
ವಾಷಿಂಗ್ಟನ್, ಆಗಸ್ಟ್ 10: ವಿದೇಶಗಳಿಗೆ ವ್ಯಾಸಂಗಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ವಿದೇಶಗಳಲ್ಲಿರುವ ಶೇ. 81ರಷ್ಟು ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ನಂತರ ಭಾರತಕ್ಕೇ ಮರಳಲು ನಿರ್ಧರಿಸಿದ್ದಾರೆ. ಆಕ್ಸ್‌ಫರ್ಡ್ ಇಂಟರ್ನ್ಯಾಷನಲ್ನ ಸ್ಟುಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್ (Oxford International third Student Global Mobility Index) ಈ ಸಮೀಕ್ಷೆಯನ್ನು ನಡೆಸಿ ವರದಿ ಬಿಡುಗಡೆ ಮಾಡಿದೆ.
ಅಮೆರಿಕಕ್ಕೆ ಹೋಗಿ ಓದು ಮುಗಿಸಿದ ಬಳಿಕ ಒಂದೆರಡು ವರ್ಷ ಐಚ್ಛಿಕವಾದ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಅವಕಾಶ ಬಳಸಿಕೊಂಡು, ಆ ಅವಧಿಯಲ್ಲಿ ಎಚ್1ಬಿ ವೀಸಾ ಗಿಟ್ಟಿಸಲು ಯತ್ನಿಸುವುದು, ಅದು ಯಶಸ್ವಿಯಾದಲ್ಲಿ ಕೆಲಸಕ್ಕೆ ಸೇರಿ ವೃತ್ತಿಜೀವನ ಆರಂಭಿಸುವುದು, ನಂತರ ಸಾಧ್ಯವಾದರೆ ಅಲ್ಲಿಯೇ ಸೆಟಲ್ ಆಗುವುದು, ಇವಿಷ್ಟೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳ ಪೂರ್ವಭಾವಿ ಪ್ಲಾನ್ ಆಗಿರುತ್ತದೆ. ಈಗ ಹೆಚ್ಚಿನ ಭಾರತೀಯ ಯುವಜನರು ಅಮೆರಿಕದಿಂದ ವಾಪಸ್ ಬರಲು ಹಾತೊರೆಯುತ್ತಿರುವುದು ಯಾಕೆ?
ಅಮೆರಿಕ (US) ಸರ್ಕಾರವು ವಿದೇಶಿ ವಿದ್ಯಾರ್ಥಿಗಳು ಮತ್ತು ಕೌಶಲಯುಕ್ತ ಉದ್ಯೋಗಿಗಳ ಮೇಲಿನ ವೀಸಾ ಹಾಗೂ ಇಮಿಗ್ರೇಷನ್ (ವಲಸೆ) ನಿಯಮಗಳನ್ನು ತೀವ್ರವಾಗಿ ಕಠಿಣಗೊಳಿಸಿರುವುದೇ ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎಂದು ಆಕ್ಸ್‌ಫರ್ಡ್ ವರದಿಯು ಹೇಳಿದೆ. ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೆಚ್ಚಾಗಿ ಹೋಗುವುದು ಅಮೆರಿಕಕ್ಕೆ. ಹೀಗಾಗಿ, ಅಮೆರಿಕದಲ್ಲಿ ಬದಲಾಗುತ್ತಿರುವ ನೀತಿಗಳು ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳನ್ನು ಬದಲಿಸಿರಬಹುದು.
ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?
ಆಕ್ಸ್‌ಫರ್ಡ್ ಇಂಟರ್‌ನ್ಯಾಷನಲ್ ಪ್ರಕಟಿಸಿರುವ 3ನೇ ‘ಸ್ಟೂಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್’ (SGMI) ಸಮೀಕ್ಷೆಯು ಈ ಕೆಳಗಿನ ಅಂಶಗಳನ್ನು ಗಮನಿಸಿದೆ:
ಇದನ್ನೂ ಓದಿ: UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ
ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ಸರ್ಕಾರವು ಜಾರಿಗೆ ತಂದಿರುವ ಕಠಿಣ ನಿಯಮಗಳು ಭಾರತೀಯ ವಿದ್ಯಾರ್ಥಿಗಳ ಮೇಲಿನ ಸಾಂಪ್ರದಾಯಿಕ ‘ವ್ಯಾಸಂಗ-ಉದ್ಯೋಗ-ನೆಲೆಸುವಿಕೆ’ ಸರಣಿಯನ್ನು ಕಷ್ಟಕರವಾಗಿಸಿವೆ:
ಅಮೆರಿಕ ವಿಧಿಸಿರುವ ಈ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ F-1 ವೀಸಾಗಳ ಸಂಖ್ಯೆಯಲ್ಲಿ ಶೇಕಡಾ 60 ರಿಂದ 69 ರಷ್ಟು ಭಾರಿ ಕುಸಿತ ಕಂಡಿದೆ. ಅಮೆರಿಕದಲ್ಲಿ ಸದ್ಯ 3.72 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದು, ಹೊಸ ನಿಯಮಗಳಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಭಾರತದಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ