
ನವದೆಹಲಿ, ಆಗಸ್ಟ್ 14: ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು (NBFCs) ಸಣ್ಣ ಸಾಲಗಾರರಿಗೆ ವಿಧಿಸುವ ಬಡ್ಡಿ ದರ ಮತ್ತು ಹೆಚ್ಚುವರಿ ಶುಲ್ಕಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಗಳನ್ನು ಪ್ರಸ್ತಾವಿಸಿದೆ. ಸಾಲದ ಮೇಲಿನ ಅತಿಯಾದ ದರ ಅಥವಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಹಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರಿಗೆ ವರ್ಷಕ್ಕೆ ಶೇ. 36ರವರೆಗಿನ ಬಡ್ಡಿದರಲ್ಲಿ ವೈಯಕ್ತಿಕ ಸಾಲ ನೀಡುವುದುಂಟು. ಕೆಲ ಎನ್‌ಬಿಎಫ್‌ಸಿಗಳು ಇನ್ನೂ ಹೆಚ್ಚಿನ ಬಡ್ಡಿದರ ನಿಗದಿ ಮಾಡುವುದುಂಟು. ಫೈನಾನ್ಷಿಯರ್ಗಳ ರೀತಿಯಲ್ಲಿ ಈ ಹಣಕಾಸು ಸಂಸ್ಥೆಗಳು ಗ್ರಾಹಕರಿಂದ ಬಹುತೇಕ ಸುಲಿಗೆ ಮಾಡುತ್ತವೆ. ಆರ್‌ಬಿಐ ಪ್ರಸ್ತಾಪಿಸಿದ ಈ ನಿಯಮಗಳು ಜಾರಿಗೆ ಬಂದಲ್ಲಿ ಈ ಸುಲಿಗೆಗಳಿಗೆ ಕಡಿವಾಣ ಬಿದ್ದೀತು. ಬ್ಯಾಂಕುಗಳು ಮಿತಿ ಮೀರಿದ ಬಡ್ಡಿದರದಲ್ಲಿ ಸಾಲ ನೀಡಲಾಗುವುದಿಲ್ಲ.
ಇದನ್ನೂ ಓದಿ: ಏರ್ಟೆಲ್ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ
ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್
ಈ ಕ್ರಮವು ಸಾಲಗಾರರಿಗೆ, ವಿಶೇಷವಾಗಿ ಸಣ್ಣ ಪ್ರಮಾಣದ ಸಾಲ ಪಡೆಯುವವರಿಗೆ ಹೆಚ್ಚಿನ ರಕ್ಷಣೆ ನೀಡಲಿದೆ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅತಿಯಾದ ಬಡ್ಡಿ ಅಥವಾ ಗುಪ್ತ ಶುಲ್ಕಗಳನ್ನು ವಿಧಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ