
ನವದೆಹಲಿ, ಸೆಪ್ಟೆಂಬರ್ 1: ಪ್ರಸಕ್ತ ಹಣಕಾಸು ವರ್ಷದ (2026-27) ಮೊದಲ 5 ತಿಂಗಳುಗಳಲ್ಲೇ ಮಾರುತಿ ಸುಜುಕಿ (Maruti Suzuki) 10 ಲಕ್ಷ ವಾಹನ ಮಾರಾಟದ ಮೈಲಿಗಲ್ಲು ದಾಟಿದೆ. 2026ರ ಏಪ್ರಿಲ್ನಿಂದ ಆಗಸ್ಟ್ವರೆಗಿನ ಐದು ತಿಂಗಳಲ್ಲಿ ಭಾರತದ ನಂಬರ್ ಒನ್ ಆಟೊಮೊಬೈಲ್ ಸಂಸ್ಥೆ ಒಟ್ಟು 11,43,365 ವಾಹನಗಳನ್ನು ಮಾರಾಟ ಮಾಡಿದೆ. ಹ್ಯೂಂಡಾಯ್ ಮತ್ತು ಟಾಟಾ ಮೋಟರ್ಸ್ ಸಂಸ್ಥೆಗಳೂ ಕೂಡ ಈ ಅವಧಿಯಲ್ಲಿ ಉತ್ತಮ ಸಂಖ್ಯೆಯಲ್ಲಿ ವಾಹನಗಳನ್ನು ಮಾರಲು ಯಶಸ್ವಿಯಾಗಿವೆ.
2026ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಒಟ್ಟು 2,19,220 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ (YoY) ಶೇ. 21 ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1,80,683 ಯುನಿಟ್ ಮಾರಾಟವಾಗಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ 1.80 ಲಕ್ಷ ವಾಹನಗಳನ್ನು ಮಾರಿದೆ. ಇತರ ತಯಾರಕರಿಗೆ (ಒಇಎಂ) 5,298 ಯುನಿಟ್‌ಗಳನ್ನು ಮಾರಿದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಅದು ಮಾರಿದ ಯುನಿಟ್ಗಳ ಸಂಖ್ಯೆ 12 ಲಕ್ಷ ಸಮೀಪಕ್ಕೆ ಹೋಗಿದೆ.
ಇದನ್ನೂ ಓದಿ: ಜಾಗತಿಕ ರಂಗದಲ್ಲಿ ಭಾರತದ ಹೊಳಪು: ಶೇ. 7.8 ಜಿಡಿಪಿ ವೃದ್ಧಿಯನ್ನು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್
ಇನ್ನು, ದೇಶೀಯವಾಗಿ ಮಾರುತಿ ಸುಜುಕಿಯ ಪ್ರಯಾಣಿಕ ವಾಹನಗಳ (PV) ಮಾರಾಟವು ಶೇ. 35 ರಷ್ಟು ಹೆಚ್ಚಾಗಿ 1,76,971 ಯುನಿಟ್ ತಲುಪಿದೆ. ಇದರಲ್ಲಿ ಯುಟಿಲಿಟಿ ವಾಹನಗಳ (SUV) ಮಾರಾಟವೇ 79,045 ಯುನಿಟ್‌ಗಳಾಗಿದೆ.
ಹುಂಡೈ ಮೋಟಾರ್ ಇಂಡಿಯಾ ಸಂಸ್ಥೆಯು (Hyundai Motor India) ಆಗಸ್ಟ್ ತಿಂಗಳಲ್ಲಿ 54,396 ಯುನಿಟ್‌ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಅದರ ಸಾರ್ವಕಾಲಿಕ ಅತ್ಯಧಿಕ ಆಗಸ್ಟ್ ಮಾರಾಟದ ದಾಖಲೆ ಬರೆದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟವು ಶೇ. 23.6 ರಷ್ಟು ಹೆಚ್ಚಾಗಿದೆ. ರಫ್ತು ಸೇರಿದಂತೆ ಸಂಸ್ಥೆಯ ಒಟ್ಟು ಮಾರಾಟ ಶೇಕಡಾ 8.8 ರಷ್ಟು ಹೆಚ್ಚಾಗಿ 65,796 ಯುನಿಟ್ ತಲುಪಿದೆ.
ಇದನ್ನೂ ಓದಿ: ಆಗಸ್ಟ್ನಲ್ಲೂ ಸಖತ್ ಜಿಎಸ್ಟಿ ಸಂಗ್ರಹ; ಕಳೆದ ವರ್ಷದಕ್ಕಿಂತ ಶೇ. 14.8ರಷ್ಟು ಹೆಚ್ಚು ತೆರಿಗೆ ಕಲೆಕ್ಷನ್
ಟಾಟಾ ಮೋಟಾರ್ಸ್ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟು 67,753 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇ. 56 ರಷ್ಟು ಬೆಳವಣಿಗೆ ದಾಖಲಿಸಿದೆ.
ವಾಣಿಜ್ಯ ವಾಹನ ವಿಭಾಗದಲ್ಲಿ ಟಾಟಾದ ದೇಶೀಯ ಮಾರಾಟವು ಶೇ. 33 ರಷ್ಟು ಏರಿಕೆಯಾಗಿ 36,619 ಯುನಿಟ್‌ಗಳನ್ನು ತಲುಪಿದೆ. ಟಾಟಾದ ಇವಿ ಮಾರಾಟವು ಶೇ. 94 ರಷ್ಟು ಭಾರೀ ಏರಿಕೆ ಕಂಡು, 16,549 ಯುನಿಟ್ ತಲುಪಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ