ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

Know the difference of good debt, bad debt: ಸಾಲ ಮಾಡಿಯಾದರೂ ತುಪ್ಪ ತಿನ್ನಿ ಎಂದು ದೊಡ್ಡವರು ಹೇಳುತ್ತಾರೆ. ಆರೋಗ್ಯಯುತ ಬದುಕಿಗೆ ಆರೋಗ್ಯಯುತ ಸಾಲ ಬೇಕಾಗುತ್ತದೆ. ಕೆಟ್ಟ ಸಾಲಗಳು ಯಾವುವು, ಒಳ್ಳೆಯ ಸಾಲಗಳು ಯಾವುವು ಎಂಬುದು ತಿಳಿದಿರಬೇಕಾಗುತ್ತದೆ. ಸಾಲವನ್ನೇ ಮಾಡುವುದಿಲ್ಲ ಎಂದರೆ ಕೆಲವೊಮ್ಮೆ ಸಂಪತ್ತು ವೃದ್ಧಿಸುವ ಅವಕಾಶ ಕೈತಪ್ಪಬಹುದು.

ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ... ಇಲ್ಲಿವೆ ಕೆಲ ಟ್ರಿಕ್ಸ್
ಸಾಲ ನಿರ್ವಹಣೆ
Image Credit source: Getty Images

Updated on: Jul 26, 2026 | 12:57 PM

ಮುಖ್ಯಾಂಶಗಳು

  • ಆರೋಗ್ಯಯುತ ಬದುಕಿಗೆ ಆರೋಗ್ಯಯುತ ಸಾಲ ಬೇಕಾಗುತ್ತದೆ.
  • ಕೆಟ್ಟ ಸಾಲಗಳು ಯಾವುವು, ಒಳ್ಳೆಯ ಸಾಲಗಳು ಯಾವುವು ಎಂಬುದು ತಿಳಿದಿರಬೇಕಾಗುತ್ತದೆ.
  • ಸಾಲವನ್ನೇ ಮಾಡುವುದಿಲ್ಲ ಎಂದರೆ ಸಂಪತ್ತು ವೃದ್ಧಿಸುವ ಅವಕಾಶ ಕೈತಪ್ಪಬಹುದು.

ಪ್ರತಿಯೊಬ್ಬರೂ ಸಂಪೂರ್ಣ ಸಾಲಮುಕ್ತರಾಗಲು (Debt-free) ಬಯಸುತ್ತಾರೆ. ಆದರೆ ಶತಾಯಗತಾಯ ಯಾವುದೇ ಸಾಲವಿಲ್ಲದೆ ಬದುಕುತ್ತೇನೆ ಎಂದು ಹಠ ಹಿಡಿಯುವುದು ಸರಿಯಾದ ನಿರ್ಧಾರವಾಗದು ಎಂದು ಹಲವು ಪರಿಣಿತರು ಹೇಳುವುದುಂಟು. ಯಾವಾಗ ಸಾಲ ಮಾಡಬೇಕು, ಯಾಕೆ ಸಾಲ ಮಾಡಬೇಕು ಎನ್ನುವ ವಿವೇಚನೆ ಇರಬೇಕು. ಸಂಪೂರ್ಣ ಸಾಲ ರಹಿತರಾಗುವುದು ಕೆಲವು ಸಂದರ್ಭಗಳಲ್ಲಿ ನಿಮ್ಮ ಆಸ್ತಿ ಹಾಗೂ ಸಂಪತ್ತು ವೃದ್ಧಿಗೆ ಅಡ್ಡಿಯಾಗಬಹುದು. ಸಾಲರಹಿತವಾಗಿ ಬದುಕುತ್ತೇನೆ ಎನ್ನುವ ಬದಲು ಸಾಲವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವ ಪ್ರಮುಖ ಹಣಕಾಸು ತಂತ್ರಗಳನ್ನು ತಿಳಿದಿರುವುದು ಉತ್ತಮ.

‘ಒಳ್ಳೆಯ ಸಾಲ’ ಮತ್ತು ‘ಕೆಟ್ಟ ಸಾಲ’ಗಳ ವ್ಯತ್ಯಾಸ ತಿಳಿದಿರಿ

  • ಒಳ್ಳೆಯ ಸಾಲ (Good Debt): ಹೋಮ್ ಲೋನ್ (ಆಸ್ತಿ ಮೌಲ್ಯ ಹೆಚ್ಚಾಗುತ್ತದೆ), ಎಜುಕೇಶನ್ ಲೋನ್ (ಸಂಪಾದನೆ ಸಾಮರ್ಥ್ಯ ಹೆಚ್ಚಿಸುತ್ತದೆ), ಉದ್ಯಮ ಸಾಲ (ಸಂಪತ್ತು ವೃದ್ಧಿಸುತ್ತದೆ).
  • ಕೆಟ್ಟ ಸಾಲ (Bad Debt): ಕ್ರೆಡಿಟ್ ಕಾರ್ಡ್ ಬಾಕಿ, ದುಬಾರಿ ಗ್ಯಾಜೆಟ್‌ಗಳು, ಐಷಾರಾಮಿ ಕಾರುಗಳು ಅಥವಾ ಆಡಂಬರದ ಜೀವನಶೈಲಿಗಾಗಿ ಮಾಡುವ ಸಾಲಗಳು.

ಹೋಮ್ ಲೋನ್ ಬೇಗ ತೀರಿಸುವುದು ಯಾವಾಗಲೂ ಜಾಣತನವಲ್ಲ

ನಿಮ್ಮ ಹೋಮ್ ಲೋನ್ ಬಡ್ಡಿ ದರ ಸುಮಾರು ಶೇ. 7% ಇದ್ದು, ನೀವು ಅದೇ ಹಣವನ್ನು ಮ್ಯೂಚುವಲ್ ಫಂಡ್ ಅಥವಾ ಇತರ ಹೂಡಿಕೆಗಳಲ್ಲಿ ಹೂಡಿದಾಗ ಶೇ. 9-10% ಲಾಭ ಸಿಗುತ್ತಿರುತ್ತದೆ ಎಂದಿಟ್ಟುಕೊಳ್ಳಿ. ಇಂಥ ಸಂದರ್ಭದಲ್ಲಿ ಗೃಹ ಸಾಲವನ್ನು ಮುಂಚಿತವಾಗಿ ತೀರಿಸುವ ಬದಲು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಆಗಬಲ್ಲುದು. ಆದರೆ, ಮಾರುಕಟ್ಟೆಯಲ್ಲಿ ಹೂಡಿಕೆ ರಿಸ್ಕ್ ಇರುತ್ತದಾದ್ದರಿಂದ ದೀರ್ಘಾವಧಿಯವರೆಗೆ ಹೂಡಿಕೆ ಇರಬೇಕು.

ಇದನ್ನೂ ಓದಿ: mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ

ಸಾಲ ವಿಮುಕ್ತ ಬದುಕಿನ ಅನುಕೂಲ, ಅನನುಕೂಲಗಳು

  • ಪ್ರಯೋಜನಗಳು: ಬಡ್ಡಿ ಕಟ್ಟುವುದು ತಪ್ಪುತ್ತದೆ, ಮಾನಸಿಕ ನೆಮ್ಮದಿ ಸಿಗುತ್ತದೆ.
  • ಅನನುಕೂಲಗಳು: ಯಾವುದೇ ಸಾಲ ಅಥವಾ ಕ್ರೆಡಿಟ್ ಹಿಸ್ಟರಿ ಇಲ್ಲದಿದ್ದರೆ ಕ್ರೆಡಿಟ್ ಸ್ಕೋರ್ (CIBIL Score) ಕಡಿಮೆಯಾಗುತ್ತದೆ. ಅಲ್ಲದೆ, ತುರ್ತು ಸಂದರ್ಭದಲ್ಲಿ ಸಂಪೂರ್ಣವಾಗಿ ನಿಮ್ಮ ಉಳಿತಾಯದ ಹಣವನ್ನೇ ಬಳಸಬೇಕಾಗುತ್ತದೆ.

‘ಮಾಡಿಫೈಡ್ ಕ್ಯಾಶ್-ಓನ್ಲಿ’ ತಂತ್ರ ಬಳಸಿ

ದೈನಂದಿನ ಬಳಕೆ ಹಾಗೂ ಗ್ಯಾಜೆಟ್‌ಗಳಿಗೆ ಸಾಲ ಮಾಡಬೇಡಿ. ಮನೆ ಅಥವಾ ಶಿಕ್ಷಣದಂತಹ ದೊಡ್ಡ ಅಗತ್ಯಗಳಿಗೆ ಮಾತ್ರ ಸಾಲವನ್ನು ಒಂದು ಆಸ್ತಿಯನ್ನಾಗಿ (Strategic Tool) ಬಳಸಿ. ಇದು ಮಾಡಿಫೈಡ್ ಕ್ಯಾಶ್-ಓನ್ಲಿ (Modified Cash-Only) ತಂತ್ರ.

‘ಸಿಂಕಿಂಗ್ ಫಂಡ್’ ನಿರ್ಮಿಸಿ

ನೀವು ಕಾರು, ಮೊಬೈಲ್ ಇತ್ಯಾದಿ ಖರೀದಿಸಬೇಕೆಂದಿದ್ದರೆ ವರ್ಷದ ಮೊದಲೇ ಪ್ಲಾನ್ ಮಾಡಿ, ಸಣ್ಣ ಸಣ್ಣ ಮೊತ್ತವನ್ನು ಕೂಡಿಡುತ್ತಾ ಹೋಗಿ. ಇದು ಸಿಂಕಿಂಗ್ ಫಂಡ್ (Sinking Fund). ಇದರಿಂದ ಬ್ಯಾಂಕ್‌ಗೆ ಬಡ್ಡಿ ಕಟ್ಟುವ ಬದಲು, ಉಳಿತಾಯದ ಹಣಕ್ಕೆ ಬಡ್ಡಿ ಗಳಿಸಬಹುದು.

28-36% ನಿಯಮ (Mortgage Rule)

ಸಾಲದ ಕಂತು ಎಷ್ಟಿರಬೇಕು ಎನ್ನುವುದಕ್ಕೆ ವಿವಿಧ ನಿಯಮಗಳಿವೆ. ಸಮರ್ಪಕ ಎನಿಸುವುದು 28-36% ನಿಯಮ. ನಿಮ್ಮ ಒಟ್ಟು ತಿಂಗಳ ಆದಾಯದಲ್ಲಿ ಸಾಲದ ಇಎಮ್‌ಐ (EMI) ಪಾವತಿಗಳು ಶೇಕಡಾ 28 ರಿಂದ 36 ರೊಳಗೆ ಇರಬೇಕು. ಇದರಲ್ಲಿ ಹೋಮ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಯಾವುದೇ ಸಾಲದ ಮರುಪಾವತಿಗಳು ಸೇರುತ್ತವೆ. ಈ ಮಿತಿ ಮೀರಿದರೆ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ.

ಇದನ್ನೂ ಓದಿ: ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ

ಸಾಲದಿಂದ ಹೊರಬರಲು ಸೂಕ್ತ ವಿಧಾನವನ್ನು ಆಯ್ಕೆಮಾಡಿ

ನಿಮ್ಮ ಮೇಲಿರುವ ಸಾಲವನ್ನು ತೀರಿಸಲು ಈ 4 ಮಾರ್ಗಗಳಲ್ಲಿ ಒಂದನ್ನು ಬಳಸಿ:

  • ಡೆಟ್ ಅವಲಾಂಚ್ (Debt Avalanche): ಅತಿ ಹೆಚ್ಚು ಬಡ್ಡಿ ಇರುವ ಸಾಲವನ್ನು ಮೊದಲು ತೀರಿಸುವುದು.
  • ಡೆಟ್ ಸ್ನೋಬಾಲ್ (Debt Snowball): ಸಣ್ಣ ಮೊತ್ತದ ಸಾಲಗಳನ್ನು ಮೊದಲು ತೀರಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು.
  • ಡೆಟ್ ಕನ್ಸಾಲಿಡೇಶನ್ (Debt Consolidation): ಎಲ್ಲಾ ಸಾಲಗಳನ್ನು ಸೇರಿಸಿ ಕಡಿಮೆ ಬಡ್ಡಿದರದ ಒಂದೇ ಸಾಲವನ್ನಾಗಿ ಮಾಡುವುದು.

ಸಾಲವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುವುದು ಗುರಿಯಾಗಬಾರದು; ಬದಲಾಗಿ ಒಳ್ಳೆಯ ಸಾಲವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂಪತ್ತು ಬೆಳೆಸುವುದು ಜಾಣತನ ಎನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us