AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ರಂಗದಲ್ಲಿ ಭಾರತದ ಹೊಳಪು: ಶೇ. 7.8 ಜಿಡಿಪಿ ವೃದ್ಧಿಯನ್ನು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್

Nirmala Sitharaman happy with 7.8pc GDP growth: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಹೆಚ್ಚಿದ್ದು, ನಿರೀಕ್ಷೆಮೀರಿದ ಬೆಳವಣಿಗೆ ಹೊಂದಿದೆ. ಜಾಗತಿಕವಾಗಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಮುಂಚೂಣಿಯಲ್ಲಿ ಮುಂದುವರಿದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ರಂಗದಲ್ಲಿ ಭಾರತದ ಹೊಳಪು ಹೆಚ್ಚಿದೆ ಎಂದು ಬಣ್ಣಿಸಿದ್ದಾರೆ.

ಜಾಗತಿಕ ರಂಗದಲ್ಲಿ ಭಾರತದ ಹೊಳಪು: ಶೇ. 7.8 ಜಿಡಿಪಿ ವೃದ್ಧಿಯನ್ನು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2026 | 3:39 PM

Share

ನವದೆಹಲಿ, ಸೆಪ್ಟೆಂಬರ್ 1: ಜಾಗತಿಕ ಸವಾಲುಗಳು ಮತ್ತು ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಭಾರತವು 2026-27ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಸಾಧಿಸಿರುವ ಶೇ. 7.8 ರಷ್ಟು ಭಾರಿ ಜಿಡಿಪಿ (GDP) ಬೆಳವಣಿಗೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹರ್ಷದಿಂದ ಶ್ಲಾಘಿಸಿದ್ದಾರೆ. “ಭಾರತವು ಜಾಗತಿಕ ರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಎದ್ದು ಕಾಣುತ್ತಿದೆ” ಎಂದು ಅವರು ಬಣ್ಣಿಸಿದ್ದಾರೆ.

ಈ ದೃಢವಾದ ಆರ್ಥಿಕ ಬೆಳವಣಿಗೆಯ ಕ್ರೆಡಿಟ್ ಸಂಪೂರ್ಣವಾಗಿ ಭಾರತದ 140 ಕೋಟಿ ಪ್ರಜೆಗಳ ಕಠಿಣ ಪರಿಶ್ರಮ ಮತ್ತು ದೇಶದ ಉದ್ಯಮಶೀಲತೆಗೆ ಸಲ್ಲುತ್ತದೆ ಎಂದು ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್​ನಲ್ಲೂ ಸಖತ್ ಜಿಎಸ್​ಟಿ ಸಂಗ್ರಹ; ಕಳೆದ ವರ್ಷದಕ್ಕಿಂತ ಶೇ. 14.8ರಷ್ಟು ಹೆಚ್ಚು ತೆರಿಗೆ ಕಲೆಕ್ಷನ್

ಎನ್‌ಡಿಎ ಸರ್ಕಾರದ ಸುಧಾರಣೆಗಳು

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ತಂದ ಆರ್ಥಿಕ ಸುಧಾರಣೆಗಳು, ಸಕಾಲಿಕ ಆರ್ಥಿಕ ನಿರ್ವಹಣೆ, ಡಿಜಿಟಲೀಕರಣ ಹಾಗೂ ಮೂಲಸೌಕರ್ಯ ಹೂಡಿಕೆಗಳು ಇಂದು ಧನಾತ್ಮಕ ಫಲಿತಾಂಶವನ್ನು ನೀಡುತ್ತಿವೆ ಎಂದು ಹಣಕಾಸು ಸಚಿವೆ ಉಲ್ಲೇಖಿಸಿದ್ದಾರೆ.

ಜಾಗತಿಕ ಶಕ್ತಿಗಳಿಗೆ ಸೆಡ್ಡು

ಚೀನಾ (4,3%), ಅಮೆರಿಕ (2.1%), ಮತ್ತು ಪ್ರಮುಖ ಯುರೋಪಿಯನ್ ರಾಷ್ಟ್ರಗಳ ಪ್ರಗತಿಗೆ ಹೋಲಿಸಿದರೆ ಭಾರತದ 7.8% ಬೆಳವಣಿಗೆಯ ದರವು ಸಾಕಷ್ಟು ಮುಂದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಗರಿಷ್ಠ ಬೆಳವಣಿಗೆಯ ವೇಗ ದಾಖಲಿಸಿರುವುದು. ಕೆಲವಾರು ವರ್ಷಗಳಿಂದಲೂ ಭಾರತ ಮುಂಚೂಣಿಯಲ್ಲಿರುವುದು ವಿಶೇಷ. ಸದ್ಯದ ಜಾಗತಿಕ ಮಟ್ಟದಲ್ಲಿ ತೈಲ ದರ ಏರಿಕೆ ಮತ್ತು ಪೂರೈಕೆ ಸರಪಳಿಯ ಬಿಕ್ಕಟ್ಟುಗಳ ನಡುವೆಯೂ ಭಾರತ ತನ್ನ ಆರ್ಥಿಕ ದೃಢತೆಯನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ: GDP Growth: ಜಾಗತಿಕ ಯುದ್ಧ, ಪೂರೈಕೆ ಬಿಕ್ಕಟ್ಟಿನ ನಡುವೆಯೂ ಶೇ.7.8ರಷ್ಟು ಜಿಡಿಪಿ ಜಿಗಿತ: ಟೀಕಾಕಾರರಿಗೆ ಪ್ರಧಾನಿ ಮೋದಿ ತಿರುಗೇಟು

ವಿಕಸಿತ ಭಾರತದತ್ತ ಹೆಜ್ಜೆ

ತಯಾರಿಕಾ ವಲಯದಲ್ಲಿ ಶೇ. 9.2 ಹಾಗೂ ಜಿವಿಎ (GVA) ಯಲ್ಲಿ ಶೇ. 8.2 ರಷ್ಟು ಹೆಚ್ಚಳ ಆಗಿರುವುದು, ಭಾರತವು ‘ವಿಕಸಿತ ಭಾರತ 2047’ ಗುರಿಯತ್ತ ಬಲವಾದ ಅಡಿಪಾಯದೊಂದಿಗೆ ಸಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us