿಸುತ್ತಾರೆಂಬುದನ್ನು ಬ್ಯಾಂಕುಗಳು ನಿದರ್ಶನದ ಮೂಲಕ ತಿಳಿಸಿಕೊಡುತ್ತಿವೆ. ವಂಚಕರು ಗ್ರಾಹಕರಿಗೆ ಕರೆ ಮಾಡಿ ಇಎಂಐ ಪಾವತಿ ಮುಂದೂಡಬೇಕಾದರೆ ಮೊಬೈಲ್ಗೆ ಬಂದಿರುವ ಒಟಿಪಿಯನ್ನು ತಿಳಿಸುವಂತೆ ಕೇಳಲಾಗುತ್ತಾರಂತೆ. ಹಾಗೊಂದು ವೇಳೆ ನೀವು ಒಟಿಪಿ ನೀಡಿಬಿಟ್ಟರೆ, ಕೂಡಲೇ ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸಲಾಗಿಬಿಡುತ್ತದೆ ಎಂದು ಬ್ಯಾಂಕುಗಳು ಎಚ್ಚರಿಸಿವೆ.
ಇದನ್ನೂ ಓದಿ: Loan: ಬೆಲೆ ಏರಿಕೆಯ ಬಿಸಿಯಲ್ಲಿ ಜೀವನ ನಡೆಸಲು ಸಾಲದ ಮೊರೆಹೋದ ಜನರು; ಕುತೂಹಲಕಾರಿ ಅಂಕಿಅಂಶಗಳು ಇಲ್ಲಿವೆ
ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳು ಹೇಗೆ ನಡೆಯುತ್ತವೆ?
- ಸೈಬರ್ ಅಪರಾಧಿಗಳು ಬ್ಯಾಂಕ್ ಉದ್ಯೋಗಿಯಂತೆ ಸೋಗು ಹಾಕುತ್ತಾರೆ. ನಿಮ್ಮ ಜನ್ಮ ದಿನಾಂಕ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ತಿಳಿಸಿ ಅದನ್ನು ಖಾತ್ರಿಪಡಿಸುವಂತೆ ಹೇಳುತ್ತಾರೆ.
- ಸಾಲದ EMI ಎಷ್ಟು ಬಾಕಿ ಇದೆ ಎನ್ನುವ ವಿವರ ಪಡೆಯುತ್ತಾರೆ. ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ತಿಳಿ ಹೇಳಿ ನಿಮ್ಮ ನಂಬುಗೆ ಪಡೆಯಲು ಯತ್ನಿಸುತ್ತಾರೆ.
- ನಿಮ್ಮ ವಿಶ್ವಾಸ ಪಡೆದ ನಂತರ ಅವರು ನಿಮಗೆ ಆನ್‌ಲೈನ್ ಫಾರ್ಮ್ ಅನ್ನು ಕಳುಹಿಸುತ್ತಾರೆ. ಕಾರ್ಡ್ ಸಂಖ್ಯೆ, CVV,ಕಾರ್ಡ್ ಎಕ್ಸ್ಪೆರಿ ಡೇಟ್ ಇತ್ಯಾದಿ ವಿವರಗಳನ್ನು ಫಾರ್ಮ್ ಕೇಳುತ್ತದೆ.
- ನಂತರ OTP ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಅದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
- ನೀವು ತಪ್ಪಾಗಿ OTP ಕೊಟ್ಟರೂ, ಅವರು ನಿಮ್ಮ ಖಾತೆಯಿಂದ ಹಣ ಹಿಂಪಡೆಯಬಲ್ಲುರು.
ಇದನ್ನೂ ಓದಿ: Ola Dog: ಬೆಂಗಳೂರಿನ ಒಲಾ ಕಂಪನಿಗೆ ನಾಯಿ ಹೊಸ ಉದ್ಯೋಗಿ; ಐಡಿ ಹಂಚಿಕೊಂಡ ಸಿಇಒ
ಬ್ಯಾಂಕಿಂಗ್ ವಂಚನೆ: ಈ ವಿಷಯಗಳನ್ನು ನೆನಪಿನಲ್ಲಿಡಿ
- ನೀವು ಅಪರಿಚಿತ ವ್ಯಕ್ತಿಯಿಂದ ಕರೆ ಅಥವಾ ಸಂದೇಶವನ್ನು ಸ್ವೀಕರಿಸಿದರೆ ಯಾವುದೇ ಮಾಹಿತಿಯನ್ನು ನೀಡಬೇಡಿ.
- ಸಂದೇಶದಲ್ಲಿ ಒದಗಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.
- ಕ್ರೆಡಿಟ್ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, CVV, ಜನ್ಮ ದಿನಾಂಕ ಅಥವಾ OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
- ನಿಮಗೆ ಅರಿವಿಲ್ಲದೇ ಹಣ ವಿತ್ಡ್ರಾ ಆಗಿರುವುದು ಅಥವಾ ಬ್ಯಾಂಕ್ ಖಾತೆ ಅಪಾಯದಲ್ಲಿದೆ ಅಂತ ಅನಿಸಿದರೆ ತಕ್ಷಣವೇ 1930 ನಂಬರ್ಗೆ ಕರೆ ಮಾಡಿ.
- ಯಾವುದೇ ರೀತಿಯ ಸೈಬರ್ ವಂಚನೆಯ ಸಂದರ್ಭದಲ್ಲಿ ನೀವು cybercrime.gov.in ನಲ್ಲಿ ದೂರು ಸಲ್ಲಿಸಬಹುದು.
(ಕೃಪೆ: ಟಿವಿ9 ಗುಜರಾತಿ)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ