Offer On Apple Products: ಆಪಲ್​ ಪ್ರಾಡಕ್ಟ್​ಗಳಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್​ ಕಾರ್ಡ್​, ಡೆಬಿಟ್​ ಕಾರ್ಡ್ ಕ್ಯಾಶ್​ಬ್ಯಾಕ್

ಆಪಲ್ ಉತ್ಪನ್ನಗಳ ಖರೀದಿಯನ್ನು ಕೊಟಕ್ ಮಹೀಂದ್ರಾ ಬ್ಯಾಂಕ್​ನ ಡೆಬಿಟ್​ಕಾರ್ಡ್​, ಕ್ರೆಡಿಟ್​ ಕಾರ್ಡ್ ಬಳಸಿ ಮಾಡುವಂಥವರಿಗೆ ಕ್ಯಾಶ್​ಬ್ಯಾಕ್​ ಆಫರ್​ ಘೋಷಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.

Offer On Apple Products: ಆಪಲ್​ ಪ್ರಾಡಕ್ಟ್​ಗಳಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್​ ಕಾರ್ಡ್​, ಡೆಬಿಟ್​ ಕಾರ್ಡ್ ಕ್ಯಾಶ್​ಬ್ಯಾಕ್
ಸಾಂದರ್ಭಿಕ ಚಿತ್ರ

ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಗುರುವಾರ ಗ್ರಾಹಕರಿಗೆ ಆಪಲ್ ಉತ್ಪನ್ನಗಳ ಮೇಲಿನ ಇಎಂಐ ಆಫರ್​ಗಳಿಗೆ ಕ್ಯಾಶ್​ಬ್ಯಾಕ್ ಘೋಷಣೆ ಮಾಡಲಾಗಿದೆ. ಐಫೋನ್​, ಐಪ್ಯಾಡ್​, ಮ್ಯಾಕ್​ಬುಕ್​, ಆಪಲ್ ವಾಚ್, ಏರ್​ಪಾಡ್ಸ್ ಮತ್ತು ಹೋಮ್​ಪಾಡ್ಸ್​ಗೆ ಈ ಆಫರ್ ಅನ್ವಯಿಸುತ್ತದೆ. ಕೊಟಕ್ ಬ್ಯಾಂಕ್​ನ ಕ್ರೆಡಿಟ್​ ಕಾರ್ಡ್ ಬಳಸಿ ಮಾಡುವ ಇಎಂಐ/ನಾನ್ ಇಎಂಐ ವಹಿವಾಟುಗಳಿಗೆ ಮತ್ತು ಡೆಬಿಟ್ ಕಾರ್ಡ್ ಇಎಂಐ/ನಾನ್ ಇಎಂಐ ವಹಿವಾಟುಗಳಿಗೆ ಆಫರ್ ಅನ್ವಯ ಆಗುತ್ತದೆ. ಉದಾಹರಣೆಗೆ, ಐಫೋನ್ 13 ಹಾಗೂ ಐಫೋನ್ 13 ಮಿನಿ ಮೇಲೆ 6000 ರೂಪಾಯಿ ಕ್ಯಾಶ್​ಬ್ಯಾಕ್ ಅಥವಾ ಆರು ತಿಂಗಳ ನೋ ಕಾಸ್ಟ್ ಇಎಂಐ ಅನ್ನು ಕಾರ್ಡ್​ದಾರರು ಪಡೆಯುತ್ತಾರೆ.

ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 12ರ ಮೇಲೆ ಗ್ರಾಹಕರಿಗೆ 5000 ರೂಪಾಯಿ ಕ್ಯಾಶ್​ಬ್ಯಾಕ್ ದೊರೆಯುತ್ತದೆ. ಗರಿಷ್ಠ ಕ್ಯಾಶ್​ಬ್ಯಾಕ್ ಮ್ಯಾಕ್​ಬುಕ್ ಪ್ರೊ (ಹೊಸದು) ಮೇಲೆ ರೂ. 10,000 ಸಿಗುತ್ತದೆ. ಇಯರ್ ಪಾಡ್ಸ್ ಮೇಲೆ ಆಫರ್ ರೂ. 1000ದಿಂದ ರೂ. 2500 ದೊರೆಯುತ್ತದೆ. ಸ್ಮಾರ್ಟ್​ವಾಚ್​ಗಳ ಮೇಲೆ 1ರಿಂದ 3 ಸಾವಿರ ರೂಪಾಯಿ ಕ್ಯಾಶ್​ಬ್ಯಾಕ್ ಆಫರ್ ಇದೆ. ಕ್ಯಾಶ್​ಬ್ಯಾಕ್ ಆಫರ್​ಗಳು ಕಾರ್ಡ್ ಸ್ವೈಪ್​ಗೆ ಹಾಗೂ ಆಫ್​ಲೈನ್ ಮತ್ತು ಆನ್​ಲೈನ್​ನಲ್ಲಿ ಮಾಡಿದ ಕಾರ್ಡ್​ನ ಇಎಂಐ ವಹಿವಾಟುಗಳಿಗೆ ಅನ್ವಯ ಆಗುತ್ತವೆ ಎಂದು ಬ್ಯಾಂಕ್ ಹೇಳಿದೆ. ಅಂದಹಾಗೆ ಈ ಆಫರ್​ ಸಿಗಬೇಕು ಅಂದರೆ, ಆಪಲ್​ನ ಅಧಿಕೃತ ಮಾರಾಟಗಾರರು, ಇ-ಕಾಮರ್ಸ್ ವೆಬ್​ಸೈಟ್​ಗಳಾದ ಅಮೆಜಾನ್​, ಟಾಟಾ ಕ್ಲಿಕ್​ನಂಥ ಕಡೆ ಖರೀದಿಸಬೇಕು. ಜನವರಿ 1ರಿಂದ ಮಾರ್ಚ್ 31ರ ವರೆಗೆ ಆಫರ್ ಇದೆ.

“ಆಪಲ್ ಉತ್ಪನ್ನಗಳ ಮೇಲಿನ ನಮ್ಮ ಆಫರ್ KMBL ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ. ನಮ್ಮ ಗ್ರಾಹಕರಿಗೆ ಪ್ರೀಮಿಯಂ ಉತ್ಪನ್ನಗಳನ್ನು ಸುಲಭ ಮತ್ತು ಕೈಗೆಟುಕುವ ಇಎಂಐಗಳಲ್ಲಿ ಒದಗಿಸುತ್ತದೆ. ಆಪಲ್ ಉತ್ಪನ್ನಗಳ ಮೇಲಿನ ಕ್ಯಾಶ್‌ಬ್ಯಾಕ್‌ಗಳು ಗರಿಷ್ಠ ಉಳಿತಾಯವನ್ನು ಆನಂದಿಸುವಂತೆ ಮಾಡುತ್ತದೆ. ಇದರೊಂದಿಗೆ ನಮ್ಮ ಗ್ರಾಹಕರು 2022ರ ಹೊಸ ವರ್ಷದ ಆರಂಭವನ್ನು ಆನಂದಿಸುತ್ತಾರೆ ಎಂದು ನಾವು ಭಾವಿಸುತ್ತೇವೆ!,” ಎಂಬುದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಗ್ರಾಹಕ, ವಾಣಿಜ್ಯ ಮತ್ತು ವೆಲ್ತ್ ಮಾರ್ಕೆಟಿಂಗ್ ಜಂಟಿ ಅಧ್ಯಕ್ಷ ಎಲಿಜಬೆತ್ ವೆಂಕಟರಾಮನ್ ಹೇಳಿದರು.

ಇದನ್ನೂ ಓದಿ: Apple CEO Salary: ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ವೇತನ ಎಷ್ಟು ನೂರು ಕೋಟಿ ಗೊತ್ತಾ?

Published On - 6:34 pm, Thu, 13 January 22

Click on your DTH Provider to Add TV9 Kannada